ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Samsung Galaxy ಸರಣಿಯ A55 5G, A35 5G ಬಿಡುಗಡೆ

Published 12 ಮಾರ್ಚ್ 2024, 8:04 IST
Last Updated 12 ಮಾರ್ಚ್ 2024, 8:04 IST
ಅಕ್ಷರ ಗಾತ್ರ

ಬೆಂಗಳೂರು: ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಮುಂಚೂಣೆಯಲ್ಲಿರುವ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿಯು ಗ್ಯಾಲಕ್ಸಿ ಸರಣಿಯ Galaxy A55 5G and Galaxy A35 5G ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಇಂದು ಬಿಡುಗಡೆ ಮಾಡಿದೆ.

ಎರಡರಲ್ಲೂ ನಾಕ್ಸ್ ವಾಲ್ಟ್‌ನಂತಹ ವ್ಯಾಪಕವಾದ ಭದ್ರತಾ ವೈಶಿಷ್ಟ್ಯಗಳಿದ್ದು, ಗ್ಯಾಲಕ್ಸಿಯ ಪ್ರಮುಖ ಕ್ಯಾಮೆರಾ ಆವಿಷ್ಕಾರಗಳಿಂದ ಪ್ರೇರಿತವಾದ ಹೊಸ ಫೋಟೊಗ್ರಫಿ ಸಾಮರ್ಥ್ಯ ಮತ್ತು ವಿಷನ್ ಬೂಸ್ಟರ್‌ ಇದರಲ್ಲಿದೆ.

ವರ್ಧಿತ ನೈಟೋಗ್ರಫಿಯೊಂದಿಗೆ Galaxy A55 5G ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿಯೂ ಸಹ ಸ್ಪಷ್ಟ ಮತ್ತು ಹೆಚ್ಚು ರೋಮಾಂಚಕ ಚಿತ್ರಗಳನ್ನು ತೆಗೆಯುತ್ತದೆ. ಇದರಲ್ಲಿ ​​ಸುಧಾರಿತ AI ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐಎಸ್‌ಪಿ) ಇದೆ. Galaxy A ಸರಣಿಯಲ್ಲಿ ಹಿಂದೆಂದೂ ನೋಡಿರದ ಅತ್ಯದ್ಭುತ ಚಿತ್ರಗಳನ್ನು ಕಡಿಮೆ ಬೆಳಕಿನಲ್ಲೂ ಇದು ನೀಡುತ್ತದೆ.

ನೈಟ್ ಪೋರ್ಟ್ರೇಟ್ ಮೋಡ್, 12 ಬಿಟ್ ಎಚ್‌ಡಿಆರ್‌ ವಿಡಿಯೊ ವೈಶಿಷ್ಟ್ಯಗಳಿಂದ ಪ್ರತಿ ವಿಡಿಯೊ ಅದ್ಬುತವಾಗಿ ಕಾಣಲು ಸಾಧ್ಯವಾಗುತ್ತದೆ.

Galaxy A55 5G ವೈಶಿಷ್ಟ್ಯಗಳು

ಡಿಸ್‌ಪ್ಲೆ: 6.6-ಇಂಚಿನ FHD+ ಸೂಪರ್ ಅಮೋಲೆಡ್ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, ವಿಷನ್ ಬೂಸ್ಟರ್, ಆಯತಾಕಾರದ 6.6 ಇಂಚಿನ ಸ್ಕ್ರೀನ್ ಇದೆ.

ಡೈಮೆನ್ಷನ್ ಮತ್ತು ತೂಕ: 161.1 x 77.4 x 8.2mm, ಡೈಮೆನ್ಷಷನ್‌ ಸಿದ್ಧಗೊಂಡಿರುವ ಈ ಫೋನ್, 213 ಗ್ರಾಂ ತೂಕವಿದೆ.

ಕ್ಯಾಮೆರಾ

*12 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಒಳಗೊಂಡಿದ್ದು, 50 ಎಂಪಿ ಮೇನ್ ಕ್ಯಾಮೆರಾದಲ್ಲಿ ಲೆನ್ಸ್‌ನ ಅಪಾರ್ಚರ್ F2.2ವರೆಗೆ ಇದೆ. 5 ಎಂಪಿ ಮ್ಯಾಕ್ರೊ ಕ್ಯಾಮೆರಾದಲ್ಲಿ ಅಪಾರ್ಚರ್ F1.8 ವರೆಗೆ ಇದೆ. 32MP ಫ್ರಂಟ್ ಕ್ಯಾಮೆರಾದಲ್ಲಿ ಅಪಾರ್ಚರ್ F2.4ವರೆಗೆ ಇದೆ.

ಮೆಮೋರಿ ಮತ್ತು ಸ್ಟೋರೇಜ್: 8GB + 128GB, 8GB + 256GB, 12GB + 256GBಗಳಲ್ಲಿ ಲಭ್ಯವಿದೆ.

ಬ್ಯಾಟರಿ: 5,000 ಎಂಎಎಚ್‌

ಸೆಕ್ಯುರಿಟಿ: Samsung Knox

ಗ್ಯಾಲಕ್ಸಿ A35 5G ಸ್ಮಾರ್ಟ್‌ಫೋನ್

ಡಿಸ್‌ಪ್ಲೇ: 6.6 ಇಂಚಿನ FHD+ ಸೂಪರ್ ಅಮೋಲೆಡ್ ಡಿಸ್‌ಪ್ಲೆ. 120Hz ವರೆಗೆ ರಿಫ್ರೆಶ್ ರೇಟ್, ವಿಷನ್ ಬೂಸ್ಟರ್‌, 6.6 ಇಂಚಿನ ಆಯತಾಕಾರದ ಸ್ಕ್ರೀನ್.

ಡೈಮೆನ್ಷನ್ ಮತ್ತು ತೂಕ 161.7 x 78.0 x 8.2mm ಡೈಮೆನ್ಷನ್‌ನ ಈ ಫೋನ್, 209 ಗ್ರಾಂ ತೂಕವಿದೆ.

ಕ್ಯಾಮೆರಾ

8 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಇದೆ.

50 ಎಂಪಿ ಮುಖ್ಯ ಕ್ಯಾಮೆರಾದಲ್ಲಿ F2.2 ಅಪಾರ್ಚರ್ ಇದೆ. 5 ಎಂಪಿ ಮ್ಯಾಕ್ರೊ ಕ್ಯಾಮೆರಾದಲ್ಲಿ ಅಪಾರ್ಚರ್ F1.8 ವರೆಗೆ ಇದೆ.

13 ಎಂ‍ಪಿಯ ಮತ್ತೊಂದು ಫ್ರಂಟ್ ಕ್ಯಾಮೆರಾದಲ್ಲಿ ಅಪಾರ್ಚರ್ F2.4 ವರೆಗೆ ಇದೆ.

ಮೆಮೊರಿ ಮತ್ತು ಸ್ಟೋರೇಜ್: 6GB + 128GB, 8GB + 128GB, 8GB + 256GB ಇದೆ.

ಬ್ಯಾಟರಿ: 5,000 ಎಂಎಎಚ್

ಸೆಕ್ಯುರಿಟಿ: Samsung Knox

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT