ಇಂಗಾಲದ ಡೈ ಆಕ್ಸೈಡ್‌ ಹೆಚ್ಚಳದಿಂದ ಭಾರತೀಯರಲ್ಲಿ ಪೌಷ್ಟಿಕಾಂಶದ ಸಮಸ್ಯೆ

7

ಇಂಗಾಲದ ಡೈ ಆಕ್ಸೈಡ್‌ ಹೆಚ್ಚಳದಿಂದ ಭಾರತೀಯರಲ್ಲಿ ಪೌಷ್ಟಿಕಾಂಶದ ಸಮಸ್ಯೆ

Published:
Updated:
Deccan Herald

ಬಾಸ್ಟನ್‌: ಇಂಗಾಲದ ಡೈ ಆಕ್ಸೈಡ್ ಹೆಚ್ಚಳದಿಂದ 2050ರ ಹೊತ್ತಿಗೆ ಕೋಟ್ಯಂತರ ಭಾರತೀಯರು ಪೌಷ್ಟಿಕಾಂಶದ ಕೊರತೆಯಿಂದ ತೊಂದರೆಗೆ ಸಿಲುಕಲಿದ್ದಾರೆ ಎಂದು ಅಧ್ಯಯನವೊಂದು ಎಚ್ಚರಿಸಿದೆ. ಇಂಗಾಲದ ಅಂಶ ಏರಿಕೆಯಿಂದ ಪ್ರಧಾನ ಬೆಳೆಗಳಾದ ಅಕ್ಕಿ ಮತ್ತು ಗೋಧಿ ಸತ್ವಹೀನವಾಗಲಿವೆ ಎಂದು ತಿಳಿಸಿದೆ.

ಮಾನವನಿಂದಾಗಿಯೇ ಇಂಗಾಲದ ಡೈ ಆಕ್ಸೈಡ್‌ ಮಟ್ಟ ಏರಿಕೆಯಾಗುತ್ತದೆ. ಇದರಿಂದ ವಿಶ್ವದಾದ್ಯಂತ 17.5 ಕೋಟಿ ಜನರಲ್ಲಿ ಸತುವಿನ ಅಂಶದ ಕೊರತೆ ಮತ್ತು 12.2 ಕೋಟಿ ಜನರು ಪೌಷ್ಟಿಕಾಂಶ ಕೊರತೆ ಎದುರಿಸಲಿದ್ದಾರೆ ಎಂದು ಅಮೆರಿಕದ ಹಾರ್ವರ್ಡ್‌ ಟಿಎಚ್‌ ಚಾನ್‌ ಸ್ಕೂಲ್‌ನ ಸಾರ್ವಜನಿಕ ಆರೋಗ್ಯ ವಿಭಾಗ ನಡೆಸಿದ ಅಧ್ಯಯನ ತಿಳಿಸಿದೆ.

ಇಂಗಾಲದ ಅಂಶ ಏರಿಕೆಯಿಂದ ಕೋಟ್ಯಂತರ ಮಹಿಳೆ ಮತ್ತು ಮಕ್ಕಳು ಕಬ್ಬಿಣದ ಅಂಶದಿಂದ ವಂಚಿತರಾಗುತ್ತಾರೆ. ಇದರಿಂದಾಗಿ ಅವರಲ್ಲಿ ರಕ್ತಹೀತನೆ ಮತ್ತು ಇತರೆ ರೋಗಗಳು ಕಾಣಿಸಿಕೊಳ್ಳುತ್ತವೆ ಎಂದು ಅಧ್ಯಯನ ತಿಳಿಸಿದೆ.

ಭಾರತದಲ್ಲಿ ಇಂಗಾಲದ ಏರಿಕೆಯಿಂದ ಅಪಾರ ಹಾನಿಯಾಗಲಿದೆ. 5 ಕೋಟಿ ಜನರು ಸತುವಿನ ಅಂಶ ಕೊರತೆ ಎದುರಿಸಲಿದ್ದಾರೆ. 3.8 ಕೋಟಿ ಜನರು ಪೌಷ್ಟಿಕಾಂಶದ ಕೊರತೆಯಿಂದ, 50.2 ಕೋಟಿ ಮಹಿಳೆಯರು ಮತ್ತು ಮಕ್ಕಳು ಕಬ್ಬಿಣದ ಅಂಶ ಕೊರತೆಯ ಕಾಯಿಲೆಗೆ ತುತ್ತಾಗಲಿದ್ದಾರೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !