ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಅಡುಗೆಮನೆ: ಫ್ರೈಯರ್‌ ಮೇಕರ್‌ಗಳಿಗೂ ಬಂತು ತಂತ್ರಜ್ಞಾನ

Published 21 ನವೆಂಬರ್ 2023, 23:40 IST
Last Updated 21 ನವೆಂಬರ್ 2023, 23:40 IST
ಅಕ್ಷರ ಗಾತ್ರ

ಅಡುಗೆಮನೆಯ ಕೆಲಸ ಎಂದರೆ ಕೇವಲ ಅಡುಗೆಯ ಕೆಲಸವಷ್ಟೆ ಅಲ್ಲ; ಸ್ವಚ್ಛಂತೆಯಂಥ ಹಲವು ಇತರ ಕೆಲಸಗಳೂ ಇರುತ್ತವೆ. ತಂತ್ರಜ್ಞಾನ ಈಗ ಒಟ್ಟು ಅಡುಗೆಮನೆಯ ಕೆಲಸವನ್ನು ಸುಲಭ ಮಾಡುತ್ತಿದೆ. ಅಡುಗೆಮನೆಯಲ್ಲಿ ಬಳಕೆಯಾಗುವ ವಿವಿಧ ಬಗೆಯ ಉಪಕರಣಗಳಿಗೆ ಈಗ ಸ್ಮಾರ್ಟ್‌, ಡಿಜಿಟಲ್‌ ತಂತ್ರಜ್ಞಾನದ ಸ್ಪರ್ಶ ಸಿಗುತ್ತಿದೆ. ಈ ತಂತ್ರಜ್ಞಾನವು ಸುರಕ್ಷಿತ ಹಾಗೂ ಅಡುಗೆಕೆಲಸವನ್ನು ಸುಲಭವನ್ನಾಗಿಯೂ ಮಾಡುತ್ತಿದೆ. ಇತ್ತೀಚಗೆ ಮಾರುಕಟ್ಟೆಗೆ ಬಂದಿರುವ ಅಂತಹ ಕೆಲವು ಡಿಜಿಟಲ್‌ ಸ್ಮಾರ್ಟ್‌ ಉಪಕರಣಗಳು ಕೆಲವು ಇಲ್ಲಿವೆ. 

ಟಾಪ್‌ಲೋಡ್‌ ಫ್ರೈಯರ್‌:

ವಿವಿಧ ಬಗೆಯ ಖಾದ್ಯಗಳ ತಯಾರಿಗೆ ನೆರವಾಗಲೆಂದು ಡಿಜಿಟಲ್ ತಂತ್ರಜ್ಞಾನವನ್ನು ಆಧರಿಸಿ ‘ಬೊರೊಸಿಲ್‌ ಸಂಸ್ಥೆ’ ‘ಟಾಪ್‌ಲೋಡ್‌ ಫ್ರೈಯರ್’ ಹೆಸರಿನ ವಿಶೇಷ ಉಪಕರಣವನ್ನು ತಯಾರಿಸಿದೆ.‌ ಈವರೆಗೆ ಬಳಕೆಯಲ್ಲಿದ್ದ ಹಾಗೂ ಹಲವರಿಗೆ ಪರಿಚಯವಿರುವ ‘ಫ್ರಂಟ್‌ಲೋಡ್‌ ಫ್ರೈಯರ್‌’ಗಳಿಗೆ ಹೋಲಿಸಿದರೆ ಇದು ಸುಧಾರಿತ ಉಪಕರಣ. ಇದರಿಂದ ಆಹಾರಪದಾರ್ಥಗಳನ್ನು ವಿವಿಧ ರೀತಿಯಲ್ಲಿ ತಯಾರಿಸಿಕೊಳ್ಳಲು ಸಾಧ್ಯ. ಇದಕ್ಕಾಗಿಯೇ ಇದರಲ್ಲಿ ಬೇಕಿಂಗ್‌, ಗ್ರಿಲ್ಲಿಂಗ್‌, ರೋಸ್ಟಿಂಗ್‌, ಡೀ ಫ್ರೈಯಿಂಗ್‌ನಂತಹ ಹಲವು ಆಯ್ಕೆಗಳಿವೆ. ಆರು ಲೀಟರ್‌ ಸಾಮರ್ಥ್ಯದ ಈ ಉಪಕರಣದಲ್ಲಿ ಉದ್ದಿನ ವಡೆ, ಮುರುಕು, ಸಂಡಿಗೆಯಂತಹ ವಿವಿಧ ಬಗೆಯ ತಿಂಡಿಗಳನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಇಂತಿಷ್ಟೇ ಉಷ್ಣಾಂಶದಲ್ಲಿ ಖಾದ್ಯಗಳನ್ನು ತಯಾರಿಸಿಕೊಳ್ಳಲು ಸಾಧ್ಯವಾಗುವಂತೆ ಈ ಉಪಕರಣವನ್ನು ತಯಾರಿಸಲಾಗಿದೆ. ಇದರ ಮತ್ತೊಂದು ಉಪಯೋಗವೆಂದರೆ ಕಡಿಮೆ ಎಣ್ಣೆ ಬಳಸಿ ಆಹಾರಪದಾರ್ಥಗಳನ್ನು ತಯಾರಿಸಿಕೊಳ್ಳಬಹುದು. ಇದರೊಂದಿಗೆ ಗ್ರಿಲ್‌ ಬಾಸ್ಕೆಟ್‌, ಪ್ಲೇಟ್ ಕೂಡ ಇರುವುದರಿಂಧ ಆಹಾರಪದಾರ್ಥಕ್ಕೆ ತಕ್ಕಂತೆ ಇದನ್ನು ಉಪಯೋಗಿಸಿಕೊಳ್ಳಬಹುದು. ‘ವಿವಿ ಈ ಕಾಮರ್ಸ್‌’ ತಾಣಗಳಲ್ಲಿ ಈ ಉಪಕರಣವನ್ನು ಖರೀದಿಸಬಹುದು. 

