ಬೆಂಗಳೂರು: ಜಾಗತಿಕವಾಗಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ವಾಟ್ಸ್‌ಆ್ಯಪ್ ಮೆಸೆಂಜರ್‌ಗೂ ನಕಲಿ ಆ್ಯಪ್‌ಗಳ ಕಾಟ ತಪ್ಪಿಲ್ಲ. ಅಸಲಿಯಂತೆಯೇ ಕಾಣಿಸುವ ನಕಲಿ ಆ್ಯಪ್ ಹಾವಳಿ ಕುರಿತು ಕಂಪನಿ ಬಳಕೆದಾರರನ್ನು ಎಚ್ಚರಿಸಿದೆ.
ವಾಟ್ಸ್ಆ್ಯಪ್‌ನ ಫೀಚರ್‌ಗಳನ್ನು ಹೊಂದಿರುವ ಮತ್ತು ವಿವಿಧ ಆಯ್ಕೆಗಳನ್ನು ನೀಡುವ ನಕಲಿ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿವೆ. ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಅವುಗಳನ್ನು ಬಳಸಿ ಮೋಸ ಹೋಗುತ್ತಿದ್ದಾರೆ ಎಂದು ವಾಟ್ಸ್‌ಆ್ಯಪ್ ಜಾಗತಿಕ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಹೇಳಿದ್ದಾರೆ.
ನಕಲಿ ಆ್ಯಪ್ ಬಳಸುವುದರಿಂದ, ಜನರ ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದು. ಅಲ್ಲದೆ, ಅದರ ಮೂಲಕ ಸ್ಮಾರ್ಟ್‌ಫೋನ್‌ಗೆ ಮಾಲ್‌ವೇರ್ ಕೂಡ ಪ್ರವೇಶಿಸಬಹುದು ಎಂದು ವಾಟ್ಸ್‌ಆ್ಯಪ್‌ನ ಭದ್ರತಾ ತಂಡ ಎಚ್ಚರಿಕೆ ನೀಡಿದೆ.
ಹೇಯ್ ವಾಟ್ಸ್‌ಆ್ಯಪ್ ಎನ್ನುವ ಆ್ಯಪ್ ಅನ್ನು ಹೇಯ್‌ಮೋಡ್ಸ್ ಎನ್ನುವ ಡೆವಲಪರ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒದಗಿಸಿದ್ದರು. ಅದರಿಂದ ಸ್ಮಾರ್ಟ್‌ಫೋನ್‌ಗೆ ಮಾಲ್‌ವೇರ್, ವೈರಸ್ ಸುಲಭದಲ್ಲಿ ಪ್ರವೇಶಿಸಲು ಸಾಧ್ಯವಾಗುತ್ತಿತ್ತು ಎಂದು ತಂತ್ರಜ್ಞರು ತಿಳಿಸಿದ್ದಾರೆ.
ಗೂಗಲ್ ಪ್ಲೇ ಪ್ರೊಟೆಕ್ಟ್ ಮೂಲಕ ಆ್ಯಂಡ್ರಾಯ್ಡ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ನಕಲಿ ಆ್ಯಪ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಅಧಿಕೃತವಾಗಿ ಗೂಗಲ್ ಪ್ಲೇ ಸ್ಟೋರ್ ದೃಢೀಕರಿಸಿರುವ ಆ್ಯಪ್ ಮಾತ್ರ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಬೇಕು. ಉಚಿತ ಕೊಡುಗೆ, ಆಫರ್ ನೆಪದಲ್ಲಿ ಬರುವ ಥರ್ಡ್ ಪಾರ್ಟಿ ನಕಲಿ ಆ್ಯಪ್‌ಗಳನ್ನು ಬಳಸಲೇಬಾರದು ಎಂದು ತಜ್ಞರು ಸೂಚಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.