96ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ಸ್ಫೂರ್ತಿಯಾದ ಕೇರಳದ ಮಹಿಳೆ!

7

96ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ಸ್ಫೂರ್ತಿಯಾದ ಕೇರಳದ ಮಹಿಳೆ!

Published:
Updated:

ಬೆಂಗಳೂರು: ಕೇರಳದ ಸಾಕ್ಷರತಾ ಮಿಷನ್ ಅಕ್ಷರಲಕ್ಷಂ ಎಂಬ ಯೋಜನೆಯಡಿಯಲ್ಲಿ 4ನೇ ತರಗತಿ ತತ್ಸಮಾನ ಪರೀಕ್ಷೆ ಬರೆದ 96ರ ಹರೆಯದ ಮಹಿಳೆ ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದ್ದಾರೆ.

ಆಲಪ್ಪುಳ ಜಿಲ್ಲೆಯ ಕಾರ್ತ್ಯಾಯಿನಿ ಅಮ್ಮ ಎಂಬವರು ಕಳೆದ ಭಾನುವಾರ ಮೊದಲ ಬಾರಿ ಪರೀಕ್ಷೆ ಬರೆದಿದ್ದರು. ಅವರು ಪರೀಕ್ಷೆ ಬರೆಯುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದ್ದು, ನೆಟಿಜನ್‌ಗಳಿಂದ ಪ್ರಶಂಸೆಯ ಸುರಿಮಳೆಯಾಗಿದೆ.

ವಿನೋದ್ ರಡ್ಡಿ ಎಂಬ ಟ್ವೀಟಿಗರೊಬ್ಬರು 96ರ ಹರೆಯದ ಕೇರಳದ ಅಜ್ಜಿ ಮೊದಲ ಬಾರಿ ಪರೀಕ್ಷೆ ಬರೆದು ಓದುವ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದ್ದಾರೆ ಎಂದು ಟ್ವೀಟಿಸಿ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಅವರಿಗೆ ಟ್ಯಾಗ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರ ಈ ಸುದ್ದಿ ನಿಜವಾಗಿದ್ದರೆ ಈಕೆ ನನ್ನ ಸ್ಫೂರ್ತಿ. ಕಲಿಯುವ ಬಗ್ಗೆ ಆಕೆ ಉತ್ಸುಕತೆ ತೋರಿದಂತೆ ನಾನು ತೋರಿಸಿದರೆ ನನ್ನ ಮೆದುಳು ಕೂಡಾ ಚುರುಕಾಗಿರುತ್ತದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !