ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೋಟಿನ್ ಆಧಾರಿತ ಲಸಿಕೆ ಮೂಲಕ ದೃಢವಾದ ಪ್ರತಿ ಕಾಯ: ಸಂಶೋಧನೆ

Last Updated 13 ಆಗಸ್ಟ್ 2021, 10:59 IST
ಅಕ್ಷರ ಗಾತ್ರ

ನ್ಯೂಯಾರ್ಕ್: ವಿಜ್ಞಾನಿಗಳು ಪ್ರೋಟಿನ್ ಆಧಾರಿತ ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಅದು ವೈರಸ್‌ನ ಆಕಾರವನ್ನು ಅನುಕರಿಸುವ ಮೂಲಕ ಪ್ರಾಣಿಗಳಲ್ಲಿ ದೃಢವಾದ ಪ್ರತಿಕಾಯ ಉತ್ಪಾದನೆಗೆ ಪ್ರಚೋದಿಸುತ್ತಿದೆ ಎಂದು ತಿಳಿದುಬಂದಿದೆ.

ಎಸಿಎಸ್‌ ಸೆಂಟ್ರಲ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸಂಶೋಧಕರು ಇಲಿಗಳಿಗೆ ಕೋವಿಡ್ -19 ಗೆ ಕಾರಣವಾಗುವ ವೈರಸ್ ಸಾರ್ಸ್-ಕೋವ್-2 ಅನ್ನು ಅನುಕರಿಸುವ ನ್ಯಾನೊಪರ್ಟಿಕಲ್ಸ್‌ನಿಂದ ಲಸಿಕೆ ನೀಡಿದರು. ಬಳಿಕ, ಇಲಿ ದೇಹದಲ್ಲಿ ಪ್ರತಿಕಾಯಗಳು ಉತ್ಪಾದನೆಯಾಗಿರುವುದು ಕಂಡುಬಂದಿದೆ.

ವೈರಸ್, ಮಾನವ ಜೀವಕೋಶಗಳಿಗೆ ಪ್ರವೇಶಿಸಲು ಮತ್ತು ಸೋಂಕು ಹರಡಲು ಕಾರಣವಾಗುವ ಸಾರ್ಸ್-ಕೋವ್-2 ಸ್ಪೈಕ್ ಪ್ರೋಟಿನ್‌ನ ಒಂದು ಭಾಗವಾದ ಆರ್‌ಬಿಡಿಯನ್ನು ಗುರುತಿಸಿ ರಕ್ಷಣೆ ಒದಗಿಸಲು ಪ್ರೋಟಿನ್ ಆಧಾರಿತ ಲಸಿಕೆಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ.

ಅಮೆರಿಕದ ಚಿಕಾಗೊ ವಿಶ್ವವಿದ್ಯಾಲಯದ ಸಂಶೋಧಕರು ಈ ಹಿಂದೆ ಪಾಲಿಮರ್ಸೋಮ್ಸ್ ಎಂಬ ಸ್ವಯಂ ಲಸಿಕೆ, ಗೋಳಾಕಾರದ ನ್ಯಾನೊಪಾರ್ಟಿಕಲ್ಸ್ ಎಂಬ ಲಸಿಕೆ ವಿತರಣಾ ಸಾಧನವನ್ನು ಅಭಿವೃದ್ಧಿಪಡಿಸಿದ್ದರು.

ಸಂಶೋಧಕರು ಸಾರ್ಸ್-ಕೋವ್-2ಗೆ ಸಮಾನವಾದ ಪಾಲಿಮರ್ಸೋಮ್‌ಗಳನ್ನು ತಯಾರಿಸಿ ಅವುಗಳಿಗೆ ಅನೇಕ ಆರ್‌ಬಿಡಿ ಪ್ರೋಟಿನ್ ಕೋಟ್ ಮಾಡಿದ್ದರು.

ಪ್ರಯೋಗಾಲಯದಲ್ಲಿ ನ್ಯಾನೊ ಕಣಗಳನ್ನು ಅಭಿವೃದ್ಧಿಪಡಿಸಿದ ನಂತರಅವುಗಳನ್ನು ಮೂರು ವಾರಗಳ ಅಂತರದಲ್ಲಿ ಎರಡು ಡೋಸ್ ರೀತಿ ಇಲಿಗಳಿಗೆ ನೀಡಿದ್ದರು. ಈ ಸಂದರ್ಭ ಇಲಿಗಳ ದೇಹದಲ್ಲಿ ಪ್ರತಿಕಾಯಗಳು ಗಮನಾರ್ಹಮಟ್ಟದಲ್ಲಿ ಏರಿಕೆಯಾಗಿದ್ದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT