ಜಾನ್ ಇರ್ವಿನ್ ಅವರ ಒಂದು ಅತ್ಯುತ್ತಮ ಕಾದಂಬರಿ ‘ಏ ಪ್ರೇಯರ್ ಫಾರ್ ಓವೆನ್ ಮೀನಿ’. ಅದರಲ್ಲಿ ನೆನಪಿನ ಕುರಿತು ಅವರು ಹೀಗೆ ಬರೆದಿದ್ದಾರೆ: ‘ನೆನಪು ದೈತ್ಯಾಕಾರದ ರಾಕ್ಷಸ - ನಾವು ಮರೆಯಬಹುದು, ಆದರೆ ಅದಲ್ಲ. ಅದು ಒಂದುಕಡೆ ವಿಷಯಗಳನ್ನು ಸಂಗ್ರಹಿಸಿಬಿಡುತ್ತದೆ. ನಮಗಾಗಿ ವಿಷಯಗಳನ್ನು ಎದುರಿಗೆ ತರಬಲ್ಲದು ಇಲ್ಲವೇ ಮರೆಯಲ್ಲಿಡಬಹುದು. ಹಾಗೆಯೇ ಅದರ ಇಚ್ಚೆಯಂತೆ ಅವುಗಳು ಮರುಕಳಿಸಲೂಬಹುದು. ನಾವು ನಮ್ಮಲ್ಲಿ ನೆನಪಿದೆ ಅಂದುಕೊಳ್ಳುತ್ತೇವೆ; ಅದರೆ ಅದರೊಳಗೆ ನಾವಿದ್ದೇವೆ’.

ಈಗ ವಿಚಾರ ಮಾಡಿ ನಮಗೆ ನೆನಪುಗಳೇ ಇಲ್ಲದೆ ಹೋದರೆ? ನಮ್ಮ ಗುರುತೇ ಇರದು; ನಮ್ಮ ಯಶೋಗಾಥೆ ಅಳಿಸಿ ಹೋಗುವುದು; ನಿನ್ನೆಯು ಕಳೆದು, ನಾಳೆಗಳು ಮುಸುಕಲಿ ಮಬ್ಬಾಗುವವು; ನೆನಪಿಲ್ಲದೆ ಹೋದರೆ ನಮ್ಮ ಅಸ್ತಿತ್ವವೇ ಇಲ್ಲದಾಗುವುದು! ಮನುಷ್ಯ ನೆನಪುಗಳನ್ನು ಸೆರೆಹಿಡಿಯಲು, ಅದನ್ನು ಬದಲಿಸಲು, ಕೆಟ್ಟ ನೆನಪುಗಳನ್ನು ಅಳಿಸಿ ಕೇವಲ ಸವಿ ನೆನಪುಗಳನ್ನೇ ಇಟ್ಟುಕೊಳ್ಳಲು ನೂರಾರು ವರ್ಷಗಳಿಂದ ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದಾನೆ. ‘ಬದುಕಿನಲ್ಲಿ ನೆಮ್ಮದಿಗೆ ಕಹಿನೆನಪುಗಳೂ ಒಂದು ಕಾರಣ’ ಎಂದು ಪ್ರಸಿದ್ಧ ರೋಮನ್ ಚಿಂತಕ ಸಿಸರೋ ಹೇಳುತ್ತಾರೆ. ಕಳೆದ ಒಂದು ದಶಕದಲ್ಲಿ ನೆನಪನ್ನು ಪರಿಷ್ಕರಿಸುವ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ತುಸು ಯಶಸ್ಸು ಸಿಕ್ಕಿದೆ. ಈ ತಂತ್ರಜ್ಞಾನವೇ ‘ಮೆಮೊರಿ ಎಡಿಟಿಂಗ್’.

ಮೆಮೊರಿಯ ಬಗೆಗಳು

ನಾವು ಪ್ರತಿ ಕ್ಷಣವೂ ಏನನ್ನು ಪಂಚೇಂದ್ರಿಯಗಳ ಮೂಲಕ ಗ್ರಹಿಸುತ್ತೇವೆಯೋ ಅವೆಲ್ಲವೂ ದತ್ತಾಂಶದ ರೂಪದಲ್ಲಿ ಮಿದುಳಿನಲ್ಲಿ ಶೇಖರವಾಗಿರುತ್ತದೆ; ಬೇಕಾದಾಗ ಮತ್ತೆ ಮರುಕಳಿಸುವ ಮೂಲಕ ಮಾಹಿತಿಗಳ ರೂಪದಲ್ಲಿ ಹೊರಬರುತ್ತದವೆ. ಇವೇ ನೆನಪುಗಳು. ವಿಜ್ಞಾನಿಗಳು ಸ್ಮರಣೆಯನ್ನು ಮೂರು ಬಗೆಯಲ್ಲಿ ವಿಂಗಡಿಸಿದ್ದಾರೆ: ಒಂದು – ಇಂದ್ರಿಯ ಸ್ಮರಣೆ (ಸೆನ್ಸರಿ ಮೆಮೊರಿ), ಎರಡು – ಕ್ಷಣಿಕ ಸ್ಮರಣೆ (ಶಾರ್ಟ್ ಟರ್ಮ್ ಮೆಮೊರಿ) ಹಾಗೂ ಮೂರು – ಧೀರ್ಘ ಕಾಲದ ಸ್ಮರಣೆ (ಲಾಂಗ್ ಟರ್ಮ್ ಮೆಮೊರಿ). ದೀರ್ಘಕಾಲದ ಸ್ಮೃತಿಯಲ್ಲಿ ಎರಡು ಬಗೆಗಳಿವೆ. ಮೊದಲನೆಯದು, ಸ್ಪಷ್ಟ ನೆನಪು. ಇದಕ್ಕೆ ಉದಾಹರಣೆ: ವ್ಯಕ್ತಿಗಳ ಅಥವಾ ಊರಿನ ಹೆಸರು. ಎರಡನೆಯದು, ಸೂಚ್ಯ ನೆನಪು. ಅದು ನಮ್ಮೊಳಗೆ ನಮಗೆ ಅರಿವಿಗೆ ಇಲ್ಲದಂತೆ ರೂಢಿಯಾಗಿರುತ್ತದೆ. ಒಮ್ಮೆ ಕಲಿತರೆ ಸಾಕು ಮತ್ತೆ ಮರೆಯಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಎಂದರೆ ಸೈಕಲ್ ಓಡಿಸುವುದು, ಈಜುವುದು.

ನೆನಪಿನ ಸಂಗ್ರಹ ಹೇಗೆ?

ಗಣಕಯಂತ್ರದೊಳಗೆ ಹೇಗೆ ಮೆಮೊರಿಯು ಹಾರ್ಡ್ಡ್ರೈವ್ನಲ್ಲಿ ಸಂಗ್ರಹವಾಗಿರುತ್ತದೆಯೋ ಹಾಗೆ ನಮ್ಮ ನೆನಪುಗಳು ಮಿದುಳಿನ ಒಂದು ನಿರ್ದಿಷ್ಟ ಭಾಗದಲ್ಲಿ ಸಂಗ್ರಹವಾಗುವುದಿಲ್ಲ; ಅದು ಮಿದುಳಿನ ಬೇರೆ ಬೇರೆ ಭಾಗಗಳಲ್ಲಿ ಹಂಚಿಕೆಯಾಗಿರುತ್ತದೆ.

ಹಿಪೊಕ್ಯಾಂಪಸ್: ಇದು ಹೊಸ ನೆನಪುಗಳಿಗೆ ‘ಇಂಡೆಕ್ಸಿಂಗ್ ಸೆಂಟರ್’ ಆಗಿ ಕಾರ್ಯನಿರ್ವಹಿಸುತ್ತದೆ.

ನಿಯೋಕಾರ್ಟೆಕ್ಸ್: ಇದರಲ್ಲಿ ದೀರ್ಘಕಾಲದ ಜ್ಞಾನವು ಕಾಯಂ ಆಗಿ ಸಂಗ್ರಹವಾಗಿರುವುದು.

ಅಮಿಗ್ಡಾಲಾ: ನಮ್ಮ ನೆನಪುಗಳಿಗೆ ಭಾವನಾತ್ಮಕ ಸ್ಪರ್ಶವನ್ನು ನೀಡುವುದು ಅಮಿಗ್ಡಾಲಾ. ಹೀಗಾಗಿಯೇ ಮೊದಲ ಚುಂಬನ ಅಥವಾ ಮಾರಣಾಂತಿಕ ಹಲ್ಲೆಗಳಂತಹ ಮಹತ್ವದ ಘಟನೆಗಳು ಅಷ್ಟು ಸ್ಪಷ್ಟವಾಗಿ ನೆನಪಿನಲ್ಲಿರುತ್ತವೆ.

ಜೀವಕೋಶದ ಮಟ್ಟದಲ್ಲಿ ನೋಡುವುದಾದರೆ ನೆನಪುಗಳು ‘ಎನ್ಗ್ರಾಂ’ಗಳಾಗಿ (Engrams) ರೂಪಗೊಂಡಿರುತ್ತವೆ. ‘ಲಾಂಗ್-ಟರ್ಮ್ ಪೊಟೆನ್ಶಿಯೇಶನ್’ (LTP) ಎಂಬ ಪ್ರಕ್ರಿಯೆಯ ಮೂಲಕ ನರಕೋಶಗಳು ಅಥವಾ ನ್ಯೂರಾನ್ಗಳ ನಡುವಿನ ಸಂಪರ್ಕಗಳು ಬಲಗೊಳ್ಳುತ್ತ, ಜೈವಿಕ ಸರ್ಕ್ಯೂಟ್ನಲ್ಲಿ ನೆನಪುಗಳು ‘ಬರೆಯಲ್ಪಡುತ್ತವೆ’.

ಮೆಮೊರಿ ಎಡಿಟಿಂಗ್

ಇದು ನರವಿಜ್ಞಾನ ಹಾಗೂ ಬಯೋ ಇಂಜಿನಿಯರಿಂಗ್ ಕ್ಷೇತ್ರದ ಒಂದು ವಿಶೇಷವಾದ ಭಾಗವಾಗಿದೆ. ನಮ್ಮ ಮಿದುಳಿನ ನಿರ್ದಿಷ್ಟವಾದ ನೆನಪುಗಳನ್ನು ಉದ್ದೇಶಪೂರ್ವಕವಾಗಿ ತಿದ್ದುಪಡಿಮಾಡುವ (ಅಳಿಸುವುದು, ಬದಲಾಯಿಸುವುದು, ಅಥವಾ ವರ್ಧಿಸುವುದು) ಪ್ರಕ್ರಿಯೆಯನ್ನು ‘ಸ್ಮೃತಿ ಪರಿಷ್ಕರಣೆ’ ಎನ್ನುತ್ತಾರೆ. ಇಂದು ಈ ವಿಚಾರವು ಕಾಲ್ಪನಿಕ ವಿಜ್ಞಾನದ ಸಿನೆಮಾಗಳಿಂದ ಹೊರಗಡೆ ಬಂದು ಪ್ರಯೋಗಾಲಯದ ತನಕ ತನ್ನ ಪಯಣವನ್ನು ಮುಂದುವರಿಸಿದೆ. ಇಂದು ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಈ ಕ್ಷೇತ್ರದಲ್ಲಿ ಸತತವಾದ ಪ್ರಯೋಗಗಳು ನಡೆಯುತ್ತಿವೆ.

1. ಆಪ್ಟೋಜೆನೆಟಿಕ್ಸ್: ಈ ತಂತ್ರಜ್ಞಾನವು ಲೇಸರ್ ಬೆಳಕನ್ನು ಬಳಸಿ ನಿರ್ದಿಷ್ಟ ‘ಸ್ಮರಣ ನರಕೋಶಗಳನ್ನು’ ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸುವಂತಹದ್ದು.

