ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್ ವಿಡಿಯೊ | ವಲಸೆ ಕಾರ್ಮಿಕರಿಗೆ ಉಚಿತ ಸೇವೆ ಸಲ್ಲಿಸಿದ ಪೋರ್ಟರ್ ಅಜ್ಜ

ಅಕ್ಷರ ಗಾತ್ರ

ಲಖನೌ ರೈಲು ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಸಾಮಾನುಗಳನ್ನು ಉಚಿತವಾಗಿ ಸಾಗಿಸಿಕೊಟ್ಟ 80ರ ಹರೆಯದ ಪೋರ್ಟರ್ ಅಜ್ಜ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೀರೊ ಆಗಿದ್ದಾರೆ.

ವಲಸೆ ಕಾರ್ಮಿಕರ ಸಂಚಾರಕ್ಕಾಗಿ ಸರ್ಕಾರ ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳ ಸೇವೆ ಆರಂಭಿಸಿದ ನಂತರ ಲಖನೌ ನಗರದ ಚಾರ್‌ಭಾಗ್ ರೈಲು ನಿಲ್ದಾಣಕ್ಕೆ ಬರುವ ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಯಿತು. ಇಂಥ ಕಾರ್ಮಿಕರಿಂದ ಪ್ರತಿಫಲವನ್ನು ಅಪೇಕ್ಷಿಸದೇ ಪೋರ್ಟರ್ ಮುಜಿಬುಲ್ಲಾ ರೆಹಮಾನ್ ಸಾಮಾನು ಸಾಗಿಸಲು ನೆರವು ನೀಡುತ್ತಿದ್ದಾರೆ.

ರೈಲು ನಿಲ್ದಾಣದಲ್ಲಿ ಈ ಅಜ್ಜ ಪ್ರತಿದಿನ 8ರಿಂದ 10 ತಾಸು ಕೆಲಸ ಮಾಡುತ್ತಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ರೈಲ್ವೆ ಪೋರ್ಟರ್‌ಗಳ ಸಮವಸ್ತ್ರದೊಂದಿಗೆ ಮಾಸ್ಕ್ ಒಂದನ್ನು ರೆಹಮಾನ್ ಧರಿಸಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT