ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಆಡಿಯೋ ಆದ್ಯತೆ: ಹೊಸ ಅಧ್ಯಯನ

Last Updated 29 ಆಗಸ್ಟ್ 2020, 9:03 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಗ್ರಾಹಕರು ಸ್ಮಾರ್ಟ್‌ಫೋನ್ ಖರೀದಿಸುವಾಗ ಆಡಿಯೋ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಸೈಬರ್‌ಮೀಡಿಯಾ ರೀಸರ್ಚ್ (CMR) ನಡೆಸಿದ ಹೊಸ ಅಧ್ಯಯನ ಬಹಿರಂಗಪಡಿಸಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯಬೇಕಾದ ಅರ್ಥವ್ಯವಸ್ಥೆಯಿಂದಾಗಿ ಜನರು ಆಡಿಯೊ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಸ್ಮಾರ್ಟ್‌ಫೋನ್ ಕ್ಯಾಮೆರಾ ಮತ್ತು ಬ್ಯಾಟರಿಗಳಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಈಗ ಸಂವಹನ ಮತ್ತು ಬಳಕೆಯ ದೃಷ್ಟಿಕೋನದಿಂದಲೂ ಹೊಸ ಸಹಜತೆಗೆ ಹೊಂದಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ ಎಂದು ಸಿಎಂಆರ್‌ನ ಇಂಡಸ್ಟ್ರಿ ಕನ್ಸಲ್ಟಿಂಗ್ ಗ್ರೂಪ್ ಮುಖ್ಯಸ್ಥ ಸತ್ಯ ಮೊಹಂತಿ ಹೇಳಿದ್ದಾರೆ.

ಒಟಿಟಿ ಬಳಕೆ, ಮೊಬೈಲ್ ಗೇಮಿಂಗ್, ಯುಜಿಸಿ ಮುಂತಾದವುಗಳಲ್ಲಿ ಗ್ರಾಹಕರು ಅತ್ಯುತ್ತಮ ಗುಣಮಟ್ಟದ ಧ್ವನಿ ನಿರೀಕ್ಷೆ ಮಾಡುತ್ತಿದ್ದಾರೆ. ಡಾಲ್ಬಿ ಮುಂತಾದ ಬ್ರ್ಯಾಂಡ್‌ಗಳು ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಸಿಎಂಆರ್‌ನ ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್‌ನ ಮುಖ್ಯಸ್ಥ ಪ್ರಭು ರಾಮ್ ಹೇಳಿದ್ದಾರೆ.

ವಿಡಿಯೊ ಸ್ಟ್ರೀಮಿಂಗ್, ಚಲನಚಿತ್ರ, ಹಾಡುಗಳು, ಧಾರಾವಾಹಿಗಳನ್ನು ಜೊತೆಗೆ ಸಾಮಾಜಿಕ ಜಾಲತಾಣಗಳ ಕಂಟೆಂಟನ್ನು ಕೂಡ ಗ್ರಾಹಕರು ಈಗ ಸ್ಮಾರ್ಟ್ ಫೋನ್ ಮೂಲಕವೇ ಆನಂದಿಸುತ್ತಾರೆ. ಬ್ಯಾಟರಿ ಮತ್ತು ಕ್ಯಾಮೆರಾದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಹೀಗಾಗಿ, ಆಡಿಯೊ ಗುಣಮಟ್ಟದ ಬಗ್ಗೆ ಜನರು ಆಸಕ್ತಿ ವಹಿಸಲಾರಂಭಿಸಿದ್ದಾರೆ. ಆಡಿಯೊಗೆ ಪ್ರಾಧಾನ್ಯತೆ ದೊರೆತದ್ದು ಶೇ.66. ಅದೇ ರೀತಿ, ಬ್ಯಾಟರಿ ಬಾಳಿಕೆಗೆ ಶೇ.61 ಹಾಗೂ ಕ್ಯಾಮೆರಾಕ್ಕೆ ಶೇ.60 ಅಂಕ ದೊರೆತಿದೆ.

ಆದ್ಯತೆಯ ಆಡಿಯೋ ಉಪಕರಣಗಳಲ್ಲಿ ವೈರ್ ಇರುವ ಇಯರ್‌ಪ್ಲಗ್ಸ್ ಮತ್ತು ವಯರ್‌ಲೆಸ್ ಇಯರ್‌ಬಡ್ಸ್ ಒಳಗೊಂಡಿವೆ. ಶೇ.78ರಷ್ಟು ಗ್ರಾಹಕರು ವೈರ್ ಇರುವ ಇಯರ್‌ಪ್ಲಗ್‌ಗಳಿಗೆ ಆದ್ಯತೆ ನೀಡುತ್ತಿದ್ದು, ಶೇ.65ರಷ್ಟು ಮಂದಿ ಇಯರ್‌ಬಡ್‌ಗಳನ್ನು ಇಷ್ಟಪಡುತ್ತಾರೆ ಎಂದು ಈ ಅಧ್ಯಯನ ಕಂಡುಕೊಂಡಿದೆ.

ನವದೆಹಲಿ, ಮುಂಬಯಿ, ಕೋಲ್ಕತಾ, ಚೆನ್ನೈ, ಹೈದರಾಬಾದ್ ಹಾಗೂ ಅಹಮದಾಬಾದ್‌ಗಳಲ್ಲಿ 18ರಿಂದ 40 ವಯಸ್ಸಿನ 1012 ಮಂದಿಯ ಅಭಿಪ್ರಾಯವನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT