ಭಾನುವಾರ, ಆಗಸ್ಟ್ 25, 2019
28 °C

ಕೈಗೆಟುಕುವ ದರಕ್ಕೆ ‘ರಿಯಲ್ ಮಿ 3ಐ’

Published:
Updated:
Prajavani

ರಿಯಲ್ ಮಿ 3ಐ – ಹತ್ತು ಸಾವಿರ ಮೌಲ್ಯದೊಳಗಿನ ಮೊಬೈಲ್ ಫೋನ್ ಗಳ ಪಟ್ಟಿಗೆ ಸೇರುವ ಸ್ಮಾರ್ಟ್ ಫೋನ್. ಇದು ಅಂಗೈ ಆವರಿಸುವಷ್ಟು ಅಗಲ, ಶರ್ಟ್ ಜೇಬಲ್ಲಿಟ್ಟರೆ, ಕಾಲುಭಾಗ ಮೇಲೆ ಕಾಣುವಷ್ಟು ಉದ್ದ. ಈ ಫೋನ್ ತುಂಬಾ ಅಪ್ಲಿಕೇಷನ್‌ಗಳು, ಜತೆಗೊಂದಿಷ್ಟು ಆಕರ್ಷಕ ಫೀಚರ್‌ಗಳಿವೆ.

ಇದನ್ನೂ ಓದಿ: ವೇಗ, ಮೊಮೊರಿಗೆ ರಿಯಲ್‌ಮಿ ಎಕ್ಸ್‌

ಇನ್‌ಡಿಸ್ಪ್ಲೆ ಫಿಂಗರ್‌ಪ್ರಿಂಟ್‌ ತಂತ್ರ ಜ್ಞಾನದ ಸ್ಕ್ರೀನ್ ಅನ್ಲಾಕ್ ಜತೆಗೆ, ಫೇಸ್ ರೆಕಗ್ನೀಷನ್ ಅನ್ಲಾಕ್ ಆಯ್ಕೆಯೂ ಇದೆ. ಮುಖಚಹರೆ ಗುರುತಿಸಿ ಅನ್ಲಾಕ್ ಆಗುವ ವ್ಯವಸ್ಥೆ ಚೆನ್ನಾಗಿದೆ.

ಆದರೆ, ಫಿಂಗರ್‌ಪ್ರಿಂಟ್‌ ಅನ್ಲಾಕ್ ಆಯ್ಕೆಗೆ ಬೆರಳಚ್ಚು ದಾಖಲಿಸುವಾಗ ಸ್ವಲ್ಪ ಸಮಯ ಹಿಡಿಯುತ್ತದೆ. ಬೆರಳಿನ ಎಲ್ಲ ಗೆರೆಗಳು ಮೂಡಬೇಕು. ಆದರೆ, ಒಮ್ಮೆ ಬೆರಳಚ್ಚು ದಾಖಲಾದರೆ ನಂತರ ಸಮಸ್ಯೆ ಕೊಡುವುದಿಲ್ಲ.

13 ಎಂಪಿ ಪ್ರೈಮರಿ ಮತ್ತು 2 ಎಂಪಿ ಸೆಕೆಂಡರಿ ಕ್ಯಾಮೆರಾಗಳಿವೆ. ಹೊರಾಂಗಣ ಚಿತ್ರಗಳು ಬಹಳ ಎಫೆಕ್ಟಿವ್ ಆಗಿ ಬರುತ್ತವೆ. ಕಡಿಮೆ ಬೆಳಕಿನಲ್ಲೂ ಫೋಟೊಗಳು ಚೆನ್ನಾಗಿ ಬರುತ್ತವೆ. ಲ್ಯಾಂಡ್ ಸ್ಕೇಪ್ ಮತ್ತು ಪೋರ್ಟೈಟ್ ಜತೆಗೆ, ಕ್ಲೋಸ್ ಅಪ್ ಚಿತ್ರಗಳನ್ನು ಉತ್ತಮವಾಗಿ ತೆಗೆಯಬಹುದು. ನೈಟ್‌ಸ್ಕೇಪ್‌ ಎಂಬ ಸೌಲಭ್ಯ ನೀಡಿರುವುದರಿಂದ ಒಳಾಂಗಣದಲ್ಲಿ ತೆಗೆಯುವ ಚಿತ್ರಗಳು ಚೆನ್ನಾಗಿ ಬರುತ್ತವೆ. ಫ್ರಂಟ್ ಕ್ಯಾಮೆರ 16 ಎಂಪಿ ಇದ್ದು, ಸೆಲ್ಫಿ ಚಿತ್ರಗಳು ಚೆನ್ನಾಗಿರುತ್ತವೆ. ವಿಡಿಯೊ ರೆಕಾರ್ಡಿಂಗ್ ಕೂಡ ಚೆನ್ನಾಗಿದೆ

ಬ್ಯಾಟರಿ ಬ್ಯಾಕ್ ಅಪ್: ಡೈಮಂಡ್ ಕಟ್ ವಿನ್ಯಾಸವಿದೆ. 4230 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದೆ. ಸಾಮಾನ್ಯವಾಗಿ ಮೊಬೈಲ್ ಬಳಸುವವರಿಗೆ ಬಹುಶಃ ಎರಡು ದಿನಗಳವರೆಗೂ ಬ್ಯಾಟರಿ ಬ್ಯಾಕ್ ಅಪ್ ಬರಬಹುದು. ಹೆಚ್ಚು ಬಳಸುವವರಿಗೂ ಒಂದೂವರೆ ದಿನದವರೆಗೂ ಬರಬಹುದು. ಬಳಕೆ ಪ್ರಮಾಣ ಹೆಚ್ಚಾದ ನಂತರ ಬ್ಯಾಟರಿ ಬ್ಯಾಕ್‌ಅಪ್‌ ಶಕ್ತಿ ಹೇಗಿರುತ್ತದೆ ಎಂಬುದು ಗೊತ್ತಿಲ್ಲ.

ಡಿಸ್ಪ್ಲೆ, ಧ್ವನಿ: 6.22 ಇಂಚ್ ಡಿಸ್ ಪ್ಲೇ ಇದೆ. ಡಿಸ್ಪ್ಲೆ ವಿಶಾಲವಾಗಿರುವುದರಿಂದ ಸಿನಿಮಾ ವೀಕ್ಷಿಸಲು ಚೆನ್ನಾಗಿರುತ್ತದೆ. ‘ಸ್ಕ್ರೀನ್ ಫಿಂಚ್’ ಸೌಲಭ್ಯ ನೀಡಿರುವು ದರಿಂದ, ಸ್ಕ್ರೀನ್ ಝೂಮ್ ಮಾಡಿ ನೋಡಬಹುದು. ಹೀಗಾಗಿ, ಇಡೀ ಸ್ಕ್ರೀನ್ ತುಂಬಾ ಪಿಕ್ಚರ್ ಕಾಣಿಸುತ್ತದೆ. ಆಡಿಯೊ ಮತ್ತು ವಿಡಿಯೊ ಗುಣಮಟ್ಟ ತೃಪ್ತಿದಾಯಕ. ಇಯರ್ ಫೋನ್ ನೀಡಿಲ್ಲ.

ಎರಡು ಮಾದರಿ, ಮೂರು ಬಣ್ಣಗಳಲ್ಲಿ..

ಕಂಪನಿ ಎರಡು ಮಾದರಿಗಳಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಒಂದರಲ್ಲಿ 3 ಜಿಬಿ ರ‍್ಯಾಮ್ + 32 ಜಿಬಿ ಸಂಗ್ರಹ ಸಾಮರ್ಥ್ಯ(₹ 7999), ಇನ್ನೊಂದು 4 ಜಿಬಿ ರ‍್ಯಾಮ್ + 64 ಜಿಬಿ ಸಂಗ್ರಹ ಸಾಮರ್ಥ್ಯದ ಮಾದರಿಗಳಿವೆ (₹ 9999). ಕಪ್ಪು, ನೀಲಿ ಮತ್ತು ಕೆಂಪು ಮೂರು ಕಲರ್ ಗಳಲ್ಲಿ ಫೋನ್ ಗಳು ಲಭ್ಯವಿವೆ.

Post Comments (+)