ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡೆಕಲ್ಲು ಕೊರೆದು ಮೊದಲ ಮಾದರಿ ಸಂಗ್ರಹಿಸಿದ ನಾಸಾದ ಪರ್ಸಿವಿಯರೆನ್ಸ್ ರೋವರ್‌

Last Updated 3 ಸೆಪ್ಟೆಂಬರ್ 2021, 2:30 IST
ಅಕ್ಷರ ಗಾತ್ರ

ಕೇಪ್ ಕೆನವೆರಲ್ (ಅಮೆರಿಕ): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಮಂಗಳ ಗ್ರಹಕ್ಕೆ ಕಳುಹಿಸಿದ್ದ ಪರ್ಸಿವಿಯರೆನ್ಸ್ ರೋವರ್‌ ನೌಕೆಯು, ಬಂಡೆಕಲ್ಲನ್ನು ಕೊರೆದು ಮೊದಲ ಮಾದರಿಯನ್ನು ಯಶಸ್ವಿಯಾಗಿ ಸಂಗ್ರಹಿಸಿದೆ.

ನಾಸಾ ಮಹತ್ವಾಕಾಂಕ್ಷಿ ಯೋಜನೆಯ ಅಡಿಯಲ್ಲಿ ಮಂಗಳ ಗ್ರಹದಲ್ಲಿ ಜೀವಿಗಳು, ಸೂಕ್ಷ್ಮಾಣು ಜೀವಿಗಳ ಕುರುಹಗಳ ಬಗ್ಗೆ ಪರಿಶೀಲಿಸಲು ಮತ್ತು ಅಲ್ಲಿನ ಮಣ್ಣು-ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲು ಪರ್ಸಿವಿಯರೆನ್ಸ್ ರೋವರ್ ನೌಕೆಯನ್ನು ರವಾನಿಸಿತ್ತು.

ಬಂಡೆಕಲ್ಲಿನ ಮಾದರಿ ಸಂಗ್ರಹಿಸಲು ಕಳೆದ ತಿಂಗಳಲ್ಲಿ ನಡೆಸಿದ ಪ್ರಯತ್ನವು ವಿಫಲಗೊಂಡಿತ್ತು. ಆದರೆ ಈ ಬಾರಿ ಯಶಸ್ವಿಯಾಗಿರುವ ಚಿತ್ರವನ್ನು ನಾಸಾ ಹಂಚಿಕೊಂಡಿದೆ.

ಬಂಡೆಕಲ್ಲಿನ ವಿವಿಧ ಕೋನಗಳನ್ನು ಪರಿಶೀಲಿಸಿದ ಬಳಿಕ ಗುರಿ ನಿಗದಿಪಡಿಸಿ ಡ್ರಿಲ್ ಮಾಡುವ ಮೂಲಕ ಮಾದರಿ ಸಂಗ್ರಹಿಸಿದೆ.

'ಇದು ಪರಿಪೂರ್ಣ ಸ್ಯಾಂಪಲ್ ಆಗಿದ್ದು, ಬಂಡೆಕಲ್ಲಿನ ಮಾದರಿ ಸಂಗ್ರಹಿಸುವುದರಲ್ಲಿ ಯಶಸ್ವಿಯಾಗಿರುವುದರಲ್ಲಿಬಹಳ ಸಂತಸಗೊಂಡಿದ್ದೇನೆ' ಎಂದು ಪರ್ಸಿವಿಯರೆನ್ಸ್ ರೋವರ್‌ನ ಮುಖ್ಯ ಎಂಜಿನಿಯರ್ ಆ್ಯಡಂ ಸ್ಟೆಲ್‌ಜ್ನರ್‌ ತಿಳಿಸಿದ್ದಾರೆ.

ಕಳೆದ ತಿಂಗಳು ಮೃದುವಾದ ಬಂಡೆಕಲ್ಲಿನಲ್ಲಿ ಕೊರೆಯುವ ಪ್ರಯತ್ನ ಮಾಡಿದರೂ ಟೈಟಾನಿಯಂ ಟ್ಯೂಬ್ ಒಳಗಡೆ ಮಾದರಿಯು ಸಂಗ್ರಹವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT