ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

Published 28 ಜೂನ್ 2024, 11:32 IST
Last Updated 28 ಜೂನ್ 2024, 11:32 IST
ಅಕ್ಷರ ಗಾತ್ರ

ಬೀಜಿಂಗ್‌: ಚಂದ್ರನ ದಕ್ಷಿಣ ಧ್ರುವದಲ್ಲಿರುವ, ಭೂಮಿಯಿಂದ ನೇರವಾಗಿ ಕಾಣದ ಪ್ರದೇಶದಿಂದ ಚೀನಾದ ಚಾಂಗ್‘ಇ–6 ನೌಕೆ ಕೆಲವು ದಿನಗಳ ಹಿಂದೆ ಹೊತ್ತು ತಂದಿರುವ ಮಾದರಿಗಳು 1934.3 ಗ್ರಾಂಗಳಷ್ಟು (1.934 ಕೆಜಿ) ತೂಕವಿದೆ.  

ಭೂಮಿಯನ್ನು ಸ್ಪರ್ಶಿಸಿದ್ದ ನೌಕೆಯ ಘಟಕವನ್ನು ತೆರೆದು ಮಾದರಿಗಳನ್ನು ಸಂಗ್ರಹಿಸಿರುವ ಚೀನಾದ ಬಾಹ್ಯಾಕಾಶ ಸಂಸ್ಥೆ ಸಿಎನ್‌ಎಸ್‌ಎ ಈ ಬಗ್ಗೆ ಮಾಹಿತಿ ನೀಡಿದೆ. 

‘ಚಂದ್ರನ ಅಂಗಳನಿಂದ ಭೂಮಿಗೆ ತರಲಾಗಿರುವ ಮಾದರಿಗಳನ್ನು ಮೇಲ್ನೋಟಕ್ಕೆ ನೋಡಿದಾಗ, ಈ ಹಿಂದೆ ಅಲ್ಲಿಂದ ತಂದ ಮಾದರಿಗಳಿಗೆ ಹೋಲಿಸಿದರೆ ಇವು ಮೆದುವಾಗಿದ್ದು(ಅರೆ ದ್ರವಸ್ಥಿತಿ) ಗಂಟು ಗಂಟಾಗಿವೆ’ ಎಂದು ಸಿಎನ್‌ಎಸ್‌ಎಯ ಚಂದ್ರನ ಅಧ್ಯಯನ ಮತ್ತು ಬಾಹ್ಯಾಕಾಶ ಎಂಜಿನಿಯರಿಂಗ್‌ ಕೇಂದ್ರದ ಉಪ ನಿರ್ದೇಶಕ, ಚಾಂಗ್‌‘ಇ–6 ಯೋಜನೆ ವಕ್ತಾರ ಗೆ ಪಿಂಗ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.   

ವಿಜ್ಞಾನಿಗಳು ಈ ಮಾದರಿಗಳನ್ನು ದಾಸ್ತಾನು ಮಾಡುವುದರ ಜೊತೆಗೆ ಸಂಸ್ಕರಿಸಲಿದ್ದು, ಬಳಿಕ ನಿಗದಿಯಂತೆ ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಲಿದ್ದಾರೆ. 

‘ಮಾನವನ ಇತಿಹಾಸದಲ್ಲಿ ಭೂಮಿಗೆ ನೇರವಾಗಿ ಕಾಣದ ಚಂದ್ರನ ಮೇಲ್ಮೈನಿಂದ ಮಾದರಿಗಳನ್ನು ಮೊದಲ ಬಾರಿಗೆ ಸಂಗ್ರಹಿಸಲಾಗಿದೆ. ಈ ಅಧ್ಯಯನಕ್ಕೆ ವಿಶಿಷ್ಟ  ವೈಜ್ಞಾನಿಕ ಮಹತ್ವವಿದೆ. ಚಂದ್ರನ ವಿಕಾಸಕ್ಕೆ ಅರ್ಥೈಸಿಕೊಳ್ಳಲು ಇದು ನೆರವಾಗಲಿದೆ. ಅಲ್ಲದೇ, ಚಂದ್ರನ ಸಂಪನ್ಮೂಲಗಳ ಅಧ್ಯಯನ ಮತ್ತು ಬಳಕೆಯ ವೇಗವನ್ನು ಇದು ಹೆಚ್ಚಿಸಲಿದೆ.ಈ ಮಾದರಿಗಳು ಇಡೀ ಮನುಕುಲಕ್ಕೆ ದೊಡ್ಡ ಆಸ್ತಿಯಾಗಲಿದೆ’ ಎಂದು ಸಿಎನ್‌ಎಸ್‌ಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT