ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Xiaomi: ರೆಡ್ಮಿ 11 ಪ್ರೈಮ್ 4G ಮತ್ತು ರೆಡ್ಮಿ 11 ಪ್ರೈಮ್ 5G ದೇಶದಲ್ಲಿ ಬಿಡುಗಡೆ

ಶಓಮಿ ರೆಡ್ಮಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
Last Updated 6 ಸೆಪ್ಟೆಂಬರ್ 2022, 14:03 IST
ಅಕ್ಷರ ಗಾತ್ರ

ಬೆಂಗಳೂರು: ಶಓಮಿ ರೆಡ್ಮಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.ಹೊಸದಾಗಿ ರೆಡ್ಮಿ ನೂತನ 11 ಪ್ರೈಮ್, A1 ಸರಣಿ ದೇಶದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ರೆಡ್ಮಿ 11 ಪ್ರೈಮ್ ಎರಡು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ರೆಡ್ಮಿ 11 ಪ್ರೈಮ್ 4G ಮತ್ತು ರೆಡ್ಮಿ 11 ಪ್ರೈಮ್ 5G ಮಾದರಿಗಳನ್ನು ಶಓಮಿ ಮಾರುಕಟ್ಟೆಗೆ ಪರಿಚಯಿಸಿದೆ.

ಶಓಮಿ ರೆಡ್ಮಿ 11 ಪ್ರೈಮ್
6.58 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಆಂಡ್ರಾಯ್ಡ್ 12 ಆಧಾರಿತ MIUI 13 OS, 4 GB/6 GB ಎಂಬ ಎರಡು RAM ಮತ್ತು 64 GB/128 GB ಎಂಬ ಎರಡು ಸ್ಟೋರೇಜ್ ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಹಾಗೂ MediaTek Helio G99 ಪ್ರೊಸೆಸರ್ ಜತೆಗೆ ದೊರೆಯಲಿದೆ.

50 MP ಮುಖ್ಯ ಕ್ಯಾಮೆರಾ ಜತೆಗೆ 2 MP+2 MP ಸಹಿತ ತ್ರಿವಳಿ ಕ್ಯಾಮೆರಾ ಜತೆಗೆ, ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ಹಾಗೂ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಲಿದೆ.

ಬೆಲೆ ವಿವರ
Redmi 11 Prime 4G

4GB RAM+ 64GB ಮಾದರಿಗೆ ₹13,999 ಮತ್ತು
6GB RAM + 128GB ಆವೃತ್ತಿಗೆ ₹15,999 ದರ ಹೊಂದಿದೆ.

Redmi 11 Prime 5G
4GB RAM + 64GB ಆವೃತ್ತಿಗೆ ₹13,999 ಹಾಗೂ
6GB RAM + 128GB ಮಾದರಿಗೆ ₹15,999 ದರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT