ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ 5 ವರ್ಷಗಳಲ್ಲಿ 50 ಉಪಗ್ರಹ ಉಡಾವಣೆ ಮಾಡಲು ಯೋಜನೆ: ಇಸ್ರೋ ಅಧ್ಯಕ್ಷ

Published 29 ಡಿಸೆಂಬರ್ 2023, 7:59 IST
Last Updated 29 ಡಿಸೆಂಬರ್ 2023, 7:59 IST
ಅಕ್ಷರ ಗಾತ್ರ

ಮುಂಬೈ: ಭಾರತ ಮುಂದಿನ 5 ವರ್ಷಗಳಲ್ಲಿ 50 ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ ಹೇಳಿದರು.

ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮ 'ಟೆಕ್‌ಫೆಸ್ಟ್' ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಸೈನಿಕರ ಚಲನವಲನವನ್ನು ಮೇಲ್ವಿಚಾರಣೆ ಮಾಡುವ ಹಾಗೂ ಸಾವಿರಾರು ಕಿ.ಮೀ ಪ್ರದೇಶದ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯದೊಂದಿಗೆ ವಿವಿಧ ಕಕ್ಷೆಗಳಲ್ಲಿ ಉಪಗ್ರಹಗಳ ಪದರ ರಚನೆಯನ್ನು ಈ ಯೋಜನೆ ಒಳಗೊಂಡಿದೆ ಎಂದು ಹೇಳಿದರು.

ಬದಲಾವಣೆ ಪತ್ತೆಹಚ್ಚಲು ಉಪಗ್ರಹಗಳ ಸಾಮರ್ಥ್ಯ ಹೆಚ್ಚಿಸುವುದು, ಎಐ ಸಂಬಂಧಿತ ಹಾಗೂ ಡೇಟಾ ಚಾಲಿತ ಪ್ರಯತ್ನ ಡೇಟಾ ವಿಶ್ಲೇಷಣೆಗೆ ಮುಖ್ಯ. ಬಾಹ್ಯಾಕಾಶ ನೌಕೆ ದೇಶದ ಗಡಿ ಮತ್ತು ನೆರೆಯ ಪ್ರದೇಶಗಳ ಮೇಲೆ ನಿಗಾ ಇಡುವ ಸಾಮರ್ಥ್ಯ ಹೊಂದಿದೆ. ಇವೆಲ್ಲವನ್ನು ಉಪಗ್ರಹಗಳ ಮೂಲಕ ನೋಡಬಹುದು. ಇದಕ್ಕಾಗಿ ನಾವು ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದೇವೆ. ಆದರೆ ಸದ್ಯ ವಿಭಿನ್ನ ಚಿಂತನೆಯ ಮಾರ್ಗವಿದೆ. ನಾವು ಅದನ್ನು ವಿಮರ್ಶಾತ್ಮಕ ರೀತಿಯಲ್ಲಿ ನೋಡಬೇಕಾಗಿದೆ ಎಂದರು.

ಭಾರತ ಈ ಮಟ್ಟದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲು ಸಾಧ್ಯವಾದರೆ, ದೇಶ ಎದುರಿಸುತ್ತಿರುವ ಅಪಾಯಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ ಎಂದು ಸೋಮನಾಥ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT