ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3: ಎರಡು ಹಂತಗಳಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸುವ ಪ್ರಯತ್ನ

Published 22 ಆಗಸ್ಟ್ 2023, 12:19 IST
Last Updated 22 ಆಗಸ್ಟ್ 2023, 12:19 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ–3 ಯೋಜನೆಯ ಅಂತಿಮ ಘಟ್ಟಕ್ಕೆ ಬುಧವಾರ ಮುಹೂರ್ತ ನಿಗದಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡರ್‌ ಅನ್ನು ಯಶಸ್ವಿಯಾಗಿ ಇಳಿಸಲು ವಿಜ್ಞಾನಿಗಳು ಸಜ್ಜಾಗಿದ್ದಾರೆ.

ಲ್ಯಾಂಡಿಂಗ್‌ಗೆ ಅಗತ್ಯವಿರುವ 4800 ನ್ಯೂಟನ್ ನೂಕುಬಲವನ್ನು ವಿಕ್ರಮ್ ಲ್ಯಾಂಡರ್‌ ಹೊಂದುವುದು ಅತ್ಯಗತ್ಯ. ಚಂದ್ರನ ಸುತ್ತಲಿನ 30 ಕಿ.ಮೀ. ಕಕ್ಷೆಯಿಂದ ಎರಡು ಹಂತಗಳಲ್ಲಿ ಲ್ಯಾಂಡರ್ ಇಳಿಸುವ ಪ್ರಯತ್ನ ನಡೆಸಲು ಇಸ್ರೊ ಉದ್ದೇಶಿಸಿದೆ.

ನೂಕುಬಲವನ್ನು ಯಾವಾಗ ಆರಂಭಿಸಬೇಕು? ಚಂದ್ರನದಲ್ಲಿ ಇಳಿಯುವ ವೇಗವನ್ನು ತಗ್ಗಿಸುವುದು ಹೇಗೆ? ಲಂಭವಾಗಿ ಹಾಗೂ ಅಡ್ಡವಾಗಿ ಚಲಿಸುತ್ತಾ ಸುರಕ್ಷಿತವಾಗಿ ಚಂದ್ರನ ಅಂಗಳದಲ್ಲಿ ಇಳಿಸುವುದು ಹೇಗೆ? ಈ ಎಲ್ಲಾ ಪ್ರಕ್ರಿಯೆ ನಡೆಸುವಾಗ ಅದು ತನ್ನ ನಿರ್ದಿಷ್ಟ ಹಾದಿಯನ್ನು ತಪ್ಪದಂತೆಯೂ ಎಚ್ಚರವಹಿಸುವ ಕ್ರಮದ ಬಗ್ಗೆಯೂ ವಿಜ್ಞಾನಿಗಳು ಯೋಜನೆ ರೂಪಿಸುತ್ತಿದ್ದಾರೆ. ಈಗಾಗಲೇ ಲ್ಯಾಂಡರ್ ಕಳುಹಿಸಿರುವ ಚಂದ್ರನ ಚಿತ್ರಗಳೇ ಇದಕ್ಕೆ ಆಧಾರವಾಗಲಿವೆ.

ಚಂದ್ರನ ಒಂದು ಹಗಲು ಎಂದರೆ ಭೂಮಿಯ 14 ದಿನ. ಈ ಅವಧಿಯಲ್ಲೇ ಲ್ಯಾಂಡರ್ ಇಳಿಸುವ ಯೋಜನೆ ಇಸ್ರೊದ್ದು. ಒಂದೊಮ್ಮೆ ಲ್ಯಾಂಡಿಂಗ್‌ನಲ್ಲಿ ಸಮಸ್ಯೆಯಾದಲ್ಲಿ ಚಂದ್ರನ ರಾತ್ರಿ ಕಳೆಯುವವರೆಗೂ 14 ದಿನ ಕಾದು ಸೆಪ್ಟೆಂಬರ್‌ನಲ್ಲಿ ಲ್ಯಾಂಡರ್ ಇಳಿಸುವ ಯೋಜನೆ ಹೊಂದಿದೆ.

ಚಂದ್ರಯಾನ–3ರ ಕಾರ್ಯಾಚರಣೆಯ ಈವರೆಗಿನ ಹಂತಗಳು

  • ಜುಲೈ 6: ಚಂದ್ರಯಾನ–3 ಯೋಜನೆಗೆ ಜುಲೈ 14ರಂದು ದಿನಾಂಕ ನಿಗದಿಪಡಿಸಿ, ಶ್ರೀಹರಿಕೋಟಾದಿಂದ ರಾಕೆಟ್‌ ಉಡ್ಡಯನ ನಡೆಯಲಿದೆ ಎಂದು ಘೋಷಣೆ

  • ಜುಲೈ 7: ಉಡಾವಣಾ ವಾಹನದ ವಿದ್ಯುತ್‌ ವ್ಯವಸ್ಥೆಯ ಪರೀಕ್ಷೆ ಯಶಸ್ವಿ

  • ಜುಲೈ 11: ಉಡ್ಡಯನ ಪೂರ್ವ ಪರೀಕ್ಷೆ ಯಶಸ್ವಿ

  • ಜುಲೈ 14: ಎಲ್‌ವಿಎಂ3 ಎಂ4 ಉಡಾಯನಾ ವಾಹನವು ಚಂದ್ರಯಾನ–3 ಯೋಜನೆಯ ಉಪಕರಣಗಳನ್ನು ಹೊತ್ತು ನಿರ್ದಿಷ್ಟ ಕಕ್ಷೆಗೆ ಸೇರಿಸಿತು

  • ಜುಲೈ 15: ಭೂಮಿ ಸುತ್ತಲಿನ ಮೊದಲ ಹಂತದ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 41762 ಕಿ.ಮೀ. X 173 ಕಿ.ಮೀ. ಕಕ್ಷೆಗೆ

  • ಜುಲೈ 17: ಭೂಮಿ ಸುತ್ತಲಿನ ಎರಡನೇ ಹಂತದ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 41603 ಕಿ.ಮೀ.X226 ಕಿ.ಮೀ. ಕಕ್ಷೆಗೆ.

  • ಜುಲೈ 22: ಭೂಮಿ ಸುತ್ತಲಿನ 4ನೇ ಹಂತದ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 71351 ಕಿ.ಮೀ.X 233 ಕಿ.ಮೀ. ಕಕ್ಷೆಗೆ.

  • ಆಗಸ್ಟ್ 1: ಚಂದ್ರಯಾನ–3 ಚಂದ್ರನ ಸುತ್ತಲಿನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆ

  • ಆಗಸ್ಟ್‌ 6: ಚಂದ್ರನ ಸುತ್ತಲಿನ ಕಕ್ಷೆಯನ್ನು ಕುಗ್ಗಿಸುವಲ್ಲಿ ಯಶಸ್ವಿ. 170 ಕಿ.ಮೀ X 4313 ಕಿ.ಮೀ.

  • ಆಗಸ್ಟ್‌ 9: ಚಂದ್ರನ ಸುತ್ತಲಿನ ಕಕ್ಷೆಯನ್ನು ಮತ್ತೊಂದು ಹಂತಕ್ಕೆ ಇಳಿಸುವಲ್ಲಿ ಇಸ್ರೊ ಯಶಸ್ವಿ. 174 ಕಿ.ಮೀ. X 1437 ಕಿ.ಮೀ.

  • ಆಗಸ್ಟ್‌ 14: ಚಂದ್ರನ ಸಮೀಪ ತಲುಪಲು ಕಕ್ಷೆಯ ಮತ್ತೊಂದು ಸುತ್ತು ಇಳಿದ ನೌಕೆ. 150 ಕಿ.ಮೀ. X 177 ಕಿ.ಮೀ.

  • ಆಗಸ್ಟ್‌ 16: ಚಂದ್ರನ ಸುತ್ತ ಪರಿಭ್ರಮಣೆಯ ಕೊನೆಯ ಹಂತವನ್ನು ಯಶಸ್ವಿಯಾಗಿ ಪೂರೈಸಿದ ಇಸ್ರೊ. 163X153 ಕಿ.ಮೀ.

  • ಆಗಸ್ಟ್ 17: ನೌಕೆಯಿಂದ ಪ್ರತ್ಯೇಕಗೊಂಡ ಪ್ರಜ್ಞಾನ್ ರೋವರ್ ಹೊತ್ತ ವಿಕ್ರಮ್ ಲ್ಯಾಂಡರ್ 

  • ಆಗಸ್ಟ್‌ 18: ಚಂದ್ರಯಾನ 3 ಯೋಜನೆ ಯಶಸ್ವಿಯಾಗಿ ಡಿಬೂಸ್ಟಿಂಗ್‌ ಕಾರ್ಯಾಚರಣೆ ನಡೆಸಿ ಕಕ್ಷೆಯ ಅಂತರವನ್ನು 113 ಕಿ.ಮೀ. X 157 ಕಿ.ಮೀ.ಗೆ ಇಳಿಸಿದೆ

  • ಆಗಸ್ಟ್‌ 20: ಕೊನೆಯ ಹಂತದ ಕಕ್ಷೆಯನ್ನು ಹೊಂದಿಸುವ ಪ್ರಕ್ರಿಯೆ ಪೂರ್ಣ

ಇದನ್ನು ಓದಿ: Chandryaan-3: ಭಾರತದ ಪ್ರಯತ್ನ ಮೆಚ್ಚಿದ ಗಗನಯಾನಿ ಸುನೀತಾ ವಿಲಿಯಮ್ಸ್‌

 ಇದನ್ನೂ ಓದಿ: Chandrayaan-3: ಇಸ್ರೊ ಪ್ರಯತ್ನಕ್ಕೆ ನೆರವಾಗುತ್ತಿರುವ ನಾಸಾ, ಐರೋಪ್ಯ ಏಜೆನ್ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT