ಮಂಗಳವಾರ, ಮೇ 17, 2022
24 °C

ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಗ್ರಾಹಕರಿಗೆ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರುವ ಭಾರತದ ಮೊದಲ ಕಂಪನಿಯಾಗಿ ಲಾವಾ ಇಂಟರ್‌ನ್ಯಾಷನಲ್‌ ಹೊರಹೊಮ್ಮಿದೆ.

‘ಅಗ್ನಿ’ ಬ್ರ್ಯಾಂಡ್‌ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ ಅನ್ನು ಕಂಪನಿಯು ಭಾರತದಲ್ಲಿಯೇ ಅಭಿವೃದ್ಧಿಪಡಿಸಿದ್ದು, ಉತ್ತರ ಪ್ರದೇಶದ ನೊಯ್ಡಾದಲ್ಲಿ ಇರುವ ಘಟಕದಲ್ಲಿ ತಯಾರಿಸಲಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ, ಮೀಡಿಯಾಟೆಕ್‌ ಡೈಮೆನ್ಸಿಟಿ 810 ಚಿಪ್‌ಸೆಟ್‌ ಹೊಂದಿರುವ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿರುವ ಎರಡನೇ ಕಂಪನಿ ಲಾವಾ ಆಗಿದೆ ಎಂದು ಕಂಪನಿಯ ಅಧ್ಯಕ್ಷ ಸುನಿಲ್‌ ರೈನಾ ಹೇಳಿದ್ದಾರೆ.

ಅಗ್ನಿ ಸ್ಮಾರ್ಟ್‌ಫೋನ್‌ ಬೆಲೆ ₹ 19,999. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಇರುವ ಚೀನಾ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಈ ಬೆಲೆಯು ಸ್ಪರ್ಧಾತ್ಮಕವಾಗಿ ಇದೆ ಎಂದು ಅವರು ಹೇಳಿದ್ದಾರೆ.

ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್‌ ರಿಟೇಲ್‌ ಮಳಿಗೆಗಳಲ್ಲಿ ಮತ್ತು ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ನವೆಂಬರ್‌ 18ರಿಂದ ಖರೀದಿಗೆ ಲಭ್ಯವಿರಲಿದೆ. ಅಮೆಜಾನ್‌, ಲಾವಾ ಇ–ಸ್ಟೋರ್‌ನಲ್ಲಿ ನವೆಂಬರ್ 17ರವರೆಗೆ ಮುಂಗಡ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ₹ 500 ಪಾವತಿಸಿ ಬುಕ್ ಮಾಡಬಹುದು ಎಂದು ಕಂಪನಿಯು ತಿಳಿಸಿದೆ.

ವೈಶಿಷ್ಟ್ಯ

* 6.78 ಇಂಚು ಪರದೆ

* 8 ಜಿಬಿ ರ್‍ಯಾಮ್‌, 128 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ

* ಕ್ಯಾಮೆರಾ: 64+5+2+2ಎಂಪಿ

* 16 ಎಂಪಿ ಮುಂಬದಿ ಕ್ಯಾಮೆರಾ

* 5,000 ಎಂಎಎಚ್‌ ಬ್ಯಾಟರಿ. 30 ಡಬ್ಲ್ಯು ಸೂಪರ್‌ಫಾಸ್ಟ್‌ ಚಾರ್ಜರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು