ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gadget Review | ಸುರಕ್ಷತೆಗೆ ಗೊದ್ರೇಜ್ ಕ್ಯಾಟಸ್‌ ಡೋರ್‌ ಲಾಕ್‌

Published 4 ಸೆಪ್ಟೆಂಬರ್ 2023, 18:18 IST
Last Updated 4 ಸೆಪ್ಟೆಂಬರ್ 2023, 18:18 IST
ಅಕ್ಷರ ಗಾತ್ರ

ಗೊದ್ರೇಜ್ ಲಾಕ್ಸ್‌ ಕಂಪನಿಯು ಮನೆ ಮತ್ತು ಕಚೇರಿಗಳಿಗೆ ಹೆಚ್ಚಿನ ಸುರಕ್ಷತೆಯೊಂದಿಗೆ ಸ್ಮಾರ್ಟ್ ವೈಶಿಷ್ಟ್ಯಗಳಿರುವ ಡೋರ್ ಲಾಕ್‌ಗಳನ್ನು ನೀಡುವುದರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಗ್ರಾಹಕರ ಅಗತ್ಯಗಳಿಗೆ ಪೂರಕವಾಗಿ ಡೋರ್ ಲಾಕ್‌ಗಳಲ್ಲಿ ಹಲವು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಅಳವಡಿಸುತ್ತಿರುತ್ತದೆ. ಈ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಅಳವಡಿಸುವ ಗೊದ್ರೇಜ್ ಕ್ಯಾಟಸ್ ಟಚ್‌ ಪ್ಲಸ್ (Godrej Catus touch Plus) ಡೋರ್ ಲಾಕ್ ಮುಖ್ಯವಾಗಿದ್ದು, ಗಟ್ಟಿಮುಟ್ಟಾಗಿದೆ. ಸುರಕ್ಷತೆ, ಬಾಳಿಕೆ ಮತ್ತು ನಿರ್ವಹಣೆ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಿದೆ.

ಈ ಡೋರ್ ಲಾಕ್ ಫಿಂಗರ್ ಪ್ರಿಂಟ್ ಅನ್‌ಲಾಕ್, ಪಿನ್ ಕೋಡ್, ಆರ್‌ಎಫ್‌ಐಡಿ ಕಾರ್ಡ್‌ ಮತ್ತು ಮೆಕಾನಿಕಲ್ ಕೀ ಹೀಗೆ ನಾಲ್ಕು ಆಯ್ಕೆಗಳನ್ನು ಹೊಂದಿರುವ ಡಿಜಿಟಲ್ ಡೋರ್ ಲಾಕ್ ಆಗಿದೆ. ಡೋರ್‌ ಲಾಕ್‌ ನಿರ್ವಹಣೆಗೆ ಮಾಸ್ಟರ್‌ ಪಾಸ್‌ವರ್ಡ್‌ ಇರುತ್ತದೆ. ಮಾಸ್ಟರ್‌ ಪಾಸ್‌ವರ್ಡ್‌ ಹೊಂದಿರುವವರು ಮಾತ್ರವೇ ಬೇರೆಯವರನ್ನು ರಿಜಿಸ್ಟರ್ ಅಥವಾ ಡಿ–ರಿಜಿಸ್ಟರ್ ಮಾಡಬಹುದು. ಡೋರ್‌ ಲಾಕ್‌ ವೈಶಿಷ್ಟ್ಯಗಳ ಕುರಿತು ವಿವರವಾಗಿ ತಿಳಿಯೋಣ.

ಫಿಂಗರ್ ಪ್ರಿಂಟ್ ರೆಕಗ್ನಿಷನ್: ಬಳಕೆದಾರರ ಬೆರಳನ್ನು ದಾಖಲಿಸಿ ಡೋರ್ ಅನ್ ಲಾಕ್ ಮಾಡುವುದು ಬಹಳ ಸರಳವಾಗಿದೆ. ಇಲ್ಲಿ ನಮ್ಮ ಬೆರಳನ್ನು ಮೊದಲಿಗೆ ರಿಜಿಸ್ಟರ್ ಮಾಡುವಾಗ ನಿರ್ದಿಷ್ಟವಾಗಿ ಹೀಗೆಯೇ ಇಡಬೇಕು ಎಂದೇನೂ ಇಲ್ಲ. 360 ಡಿಗ್ರಿಯಲ್ಲಿ ಯಾವುದೇ ರೀತಿಯಲ್ಲಿ ಬೇಕಿದ್ದರೂ ನಮ್ಮ ಬೆರಳನ್ನು ಇಟ್ಟು ರಿಜಿಸ್ಟರ್ ಮಾಡಬಹುದು. ಅದೇ ರೀತಿ ಅನ್‌ಲಾಕ್ ಮಾಡುವಾಗಲೂ 360 ಡಿಗ್ರಿಯಲ್ಲಿ ಯಾವುದೇ ರೀತಿಯಲ್ಲಿ ಬೆರಳನ್ನು ಇಟ್ಟರೂ ಡೋರ್ ಅನ್‌ಲಾಕ್ ಆಗುತ್ತದೆ. ಒಟ್ಟು 99 ಬೆರಳನ್ನು ರಿಜಿಸ್ಟರ್ ಮಾಡಬಹುದು. ಚಳಿಗಾಲದಲ್ಲಿ ಕೆಲವೊಮ್ಮೆ ನಮ್ಮ ಬೆರಳಿನ ಗೆರೆಗಳು ಸರಿಯಾಗಿ ಮೂಡುವುದಿಲ್ಲ. ಅಂತಹ ಸಂದರ್ಭದಲ್ಲಿ ಇನ್ನೊಂದು ಬೆರಳನ್ನು ಬಳಸಲು ಇದು ಅನುಕೂಲ.

ಪಿನ್‌ಕೋಡ್: 4ರಿಂದ 9 ಡಿಜಿಟಲ್ ವರೆಗೆ ಪಿನ್ ಕೋಡ್ ಸೇವ್ ಮಾಡಿಟ್ಟುಕೊಂಡು ಡೋರ್ ಲಾಕ್/ ಅನ್ ಲಾಕ್ ಮಾಡಬಹುದು.

ಆರ್‌ಎಫ್‌ಐಡಿ: ಒಟ್ಟು 99 ಕಾರ್ಡ್‌ಗಳನ್ನು ಇದರಲ್ಲಿ ರಿಜಿಸ್ಟರ್ ಮಾಡಬಹುದು.

ಮೆಕಾನಿಕಲ್ ಕೀ: ಮೇಲಿನ ಯಾವುದೇ ಆಯ್ಕೆಗಳು ಕೆಲಸ ಮಾಡದೇ ಇದ್ದಾಗ ತುರ್ತು ಸಂದರ್ಭಗಳಲ್ಲಿ ಮೆಕಾನಿಕಲ್ ಕೀ ಬಳಸಿ ಬಾಗಿಲನ್ನು ತೆಗೆಯಬಹುದು. ಈ ಕೀ ಮನೆ ಮಾಲೀಕರ ಬಳಿ ಇರುವುದರಿಂದ ಅವರು ಮಾತ್ರವೇ ಬಳಸಬಹುದು.

ಪ್ರೈವಸಿ ಫಂಕ್ಷನ್: ಪ್ರೈವಸಿ ಬಟನ್ ಆನ್ ಆಗಿದ್ದರೆ ಹೊರಗಡೆಯಿಂದ ಡೋರ್ ಅನ್‌ಲಾಕ್ ಮಾಡಲು ಯಾವುದೇ ರೀತಿಯಲ್ಲಿಯೂ (ಮೆಕಾನಿಕ್ ಕೀ ಮತ್ತು ಮಾಸ್ಟರ್ ಪಾಸ್ ವರ್ಡ್ ಹೊರತುಪಡಿಸಿ) ಆಗುವುದಿಲ್ಲ. ಆಯ್ದ ಸಿಬ್ಬಂದಿಯೊಂದಿಗೆ ಮೀಟಿಂಗ್‌ ನಡೆಸುತ್ತಿದ್ದಾಗ ಹೊರಗಿನಿಂದ ಬೇರೆ ಉದ್ಯೋಗಿಗಳು ಒಳಬರದಂತೆ ತಡೆಯಲು ಪ್ರೈವಸಿ ಬಟನ್‌ ಉಪಯೋಗಕ್ಕೆ ಬರುತ್ತದೆ.

ಆ್ಯಂಟಿ ಪ್ರಾಂಕ್ ಅಲಾರ್ಮ್: ಅನ್ ಲಾಕ್ ಮಾಡುವಾಗ ಮೂರು ಬಾರಿ ತಪ್ಪಾಗಿ ಪಾಸ್‌ವರ್ಡ್/ಆರ್‌ಎಫ್‌ಐಡಿ/ ಫಿಂಗರ್ ಬಳಕೆ ಆದರೆ 3 ನಿಮಿಷಗಳ ಬಳಿಕ ಲಾಕ್ ಕೆಲಸ ಮಾಡುವುದು ನಿಲ್ಲಿಸುತ್ತದೆ. ಅಲಾರಂ ಹೊಡೆದುಕೊಳ್ಳಲು ಆರಂಭ ಆಗುತ್ತದೆ.

ಸ್ಪೈ ಕೋಡ್: ನಾವು ಪಾಸ್‌ವರ್ಡ್‌/ಪಿನ್‌ಕೋಡ್‌ ನೀಡುವಾಗ ಯಾರಾದರೂ ಅದನ್ನು ಗಮನಿಸುತ್ತಾರೆ ಎಂಬ ಅನುಮಾನ ಬಂದರೆ ಪಾಸ್‌ವರ್ಡ್‌ ಟೈಪ್‌ ಮಾಡುವ ಮೊದಲು ಮತ್ತು ನಂತರ ಒಂದಿಷ್ಟು ರ್‍ಯಾಂಡಮ್‌ ನಂಬರ್‌ಗಳನ್ನು ನೀಡಬಹುದು. ಹೀಗೆ ಮಾಡುವುದರಿಂದ ಡೋರ್‌ ಅನ್‌ಲಾಕ್‌ ಆಗಲು ನಾವು ನೀಡುವ ಪಾಸ್‌ವರ್ಡ್‌ ಯಾವುದು ಎಂದು ಇನ್ನೊಬ್ಬರಿಗೆ ಕಂಡುಕೊಳ್ಳಲು ಸುಲಭಕ್ಕೆ ಆಗುವುದಿಲ್ಲ.

ವಾಲ್ಯುಂ ಕಂಟ್ರೋಲ್: ಪಾಸ್‌ವರ್ಡ್‌/ಕಾರ್ಡ್‌ ಬಳಕೆ ಮಾಡುವಾಗ, ಡೋರ್‌ ಅನ್‌ಲಾಕ್‌ ಆದರೆ ಬೀಪ್‌ ಮತ್ತು ಅನ್‌ಲಾಕ್ ಮಾಡುವಾಗ ಯಾವುದೇ ಸದ್ದಾಗದಂತೆ ಮಾಡಲು ಮ್ಯೂಟ್ ಮಾಡಬಹುದು. ವಾಲ್ಯುಂ ಕಡಿಮೆ ಮತ್ತು ಹೆಚ್ಚಿಸಲು ಸಹ ಸಾಧ್ಯವಿದೆ.

ಬ್ಯಾಟರಿ ಲೋ ಆಗಿರುವುದನ್ನು ಎಲ್‌ಇಡಿ ತಿಳಿಸುತ್ತದೆ. ಬ್ಯಾಟರಿ ಪೂರ್ತಿ ಖಾಲಿ ಆಗಿ, ಡೋರ್‌ ಅನ್‌ಲಾಕ್‌ ಮಾಡಲು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ತುರ್ತು ಸಂದರ್ಭಕ್ಕೆಂದು ಎಮರ್ಜೆನ್ಸಿ ಯುಎಸ್‌ಬಿ ಆಯ್ಕೆ ನೀಡಲಾಗಿದೆ. ಪವರ್‌ ಬ್ಯಾಂಕ್ ಮೂಲಕ ಯುಎಸ್‌ಬಿಗೆ ಕನೆಕ್ಟ್‌ ಮಾಡಿ, ಡೋರ್ ಅನ್‌ಲಾಕ್ ಮಾಡಬಹುದು. ಮೂರು ವರ್ಷಗಳ ವಾರಂಟಿಯನ್ನೂ ಕಂಪನಿ ನೀಡುತ್ತದೆ. ಆಧುನಿಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದ ಮೂಲಕ ಸುರಕ್ಷತೆ ಒದಗಿಸಲು ಈ ಡೋರ್‌ ಲಾಕ್‌ ಉಪಯುಕ್ತವಾಗಿದೆ. ಬೆಲೆ ₹17,499.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT