ಸಾಮಾಜಿಕ ಮಾಧ್ಯಮದಲ್ಲಿ ಸರ್ಫ್ ಎಕ್ಸೆಲ್ ಜಾಹೀರಾತು ಬಗ್ಗೆ ಪರ-ವಿರೋಧ ಚರ್ಚೆ

ಸೋಮವಾರ, ಮಾರ್ಚ್ 18, 2019
31 °C

ಸಾಮಾಜಿಕ ಮಾಧ್ಯಮದಲ್ಲಿ ಸರ್ಫ್ ಎಕ್ಸೆಲ್ ಜಾಹೀರಾತು ಬಗ್ಗೆ ಪರ-ವಿರೋಧ ಚರ್ಚೆ

Published:
Updated:

ನವದೆಹಲಿ: ಹಿಂದೂಸ್ತಾನ್ ಯುನಿಲಿವರ್ ಕಂಪನಿಯ ಸರ್ಫ್ ಎಕ್ಸೆಲ್ ಡಿಟರ್ಜಂಟ್ ಜಾಹೀರಾತು ಬಗ್ಗೆ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದು, #BoycottSurfExcel ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದೆ. 

ಫೆಬ್ರುವರಿ 27 ರಂದು ಬಿಡುಗಡೆಯಾದ ಈ ಜಾಹೀರಾತಿನ #RangLaayeSang ಎಂಬ ಥೀಮ್ ಜನರ ಗಮನ ಸೆಳೆದಿದೆ. ಆದರೆ ಕೆಲವರು ಆ ಜಾಹೀರಾತು ಬಗ್ಗೆ ತಕರಾರು ಎತ್ತಿದ್ದು, ಸರ್ಫ್ ಎಕ್ಸೆಲ್ ಡಿಟರ್ಜಂಟ್‍ ವಿರುದ್ಧ ಟ್ವೀಟ್ ಅಭಿಯಾನ ನಡೆಸಿದ್ದಾರೆ.

ಜಾಹೀರಾತಿನಲ್ಲಿ ಏನಿದೆ? 
ಹೋಳಿ ಹಬ್ಬದ ಸಂಭ್ರಮದ ವಾತಾವರಣ. ಬಾಲ್ಕನಿಯಲ್ಲಿ ನಿಂತ ಮಕ್ಕಳ ಗುಂಪೊಂದು ರಸ್ತೆಯಲ್ಲಿ ಹೋಗುವವರ ಮೇಲೆ ಬಣ್ಣ ಎರಚಿ ಹೋಳಿಯಾಡುತ್ತಿರುತ್ತಾರೆ. ಆ ದಾರಿಯಾಗಿ ಬಿಳಿ ಬಟ್ಟೆ ಧರಿಸಿ ಸೈಕಲ್ ಏರಿ ಬಂದ ಬಾಲಕಿ ಬಣ್ಣ ಎರಚಿ ನೋಡೋಣ ಅಂತಾಳೆ. ಆ ಮಕ್ಕಳು ಆಕೆಯ ಮೇಲೆ ಬಣ್ಣ ಎರಚುತ್ತಿರುತ್ತಾರೆ. ಕೊನೆಗೆ ಎಲ್ಲ ಬಣ್ಣ ಮುಗಿಯುತ್ತದೆ. ಆಗ ಆ ಹುಡುಗಿ ಬಣ್ಣ ಮುಗಿಯಿತಾ? ಎಂದು ಕೇಳಿ ಸೈಕಲ್ ತಿರುಗಿಸಿ ಇನ್ನೊಂದು ಮನೆಯ ಗೇಟಿನ  ಮುಂದೆ ನಿಂತು ಹೊರಗೆ ಬಾ, ಎಲ್ಲ ಬಣ್ಣ ಮುಗಿಯಿತು ಎಂದು ಕೂಗಿದಾಗ ಬಿಳಿ ಕುರ್ತಾ ಧರಿಸಿದ ಮುಸ್ಲಿಂ ಬಾಲಕನೊಬ್ಬ ನಗುತ್ತಾ ಹೊರಗೆ ಬರುತ್ತಾನೆ. ಆತನನ್ನು ಮಸೀದಿವರೆಗೆ ಸೈಕಲ್‍ನಲ್ಲಿ ಕರೆದುಕೊಂಡು ಹೋಗುತ್ತಾಳೆ ಆ ಬಾಲಕಿ. ನಮಾಜ್ ಮಾಡಿ ಬರುತ್ತೇನೆ ಎಂದು ಹೇಳಿ ಆ ಹುಡುಗ ಮಸೀದಿ ಮೆಟ್ಟಲು ಹತ್ತುತ್ತಿದ್ದರೆ, ನಮಾಜ್ ಮುಗಿಸಿದ ಮೇಲೆ ನಿನ್ನ ಮೇಲೆ ಬಣ್ಣ ಎರಚುತ್ತೇವೆ ಅಂತಾಳೆ ಆ ಹುಡುಗಿ.  ಏನಾದರೂ ಒಳ್ಳೆಯದು ಮಾಡುವಾಗ ಕಲೆಯಾಗುವುದಾದರೆ ಕಲೆ ಒಳ್ಳೆಯದೇ ಎಂಬ ಟ್ಯಾಗ್ ಲೈನ್‍ನೊಂದಿಗೆ ಒಂದು ನಿಮಿಷ ಅವಧಿಯ  ಜಾಹೀರಾತು ಮುಗಿಯುತ್ತದೆ.

ತಕರಾರು ಏನು?
ಧರ್ಮಗಳ ನಡುವೆ ಸಾಮರಸ್ಯ ಸಾರುವ ಜಾಹೀರಾತು ಇದಾಗಿದ್ದರೂ ಕೆಲವರಿಗೆ ಇದರಲ್ಲಿ ಮತೀಯ ಬಣ್ಣ ಕಾಣಿಸಿದೆ. ಹಿಂದೂಗಳನ್ನು ಅವಹೇಳನ ಮಾಡಲಾಗಿದೆ ಎಂದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವರು  ಹೋಳಿಗಿಂತ ನಮಾಜ್ ಮುಖ್ಯ ಎಂದು ಜಾಹೀರಾತಿನಲ್ಲಿ ತೋರಿಸಲಾಗಿದೆ ಅಂತಿದ್ದಾರೆ. ಇನ್ನು ಕೆಲವರು ಇದಕ್ಕೆ ಲವ್ ಜಿಹಾದ್ ಎಂದಿದ್ದಾರೆ.

ಟ್ವಿಟರ್‌ನಲ್ಲಿ boycottSurfexcel ಟ್ರೆಂಡ್

 

 

 

 

 

 

 

 

 

ಜಾಹೀರಾತಿನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಟ್ವೀಟ್‍ಗಳು

 

 

 

ಸರ್ಫ್ ಎಕ್ಸೆಲ್ ಜಾಹೀರಾತಿನ ವಿಡಿಯೊಗೆ ಡಿಸ್‍ಲೈಕ್  ಒತ್ತುವ ಮೂಲಕ ಮತ್ತು ಕಾಮೆಂಟ್ ಮೂಲಕವೂ ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಕುಂಭಮೇಳ ಥೀಮ್ ಹೊಂದಿದ ಬ್ರೂಕ್ ಬಾಂಡ್ ರೆಡ್ ಲೇಬಲ್ ಜಾಹೀರಾತಿನ ಬಗ್ಗೆಯೂ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.ಇದಾದನಂತರ ಬ್ರೂಕ್ ಬಾಂಡ್  ಚಹಾ ಜಾಹೀರಾತಿನ ಶೀರ್ಷಿಕೆಯಲ್ಲಿ ಬದಲಾವಣೆ ಮಾಡಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 3

  Amused
 • 1

  Sad
 • 0

  Frustrated
 • 9

  Angry

Comments:

0 comments

Write the first review for this !