ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರಿಸ್‌ ಜಾನ್ಸನ್‌ ರಾಜೀನಾಮೆ: ಟ್ವಿಟರ್‌ನಲ್ಲಿ ಸದ್ದು ಮಾಡಿದ 'ಬುಲ್ಡೋಜರ್‌'!

ಅಕ್ಷರ ಗಾತ್ರ

ಬೆಂಗಳೂರು: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ 'ಬುಲ್ಡೋಜರ್‌' ಸದ್ದು ಮಾಡುತ್ತಿದೆ.

ಬುಲ್ಡೋಜರ್‌ ಮೇಲೆ ನಿಂತು ಕೈ ಬೀಸುತ್ತಿರುವ ಜಾನ್ಸನ್‌ ಅವರ ಫೋಟೊವನ್ನು ಹಂಚಿಕೊಂಡು, ಅವರ ರಾಜೀನಾಮೆ ಬಗ್ಗೆ ಟೀಕಿಸಲಾಗುತ್ತಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಂತೆ ಬೋರಿಸ್‌ ಜಾನ್ಸನ್‌ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ ಎಂದು ಹಿರೀಯ ವಕೀಲ ಪ್ರಶಾಂತ್‌ ಭೂಷಣ್‌ ಟ್ವೀಟ್‌ ಮಾಡಿದ್ದಾರೆ. ಅಂತೂ ಬುಲ್ಡೋಜರ್‌ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರಂತೆ ಇವರೂ ಮೋದಿಜೀ ಅವರಿಗೆ 'ಫ್ರಂಡ್‌' ಎಂದು ವ್ಯಂಗ್ಯವಾಡಿದ್ದಾರೆ.

'ಬುಲ್ಡೋಜರ್‌ ಓಡಿಸುವಾಗ ಜಾಗೃತರಾಗಿರಬೇಕು. ತಿರುಗೇಟು ನೀಡಲು ಇದಕ್ಕೆ ವಿಚಿತ್ರ ಮಾರ್ಗ ಗೊತ್ತಿದೆ' ಎಂದು ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಕಟ್ಟಡ ಕೆಡವಲು ಬುಲ್ಡೋಜರ್‌ಗಳ ಬಳಕೆ ಮಾಡುತ್ತಿರುವವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಜಾನ್ಸನ್‌ ಅವರ ಮಿತ್ರ ನರೇಂದ್ರ ಮೋದಿ ಅವರು ಯಾವಾಗ ರಾಜೀನಾಮೆ ನೀಡುತ್ತಾರೆ? ಎಂದು ಬ್ಲಾಗರ್‌ ಹನ್ಸರಾಜ್‌ ಮೀನಾ ಪ್ರಶ್ನಿಸಿದ್ದಾರೆ.

ಜಾನ್ಸನ್‌ ಅವರು ಕಳೆದ ಏಪ್ರಿಲ್‌ ತಿಂಗಳಲ್ಲಿ ಗುಜರಾತ್‌ನ ಜೆಸಿಬಿ ಕಾರ್ಖಾನೆಯೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬುಲ್ಡೋಜರ್‌ ಮೇಲೆ ನಿಂತು ಫೋಟೊಗೆ ಪೋಸ್‌ ನೀಡಿದ್ದರು.

ಭಾರತದಲ್ಲಿ ಪ್ರತಿಭಟನೆ ವೇಳೆ ದಾಂಧಲೆ ನಡೆಸಿದ ಆರೋಪ ಹೊತ್ತ ಮುಸ್ಲಿಮರ ಮನೆಗಳನ್ನು ಬುಲ್ಡೋಜರ್‌ ಮೂಲಕ ಕೆಡವುತ್ತಿರುವ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ಷೇಪ ಕೇಳಿಬರುತ್ತಿರುವ ನಡುವೆ ಜಾನ್ಸನ್‌ ಅವರ ಈ ಭೇಟಿ ತೀವ್ರ ಟೀಕೆಗೆ ಗುರಿಯಾಗಿತ್ತು. ಬ್ರಿಟನ್‌ನ ಸಂಸದರೇ ಜಾನ್ಸನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಪೈಕಿ 23ನೇ ವಯಸ್ಸಿಗೆ ಸಂಸದೆಯಾಗಿರುವ ನಾದಿಯಾ ವಿಟ್ಟೋಮ್‌ ಸಂಸತ್ತಿನಲ್ಲೇ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT