ಕೋವಿಡ್ ಕಾಲದಲ್ಲಿ ಎಲೆಕ್ಟ್ರಾನಿಕ್ ಸಾಧನಗಳಿಗೂ ಸೋಂಕು ತಗುಲದಂತೆ ನೋಡಿಕೊಂಡರೆ ಅವುಗಳನ್ನು ಬಳಸುವವರೂ ಸುರಕ್ಷಿತವಾಗಿರಬಹುದು ಎಂಬ ಕಾರಣಕ್ಕಾಗಿ, ಇದೀಗ ಸ್ಮಾರ್ಟ್ಫೋನ್, ಸ್ಮಾರ್ಟ್ ವಾಚ್ ಮುಂತಾದವುಗಳ ಸೋಂಕು ನಿವಾರಣೆಗೆ ಸ್ಯಾಮ್ಸಂಗ್ ಹೊಸ ಸಾಧನವೊಂದನ್ನು ಬಿಡುಗಡೆ ಮಾಡಿದೆ. ಯುವಿ ಸ್ಟೆರಿಲೈಸರ್ ಎಂಬ ಈ ಉಪಕರಣವು ಹತ್ತು ನಿಮಿಷಗಳಲ್ಲಿ ಫೋನ್, ವಾಚ್, ಇಯರ್ ಬಡ್ಸ್ ಮುಂತಾದವುಗಳ ಸೋಂಕು ನಿವಾರಣೆ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇಂಟರ್ಟೆಕ್ ಮತ್ತು ಎಸ್ಜಿಎಸ್ ಎಂಬ ಎರಡು ಸ್ವತಂತ್ರ ಪ್ರಮಾಣೀಕರಣ ಸಂಸ್ಥೆಗಳು ಮಾಡಿರುವ ಪರೀಕ್ಷೆಗಳ ಪ್ರಕಾರ, ಈ ನೇರಳಾತೀತ (ಯುವಿ) ಸ್ಟೆರಿಲೈಸರ್ಗಳು ಇ.ಕೋಲಿ, ಸ್ಟೇಫಿಲೋಕೋಕಸ್ ಆರಿಯಸ್ ಮತ್ತು ಕ್ಯಾಂಡಿಡಾ ಅಲ್ಬಿಕನ್ಸ್ ಸೇರಿದಂತೆ ಶೇ.99 ಬ್ಯಾಕ್ಟೀರಿಯಾ ಮತ್ತು ರೋಗಾಣುಗಳನ್ನು ನಿವಾರಿಸುತ್ತದೆ ಎಂದು ಸ್ಯಾಮ್ಸಂಗ್ ಹೇಳಿದೆ.

ಬ್ಯಾಕ್ಟೀರಿಯಾ ಮತ್ತು ರೋಗಾಣುಗಳು ಹರಡುವುದನ್ನು ತಡೆಗಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಯುವಿ ಸ್ಟೆರಿಲೈಸರ್ಗೆ ವೈರ್ಲೆಸ್ ಚಾರ್ಜಿಂಗ್ ವ್ಯವಸ್ಥೆಯಿದೆ. 369 ಗ್ರಾಂ ತೂಕವಿರುವ ಈ ಸಾಧನದ ಒಳಗೆ ಫೋನ್ ಇತ್ಯಾದಿ ಇರಿಸಿದರೆ ಚಾರ್ಜ್ ಮಾಡುತ್ತಲೇ ಮೇಲ್ಮೈ ಹಾಗೂ ಕೆಳಭಾಗಗಳನ್ನು ಏಕಕಾಲದಲ್ಲಿ ಬ್ಯಾಕ್ಟೀರಿಯಾ-ಮುಕ್ತವಾಗಿಸಬಹುದು. Qi ತಂತ್ರಜ್ಞಾನ ಬೆಂಬಲಿಸುವ ಯಾವುದೇ ಸಾಧನಗಳನ್ನೂ ಇದರಲ್ಲಿ ಚಾರ್ಜ್ ಮಾಡಬಹುದಾಗಿದ್ದು, ಬೆಲೆ ರೂ. 3,599 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.