ಮಂಗಳ ಗ್ರಹ ಕೃಷಿಗೆ ಯೋಗ್ಯವೇ ಎಂಬುದನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಈ ಮಣ್ಣು!

7

ಮಂಗಳ ಗ್ರಹ ಕೃಷಿಗೆ ಯೋಗ್ಯವೇ ಎಂಬುದನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಈ ಮಣ್ಣು!

Published:
Updated:

ವಾಷಿಂಗ್ಟನ್: ಮಂಗಳನ ಅಂಗಳದಲ್ಲಿರುವಂಥ ಮಣ್ಣನ್ನು ವಿಜ್ಞಾನಿಗಳು ತಯಾರಿಸಿದ್ದಾರೆ. ಮಂಗಳನ ಅಂಗಳ ಕೃಷಿಗೆ ಯೋಗ್ಯವೇ ಎಂಬುದನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಲಿದೆ. ಅಮೆರಿಕದ ಯುನಿವರ್ಸಿಟಿ ಆಫ್ ಸೆಂಟ್ರಲ್ ಪ್ಲೋರಿಡಾದ (ಯುಸಿಎಫ್‌) ಸಂಶೋಧಕರು ವೈಜ್ಞಾನಿಕ ರೀತಿಯಲ್ಲಿ ಮಂಗಳನ ಮಣ್ಣನ್ನು ಹೋಲುವ ಮಣ್ಣು ತಯಾರಿಸಿದ್ದಾರೆ. 

ಮಂಗಳನ ಅಂಗಳದಲ್ಲಿ ವಾಸಿಸುವುದಾರೆ ನಮಗೆ ಆಹಾರ, ನೀರು ಮತ್ತು ಇತರ ವಸ್ತುಗಳು ಅತ್ಯಗತ್ಯ. ಹಾಗಾಗಿ ಈ ಯೋಚನೆಗಳನ್ನು ಹೇಗೆ ಕಾರ್ಯಗತಗೊಳಿಸುವುದು ಹೇಗೆ ಎಂಬುದರ ಬಗ್ಗೆ ನಾವು ಪರೀಕ್ಷೆ ಮಾಡಬೇಕಾಗಿದೆ ಎಂದು ಯುಸಿಎಫ್‍ನ  ಡಾನ್ ಬ್ರಿಟ್ ಹೇಳಿದ್ದಾರೆ. ಮಂಗಳದಲ್ಲಿರುವ ಮಣ್ಣನ್ನು ಹೋಲುವ ಮಣ್ಣು ಇದಾಗಿದ್ದು, ಇದರಲ್ಲಿ ಕೃಷಿ ಮಾಡಬಹುದೇ? ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕ್ಯೂರಿಯಾಸಿಟಿ ರೋವರ್ ನೌಕೆ ಮಂಗಳನ ಅಂಗಳದಿಂದ ತಂದ ಮಣ್ಣಿನ ರಾಸಾಯನಿಕ ಗುಣಗಳನ್ನು ಹೊಂದಿರುವ ಮಣ್ಣು ಇದಾಗಿದೆ.

ಈ ರೀತಿಯ ಮಣ್ಣಿಗೆ ಕಿ.ಗ್ರಾಂಗೆ 20 ಡಾಲರ್ (ಅಂದಾಜು ₹1450) ಮತ್ತು  ಅಂಚೆ ವೆಚ್ಚ ತಗಲುತ್ತದೆ. ಯುಸಿಎಫ್‍ಗೆ ಹಣ ಪಾವತಿ ಮಾಡುವ ಮೂಲಕ ಇದನ್ನು ಪಡೆದು ದೇಶದಾದ್ಯಂತ ಇರುವ ಲ್ಯಾಬ್‍ಗಳಲ್ಲಿ ಪ್ರಯೋಗ ಮಾಡಬಹುದಾಗಿದೆ. ಈಗಾಗಲೇ 30 ಆರ್ಡರ್‌ಗಳು ಬಾಕಿ ಇವೆ ಎಂದು ಯುಸಿಎಫ್ ಹೇಳಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !