ಬೆಂಗಳೂರು: ಚಂದ್ರಯಾನ–3 ಯೋಜನೆ ಯಶಸ್ವಿ ಬೆನ್ನಲ್ಲೇ ಕೇಂದ್ರ ಸರ್ಕಾರ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ.

ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿನ ಈವರೆಗಿನ ಸಾಧನೆಗಳ ಕುರಿತ ರಸಪ್ರಶ್ನೆ ಇದಾಗಿದೆ. ಅದರಲ್ಲೂ ಚಂದ್ರನ ಅಂಗಳಕ್ಕಿಳಿಯುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಸಾಧನೆಯ ಮೈಲಿಗಲ್ಲುಗಳ ಕುರಿತ ಪ್ರಶ್ನೆಗಳು ಈ ಸ್ಪರ್ಧೆಯಲ್ಲಿ ಇರಲಿವೆ.

ಇದರಲ್ಲಿ ಭಾರತೀಯರೆಲ್ಲರೂ ಪಾಲ್ಗೊಳ್ಳಬಹುದು ಎಂದು ಇಸ್ರೊ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ಪಾಲ್ಗೊಳ್ಳಲು ಈ ಅಂತರ್ಜಾಲ https://isroquiz.mygov.in/ ತಾಣವನ್ನು ಸಂಪರ್ಕಿಸಬಹುದು.

ಈವರೆಗೂ 1.75 ಲಕ್ಷ ಜನ ಈ ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ಬಹುಮಾನ ಗೆದ್ದ ವಿಜೇತರಿಗೆ ₹1ಲಕ್ಷ ನಗದು ಬಹುಮಾನ ಸಿಗಲಿದೆ. ಎರಡನೇ ಬಹುಮಾನ ₹75 ಸಾವಿರ ಹಾಗೂ ಮೂರನೇ ಬಹುಮಾನ ₹50 ಸಾವಿರ ಸಿಗಲಿದೆ. ಮೊದಲ ಸಮಾಧಾನಕರ ಬಹುಮಾನವಾಗಿ ನೂರು ಜನರಿಗೆ ತಲಾ ₹2 ಸಾವಿರ ಸಿಗಲಿದೆ. 2ನೇ ಸಮಾಧಾನಕರ ಬಹುಮಾನವಾಗಿ 200 ಜನರಿಗೆ ತಲಾ ₹1 ಸಾವಿರ ಸಿಗಲಿದೆ.

ಸರಳವಾದ ಅರ್ಜಿಯಲ್ಲಿ ಸ್ವವಿವರ ತುಂಬುವ ಮೂಲಕ ಈ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.