ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯೋಮಿ ದೀಪಾವಳಿ ಆಫರ್ ಸೇಲ್: ಸ್ಮಾರ್ಟ್‌ಫೋನ್ ಖರೀದಿಗೆ ವಿಶೇಷ ಕೊಡುಗೆ

Last Updated 3 ಅಕ್ಟೋಬರ್ 2021, 11:28 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಪ್ರಮುಖ ಬ್ರ್ಯಾಂಡ್ ಶಿಯೋಮಿ, ‘ದಿವಾಲಿ ವಿತ್ ಎಂಐ’ ಎಂಬ ವಿಶೇಷ ಮಾರಾಟ ಕೊಡುಗೆಯನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆರಂಭಿಸಿದೆ.

ಶಿಯೋಮಿ ಕಂಪನಿಯ ರೆಡ್ಮಿ ಟಿವಿ ಮತ್ತು ಸ್ಮಾರ್ಟ್‌ಫೋನ್ ಖರೀದಿಗೆ ₹19,000 ವರೆಗೆ ಉಳಿತಾಯ ಕೊಡುಗೆಯನ್ನು ಕಂಪನಿ ನೀಡುತ್ತಿದೆ.

ಅಕ್ಟೋಬರ್ 3, ಭಾನುವಾರದಿಂದ ಆರಂಭವಾಗಿರುವ ಶಿಯೋಮಿ ದೀಪಾವಳಿ ಆಫರ್ ಸೇಲ್, ಅ. 7 ತಾರೀಕಿನವರೆಗೆ ನಡೆಯಲಿದೆ. ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ. 10 ವರೆಗೆ ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ.

ಶಿಯೋಮಿ ಎಂಐ 11X 5G, ರೆಡ್ಮಿ 9A, ಎಂಐ ಸ್ಮಾರ್ಟ್ ಬ್ಯಾಂಡ್ 5, ರೆಡ್ಮಿ ಇಯರ್‌ಬಡ್ಸ್, ಎಂಐ ರೊಬಾಟ್ ವಾಕ್ಯೂಮ್ ಮಾಪ್ ಸಹಿತ ವಿವಿಧ ಗ್ಯಾಜೆಟ್ ಖರೀದಿಗೆ ಶಿಯೋಮಿ ವಿಶೇಷ ಡಿಸ್ಕೌಂಟ್ ಕೂಡ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT