ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡು ಗಂಟೆಗಳ ವ್ಯತ್ಯಯದ ಬಳಿಕ ಮತ್ತೆ ಸೇವೆಗೆ ಮರಳಿದ ಇನ್‌ಸ್ಟಾಗ್ರಾಂ

Last Updated 23 ಸೆಪ್ಟೆಂಬರ್ 2022, 4:40 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರಗಳು ಮತ್ತು ವಿಡಿಯೊ ಹಂಚಿಕೆಯ ಜನಪ್ರಿಯ ಜಾಲತಾಣ, ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ ಎರಡು ಗಂಟೆಗಳ ನಿಲುಗಡೆ ಬಳಿಕ ಮತ್ತೆ ಸೇವೆಗೆ ಮರಳಿದೆ.

ವಿಶ್ವದಾದ್ಯಂತ ಹಲವಾರು ಐಓಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರು ಲಾಗಿನ್ ಸಮಸ್ಯೆ ಎದುರಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ತಾಂತ್ರಿಕ ದೋಷ ಟ್ರ್ಯಾಕ್ ಮಾಡುವ ವೆಬ್‌ಸೈಟ್ Downdetector.com ಪ್ರಕಾರ, ಸುಮಾರು 34,000 ಬಳಕೆದಾರರು, ಲಾಗಿನ್ ತೊಂದರೆ ಅನುಭವಿಸಿದ ಬಗ್ಗೆ ವರದಿ ಮಾಡಿದ್ದಾರೆ.

‘ನಾವು ಸೇವೆಗೆ ಮರಳಿದ್ದೇವೆ! ದೋಷಕ್ಕೆ ಕಾರಣವಾದ ಸಮಸ್ಯೆಯನ್ನು ಪರಿಹರಿಸಿದ್ದೇವೆ ಮತ್ತು ಯಾವುದೇ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ’ಎಂದು ಇನ್‌ಸ್ಟಾಗ್ರಾಂ ಟ್ವೀಟ್‌ನಲ್ಲಿ ತಿಳಿಸಿದೆ.

ಕೆಲ ಬಳಕೆದಾರರು ಇನ್‌ಸ್ಟಾ ಲಾಗಿನ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಈ ಮೊದಲೇ ಹೇಳಿದ್ದ ಸಂಸ್ಥೆ, ಸಾಧ್ಯವಾದಷ್ಟು ಬೇಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT