ಬೆಂಗಳೂರು: ಸ್ಯಾಮ್‌ಸಂಗ್ ಜನಪ್ರಿಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಎಸ್ ಸರಣಿಯಲ್ಲಿ ನೂತನ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಎಸ್ ಸರಣಿಯಲ್ಲಿ ಗ್ಯಾಲಕ್ಸಿ ಎಸ್23 ಬಿಡುಗಡೆ ಮಾಡಲು, ಗ್ಯಾಲಕ್ಸಿ ಅನ್‌ಪ್ಯಾಕ್‌ಡ್ ಈವೆಂಟ್ ಅನ್ನು ಫೆಬ್ರುವರಿ 1ರಂದು ನಡೆಸಲಿದೆ.
ಹೊಸ ಸರಣಿಯಲ್ಲಿ ಎಸ್23, ಗ್ಯಾಲಕ್ಸಿ ಎಸ್23+ ಮತ್ತು ಗ್ಯಾಲಕ್ಸಿ ಎಸ್23 ಅಲ್ಟ್ರಾ ಮಾದರಿಯನ್ನು ಪರಿಚಯಿಸುವ ನಿರೀಕ್ಷೆಯಿದೆ.
ದಕ್ಷಿಣ ಕೊರಿಯಾದ ಬ್ರ್ಯಾಂಡ್ ಸ್ಯಾಮ್‌ಸಂಗ್, ಪ್ರತಿ ವರ್ಷ ಎಸ್ ಪ್ರೀಮಿಯಂ ಸರಣಿಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತದೆ. ಅದರಂತೆ, 2023ರ ಆರಂಭದಲ್ಲಿ ಎಸ್23 ಮಾದರಿಯನ್ನು ಬಿಡುಗಡೆ ಮಾಡಲಿದೆ.
ಆ್ಯಂಡ್ರಾಯ್ಡ್ 13 ಮೂಲಕ ನೂತನ ಮಾದರಿಗಳನ್ನು ಪರಿಚಯಿಸುವ ಜತೆಗೆ, ಸ್ಯಾಪ್‌ಡ್ರ್ಯಾಗನ್ 8 ಜೆನ್. ಪ್ರೊಸೆಸರ್ ಹೊಂದಿರುತ್ತದೆ ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.