2. ‘CRISPR’ ಮತ್ತು ಎಪಿಜೆನೆಟಿಕ್ ಎಡಿಟಿಂಗ್: ಜೀನ್-ಎಡಿಟಿಂಗ್ ಉಪಕರಣಗಳನ್ನು ಬಳಸಿ ಸ್ಮರಣಶಕ್ತಿಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಪ್ರಯತ್ನಿಸುವುದೇ ಈ ತಂತ್ರಜ್ಞಾನ ಗುರಿ.

3. ಪ್ರೊಪ್ರಾನೊಲೋಲ್: ಔಷಧದ ಮೂಲಕ ಆಘಾತಕಾರಿ ನೆನಪುಗಳ ತೀವ್ರತೆಯನ್ನು ಕಡಿಮೆ ಮಾಡುವುದು ಇಲ್ಲಿಯ ವಿಶೇಷತೆ.

ಮೆಮೊರಿ ಎಡಿಟಿಂಗ್ ಕ್ಷೇತ್ರದ ಪ್ರವರ್ತಕರು ಹಲವರಿದ್ದಾರೆ. ಎರಿಕ್ ಕಾಂಡೆಲ್ ಎನ್ನುವವರು ಸ್ಮರಣೆಯ ಆಣ್ವಿಕ ಆಧಾರವನ್ನು ಕಂಡುಹಿಡಿದವರು. ಅವರ ಈ ಅನ್ವೇಷಣೆಗೆ ನೊಬೆಲ್ ಪ್ರಶಸ್ತಿ ಲಭಿಸಿದೆ. ಸ್ಟೀವ್ ರಾಮಿರೆಜ್ ಮತ್ತು ಷು ಲಿಯು ಈ ಇಬ್ಬರು ವಿಜ್ಞಾನಿಗಳು ಸೇರಿ ಇಲಿಗಳಲ್ಲಿ ಕೃತಕ ನೆನಪುಗಳನ್ನು ಸೃಷ್ಟಿಸುವ ಪ್ರಯೋಗಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಎಲಿಜಬೆತ್ ಲೋಫ್ಟಸ್ ಇವರು ಮಾನವನ ಸ್ಮರಣೆಯನ್ನು ಎಷ್ಟು ಸುಲಭವಾಗಿ ಕುಶಲತೆಯಿಂದ ಬದಲಾಯಿಸಬಹುದು ಎಂದು ತೋರಿಸಿಕೊಟ್ಟವರು.

ಮೆಮೊರಿ ಎಡಿಟಿಂಗ್ ಭವಿಷ್ಯದಲ್ಲಿ ಹಲವಾರು ಮಾನಸಿಕ ಕಾಯಿಲೆಗಳನ್ನು ಗುಣಪಡಿಸುವ ಭರವಸೆಯನ್ನು ಹೊತ್ತು ತಂದಿದೆ. ಮನುಷ್ಯರ ಮೇಲೆ ಇನ್ನೂ ಹೆಚ್ಚಿನ ಪ್ರಯೋಗವು ನಡೆದಿಲ್ಲ. ಇಂದು ಆ ಪ್ರಯೋಗಗಳನ್ನು ನಡೆಸಲೂ ಕೂಡ ನೈತಿಕ ಸವಾಲುಗಳು ಎದುರಾಗಿವೆ. ನಮ್ಮ ನೋವನ್ನು ನಾವು ಅಳಿಸಿಹಾಕಿದರೆ, ಅದರೊಂದಿಗೆ ಬರುವ ಬುದ್ಧಿವಂತಿಕೆಯನ್ನು ನಾವು ಕಳೆದುಕೊಳ್ಳುತ್ತೇವೆಯೇ? ನೆನಪುಗಳನ್ನು ಕದಿಯಬಹುದಾದರೆ ಮುಂದೆ ಹೋದಂತೆ ನಮ್ಮ ಇತಿಹಾಸವನ್ನು ನಾವು ನಂಬಬಹುದೇ? ಚಿಕಿತ್ಸೆ ಹಾಗೂ ಮಾನವೀಯ ಮೌಲ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದೇ ಈ ತಂತ್ರಜ್ಞಾನದ ಸವಾಲಾಗಿದೆ.