ಸೂಪ್‌ ಮೇಕರ್‌:

ದೇಹಕ್ಕೆ ಬೇಕಾಗುವ ಉತ್ತಮ ಪೋಷಕಾಂಶಗಳಿಗೆ ಸೂಪ್‌ಗಳ ಸೇವನೆ ಉತ್ತಮ ಎಂಬುದು ಹಲವು ತಜ್ಞರ ಸಲಹೆ ನೀಡುತ್ತಾರೆ. ರುಚಿಯ ಜೊತೆಗೆ ಆರೋಗ್ಯವನ್ನೂ ಒಟ್ಟಾಗಿ ಪಡೆಯಲು ಸೂಪ್‌ಗಳನ್ನು ಸೇವಿಸಬಹುದು. ಹೀಗೆ ಸೂಪ್‌ಗಳನ್ನು ಇಷ್ಟಪಡುವವರು ಹಲವು ಬಗೆಯ ಸೂಪ್‌ಗಳನ್ನು ತಯಾರಿಸಿಕೊಳ್ಳಲು ಬಯಸುವವರಿಗೆ ಉಪಯೋಗವಾಗುವಂತೆ ತಯಾರಿಸಿರುವ ವಿಶೇಷ ಉಪಕರಣವೇ ಆಗ್ರೋ ಸಂಸ್ಥೆಯ ‘ಸೂಪ್‌ ಮೇಕರ್’.‌ ಈ ಉಪಕರಣ ಆಟೊಮೆಟಿಕ್‌ ಬ್ಲೆಂಡಿಂಗ್‌, ಹೀಟಿಂಗ್‌ ವಿಧಾಣಗಳನ್ನು ಹೊಂದಿದೆ; ಆರು ಪ್ರಿ ಟೆಸ್ಟಿಂಗ್‌ ಮಾಡೆಲ್ಸ್‌ ಕೂಡ ಇವೆ. ಇದರಲ್ಲಿ ಸ್ಟೆಯಿನ್‌ಲೆಸ್‌ ಸ್ಟೀಲ್‌ ಬ್ಲೇಡ್‌ಗಳನ್ನು ಅಳವಡಿಸಲಾಗಿದ್ದು, ಇದು ತರಕಾರಿಗಳನ್ನು ಸೂಕ್ಷ್ಮವಾಗಿ ಕತ್ತರಿಸಲು ನೆರವಾಗುತ್ತವೆ. ಕೇವಲ 25 ನಿಮಿಷಗಳ ಅವಧಿಯಲ್ಲಿ ಸೂಪ್‌ ತಯಾರಾಗುತ್ತದೆ. ಮಗ್‌ ಮಾದರಿ ಆಕಾರದಲ್ಲಿದ್ದು, ಹಿಡಿಕೆಯೂ ಇರುವುದರಿಂದ ಬಳಕೆ ಸುಲಭ. ಮುಚ್ಚಳದ ಮೇಲಿನ ಹಿಡಿಕೆಯೂ ಸುಲಭ ಬಳಕೆಗೆ ನೆರವಾಗುತ್ತದೆ. ಇದು ಡಿಜಿಟಲ್‌ ಉಪಕರಣವಾಗಿರುವುದಿಂದ ಬಳಕೆಗೆ ವಿವಿಧ ಬಗೆಯ ಆಪ್ಷನ್‌ಗಳೂ ಇವೆ. ಸೂಪ್‌ ಮೇಕರ್‌ನಿಂದ ಸೂಪ್‌ಗಳ ತಯಾರಿಕೆ ಈಗ ಸುಲಭ.

ಎಲೆಕ್ಟ್ರಿಕ್‌ ಬರ್ನರ್‌:

ಅಡುಗೆ ತಯಾರಿಗೆ ನೆರವಾಗಲು ಈಗ ಮಾರುಕಟ್ಟೆಗೆ ಬಂದಿರುವ ಮುಖ್ಯವಾದ ಉಪಕರಣಗಳಲ್ಲಿ ಈ ‘ಎಲೆಕ್ಟ್ರಿಕ್‌ ಬರ್ನರ್‌’ ಕೂಡ ಒಂದು. ಈ ಟ್ರೆಂಡಿ ಎಲೆಕ್ಟ್ರಿಕ್‌ ಬರ್ನರನ್ನು ‘ಕ್ಯೂಸಿಮ್ಯಾಕ್ಸ್‌ ಸಂಸ್ಥೆ’ ತಯಾರಿಸಿದೆ. ಇದರಲ್ಲಿ ಸುಧಾರಿತ ತಂತ್ರಜ್ಞಾನದ ಬಳಕೆ ಆಗಿರುವುದರಿಂದ ಸುರಕ್ಷಿತವೂ ಅಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬಗೆಯ ಸಾಧಾರಣ ‘ಹಾಟ್‌ಪ್ಲೇಟ್‌ ಬರ್ನರ್‌’ಗಳಿಗೆ ಹೋಲಿಸಿದರೆ ಇದರಲ್ಲಿನ ತಂತ್ರಜ್ಞಾನ ಭಿನ್ನವಾಗಿದೆ. ‘ಫಾರ್‌ ಇನ್‌ಫ್ರಾರೆಡ್‌ ಅಸೆಂಬ್ಲಿಂಗ್‌’ ತಂತ್ರಜ್ಞಾನದ ನೆರವಿನೊಂದಿಗೆ ಇದು ಕೆಲಸ ಮಾಡುತ್ತದೆ. ಹೀಗಾಗಿ ಹೆಚ್ಚು ಉಷ್ಣಾಂಶವನ್ನು ತಡೆದುಕೊಳ್ಳುವ ಶಕ್ತಿ ಇದಕ್ಕಿದೆ. ಇದರ ವಿಶೇಷವೆಂದರೆ ಐರನ್‌ ಪಾನ್‌, ಸ್ಟೆಯಿನ್‌ಲೆಸ್‌ ಸ್ಟೀಲ್‌, ಸಿರಾಮಿಕ್‌, ಅಲ್ಯೂಮಿನಿಯಂ ಬಗೆಯ ಪಾತ್ರೆಗಳನ್ನು ಇದರಲ್ಲಿ ಬಳಸಿಕೊಳ್ಳಲು ಸಾಧ್ಯವಾಗುವಂತೆ ತಯಾರಿಸಲಾಗಿದೆ. ಇದರ ತೂಕವೂ ಕಡಿಮೆ ಇರುವುದರಿಂದ ಬೇಕೆಂದ ಕಡೆಗೆ ಸುಲಭವಾಗಿ ಕೊಂಡೊಯ್ಯಬಹುದು. ಆಕಾರದಲ್ಲಿ ಸಣ್ಣಗಾತ್ರದ್ದಾಗಿರುವುದರಿಂದ ಅಡುಗೆಮನೆಯಲ್ಲಿ ಹೆಚ್ಚಿನ ಜಾಗವನ್ನೂ ಆಕ್ರಮಿಸುವುದಿಲ್ಲ. ಅಡುಗೆ ತಯಾರಿಗೆ ಪಾತ್ರೆಗಳನ್ನಿಡುವ ‘ಕ್ರಿಸ್ಟಲ್‌ ಗ್ಲಾಸ್‌ ಪೇಟ್‌’ ಅನ್ನು ತೇವದ ಬಟ್ಟೆಯಿಂದ ಒರೆಸಿ ಸುಲಭವಾಗಿ ಶುದ್ಧಿ ಮಾಡಿಕೊಳ್ಳಬಹುದು. ವಿವಿಧ ಬಗೆಯ ಹೀಟ್‌ ಸೆಟ್ಟಿಂಗ್ ಆಯ್ಕೆಗಳು ಇರುವುದರಿಂದ ಡೀ ಫ್ರೈ, ಬಾಯಿಲಿಂಗ್‌, ಕುಕಿಂಗ್‌ – ಹೀಗೆ ವಿವಿಧ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿಕೊಳ್ಳಲು ನೆರವಾಗುತ್ತದೆ. ಇದೇ ತಂತ್ರಜ್ಞಾನದೊಂದಿಗೆ ಎರಡು ಬರ್ನರ್‌ಗಳು ಇರುವ ಸ್ಟವ್‌ಗಳೂ ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT