ಸೋಮವಾರ, ಮಾರ್ಚ್ 27, 2023
32 °C

ಮೇ 16ಕ್ಕೆ ರಕ್ತ ಚಂದ್ರಗ್ರಹಣ: ಜಗತ್ತಿನ ಎಲ್ಲೆಲ್ಲಿ ಗೋಚರ? ಭಾರತದಲ್ಲಿ ಕಾಣುವುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2022ನೇ ವರ್ಷದ ಮೊದಲ ರಕ್ತ ಚಂದ್ರಗ್ರಹಣ ಮೇ 15, 16ರಂದು ಜಗತ್ತಿನ ಹಲವು ಭಾಗಗಳಲ್ಲಿ ಗೋಚರಿಸಲಿದೆ.

ಈ ಚಂದ್ರಗ್ರಹಣ ಮೇ ವಾರಾಂತ್ಯದಲ್ಲಿ ಯುರೋಪ್‌, ಆಫ್ರಿಕಾ, ಅಂಟಾರ್ಟಿಕಾ, ಅಮೆರಿಕ ಸೇರಿದಂತೆ ಪೂರ್ವ ಪೆಸಿಫಿಕ್‌ ಭಾಗಗಳಲ್ಲಿ ಸಂಪೂರ್ಣವಾಗಿ ಕಾಣಲಿದೆ. ಇನ್ನು ಭಾಗಶಃ ಪ್ರಮಾಣದಲ್ಲಿ ನ್ಯೂಜಿಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ರಕ್ತ ಚಂದ್ರಗ್ರಹಣ ಕೆಲವು ದೇಶಗಳಲ್ಲಿ ಮೇ 15ಕ್ಕೆ ಗೋಚರಿಸಿದರೆ, ಮತ್ತೆ ಕೆಲವು ಭಾಗಗಳಲ್ಲಿ ಮೇ 16ರಂದು ಕಾಣಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.


ಗ್ರಹಣ ಚಿತ್ರ

ಈ ರಕ್ತ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಭಾರತದಲ್ಲಿ 2022ರ ನವೆಂಬರ್‌ನಲ್ಲಿ ಚಂದ್ರಗ್ರಹಣ ಗೋಚರಿಸಲಿದೆ.

ಹಾಗೇ ಅಕ್ಟೋಬರ್‌ ತಿಂಗಳಲ್ಲಿ ಸೂರ್ಯ ಗ್ರಹಣ ಸಂಭವಿಸಲಿವೆ. ಈ ಎರಡು ಗ್ರಹಣಗಳು ಭಾರತದಲ್ಲಿ ಗೋಚರಿಸುವುದು ವಿಶೇಷ.

ಸೂರ್ಯ ಮತ್ತು ಭೂಮಿಯ ಸಮಾನಾಂತರ ರೇಖೆಯಲ್ಲಿ ಚಂದ್ರ ಹಾದು ಹೋಗಲಿದೆ. ಭೂಮಿಯು ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಮರೆ ಮಾಡುವುದರಿಂದ ಅರೆ ನೆರಳು–ಬೆಳಕಿನ ಆಟದಲ್ಲಿ ಚಂದ್ರ ಕೆಂಪೇರಲಿದೆ. ಇದನ್ನು ರಕ್ತ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. 

ಗ್ರಹಣದ ಸಮಯದಲ್ಲಿ ಗಾಢ ಕೆಂಪು ಬಣ್ಣದಲ್ಲಿ ಗೋಚರಿಸಲಿರುವ ಚಂದ್ರನನ್ನು ಕಾಣಲು ಜಗತ್ತಿನಾದ್ಯಂತ ನಕ್ಷತ್ರ ವೀಕ್ಷಕರು, ಖಗೋಳ ತಜ್ಞರು ಸಿದ್ಧತೆ ನಡೆಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು