ಸೋಮವಾರ, ಜೂನ್ 27, 2022
21 °C

ಕೋವಿಡ್‌: 3 ಮಾದರಿಯ ವೆಂಟಿಲೇಟರ್‌ ಅಭಿವೃದ್ಧಿಪಡಿಸಿದ ಇಸ್ರೋ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ 2ನೇ ಅಲೆಯ ಸಂಕಷ್ಟದ ಈ ಸಮಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂರು ಮಾದರಿಯ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವೆಂಟಿಲೇಟರ್‌ಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದಾಗಿದ್ದು ಸುಲಭವಾಗಿ ಸಾಗಣೆ ಮಾಡಬಹುದು ಎಂದು ಇಸ್ರೊ ತಿಳಿಸಿದೆ.

ಪ್ರಾಣ (PRANA), ವಾವ್‌ (vau) ಹಾಗೂ ಸ್ವಸ್ಥ (SVASTA) ಎಂಬ ಮೂರು ಮಾದರಿಯ ವೆಂಟಿಲೇಟರ್‌ಗಳನ್ನು ಇಸ್ರೋ ನಿರ್ಮಿಸಿದೆ.

ಪ್ರಾಣ (ಪ್ರೋಗ್ರಾಮೆಬಲ್ ರೆಸ್ಪಿರೇಟರಿ ಅಸಿಸ್ಟನ್ಸ್ ಫಾರ್ ನೀಡಿ ಏಡ್) ವೆಂಟಿಲೇಟರ್‌ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದಾಗಿದೆ. ವಾಯು ಒತ್ತಡ ಸೆನ್ಸರ್, ಆಮ್ಲಜನಕ ಸೆನ್ಸರ್, ಸರ್ವೊ ಆಕ್ಚುಯೇಟರ್ ಮೋಡ್‌ಗಳನ್ನು ಒಳಗೊಂಡಿದೆ. ಇದನ್ನು ಸಾಮಾನ್ಯ ಬೆಡ್‌ಗಳಿಗೂ ಅಳವಡಿಸಬಹದು ಎಂದು ಇಸ್ರೋ ತಿಳಿಸಿದೆ.

ವಾವ್‌ (ವೆಂಟಿಲೇಷನ್‌ ಅಸಿಸ್ಟ್‌ ಯುನಿಟ್‌) ವೆಂಟಿಲೇಟರ್‌ ಅನ್ನು ತೀವ್ರ ನಿಗಾ ಘಟಕಗಳಲ್ಲಿ ಬಳಕೆ ಮಾಡಬಹುದಾಗಿದೆ. ಮೈಕ್ರೋ ಕಂಟ್ರೊಲಿಂಗ್‌ ವ್ಯವಸ್ಥೆಯನ್ನು ಹೊಂದಿದೆ. ರೋಗಿಯ ಉಸಿರಾಟ ವ್ಯಸ್ಥೆಯಲ್ಲಿ ವ್ಯತ್ಯಾಸ ಕಂಡುಬಂದಾಗ ಸೆನ್ಸಾರ್‌ ಮೂಲಕ ಎಚ್ಚರಿಕೆ ನೀಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಮೂರನೇ ಮಾದರಿಯ ಸ್ವಸ್ಥ (ಸ್ಪೇಸ್ ವೆಂಟಿಲೇಟರ್ ಏಡೆಡ್ ಸಿಸ್ಟಂ ಫಾರ್ ಟ್ರೌಮಾ ಅಸಿಸ್ಟನ್ಸ್) ವೆಂಟಿಲೇಟರ್‌ ಅನ್ನು ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ಪ್ರಯಾಣಿಕರ ವಾಹನಗಳಲ್ಲೂ ಇದನ್ನು ಅಳವಡಿಸಬಹುದು ಎಂದು ಇಸ್ರೋ ಹೇಳಿದೆ.

ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಬ್ಯಾಟರಿ ಮೂಲಕ ಈ ಮೂರು ಮಾದರಿಯ ವೆಂಟಿಲೇಟರ್‌ಗಳು ಕೆಲಸ ಮಾಡಲಿವೆ.

ತಿರುವನಂತಪುರದಲ್ಲಿರುವ ವಿಕ್ರಮ್‌ ಸಾರಾಬಾಯ್‌ ಬಾಹ್ಯಾಕಾಶ ಸಂಸ್ಥೆಯಲ್ಲಿ ಈ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳ ಕಾರ್ಯವೈಖರಿಯನ್ನು ತಿಳಿಯಲು ಇಸ್ರೋ ವೆಬ್‌ಸೈಟಿಗೆ ಲಾಗಿನ್‌ ಆಗಿ ಮಾಹಿತಿ ಪಡೆಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು