ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ, ಬ್ರಿಟನ್‌ನಲ್ಲಿ ‘ಕೊಲಾಬ್’ ವೈಶಿಷ್ಟ್ಯ ಪರೀಕ್ಷಿಸುತ್ತಿರುವ ಇನ್‌ಸ್ಟಾಗ್ರಾಮ್

Last Updated 21 ಜುಲೈ 2021, 15:39 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಬ್ರಿಟನ್‌ ದೇಶಗಳಲ್ಲಿ ಹೊಸ ‘ಕೊಲಾಬ್’ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿರುವುದಾಗಿ ಇನ್‌ಸ್ಟಾಗ್ರಾಮ್ ಬುಧವಾರ ಹೇಳಿದೆ. ಇದು ಫೀಡ್ ಪೋಸ್ಟ್‌ಗಳು ಮತ್ತು ರೀಲ್‌ಗಳಲ್ಲಿ ಬಳಕೆದಾರರು ಇತರರೊಂದಿಗೆ 'ಕೊಲಾಬರೇಟ್" ಆಗಲು ಅನುವು ಮಾಡಿಕೊಡುತ್ತದೆ ಎಂದು ಹೇಳಿಕೆ ತಿಳಿಸಿದೆ.

'ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರ ಕೊಲಾಬರೇಶನ್ ಒಂದು ದೊಡ್ಡ ಭಾಗವಾಗಿದೆ. ‘ಕೊಲಾಬ್' ವೈಶಿಷ್ಟ್ಯವನ್ನು ಬಳಸಿ ನಿಮ್ಮ ಫೀಡ್ ಪೋಸ್ಟ್ ಮತ್ತು ರೀಲ್‌ಗಳಿಗೆ ನೀವು ಸಹಯೋಗಿಯನ್ನು ಆಹ್ವಾನಿಸಬಹುದು ಮತ್ತು ಆ ಮೂಲಕ ಅವರು ತಮ್ಮ ಫಾಲೋವರ್ಸ್‌ಗಳೊಂದಿಗೆ ಕಂಟೆಂಟ್ ಅನ್ನು ಹಂಚಿಕೊಳ್ಳಬಹುದು’ ಎಂದು ಹೇಳಿಕೆ ತಿಳಿಸಿದೆ. ಇತರ ಬಳಕೆದಾರರು ಒಪ್ಪಿಕೊಂಡರೆ, ಅವರನ್ನು ಕಂಟೆಂಟ್ ಸೃಷ್ಟಿಕರ್ತ(Author)ರಾಗಿ ತೋರಿಸಲಾಗುತ್ತದೆ. ಕಂಟೆಂಟ್ ಅನ್ನು ಅವರ ಪ್ರೊಫೈಲ್ ಗ್ರಿಡ್‌ಗೆ ಮತ್ತು ಫೀಡ್‌ನಲ್ಲಿ ಅವರ ಫಾಲೋವರ್ಸ್‌ಗಳ ಜೊತೆ ಹಂಚಿಕೊಳ್ಳಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

ಕೊಲಾಬರೇಟ್ ಮೂಲಕ ಹಂಚಿಕೊಳ್ಳಲಾದ ಕಂಟೆಂಟ್ ಅನ್ನು ಎರಡೂ ಬಳಕೆದಾರರ ಫಾಲೋವರ್‌ಗಳು ಮತ್ತು ಪ್ರತಿಕ್ರಿಯೆಯನ್ನು ನೋಡಬಹುದು. ಈ ವೈಶಿಷ್ಟ್ಯವನ್ನು ಮೊದಲು ಪರೀಕ್ಷಿಸುವ ಎರಡು ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಹೇಳಿಕೆ ತಿಳಿಸಿದೆ. ಈ ವೈಶಿಷ್ಟ್ಯವನ್ನು ಪರೀಕ್ಷಿಸಲಾಗುತ್ತಿರುವ ಮತ್ತೊಂದು ದೇಶ ಬ್ರಿಟನ್.

‘ಈಗ ನಮ್ಮ ಜಾಗತಿಕ ಸಮುದಾಯದ ಕಡಿಮೆ ಜನರೊಂದಿಗೆ ಮಾತ್ರ ಈ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದ್ದೇವೆ’ಎಂದು ಹೇಳಿಕೆ ತಿಳಿಸಿದೆ. ಫೇಸ್‌ಬುಕ್ ಒಡೆತನದ ಕಂಪನಿಯು ಈಗ ಭಾರತದಲ್ಲಿ ತನ್ನ ಹಲವು ವೈಶಿಷ್ಟ್ಯಗಳನ್ನು ಮೊದಲು ಬಿಡುಗಡೆ ಮಾಡುತ್ತಿದೆ. ಕಳೆದ ವರ್ಷ, ಇನ್‌ಸ್ಟಾಗ್ರಾಮ್ ತನ್ನ ಹೊಸ ಸ್ವರೂಪದ ಫೀಚರ್ 'ರೀಲ್ಸ್' ಅನ್ನು ಬಿಡುಗಡೆ ಮಾಡಿತ್ತು. ಅದು ಬಳಕೆದಾರರಿಗೆ ಸಣ್ಣ ವಿಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತಿದೆ. ಈ ವೈಶಿಷ್ಟ್ಯವನ್ನು ಮೊದಲು ಆರಂಭಿಸಿದ ದೇಶಗಳಲ್ಲಿ ಭಾರತವೂ ಸೇರಿತ್ತು. ಕಂಪನಿಯು 'ರೀಲ್ಸ್' ಗಾಗಿ ಪ್ರತ್ಯೇಕ ಟ್ಯಾಬ್ ಅನ್ನು ಬಿಡುಗಡೆ ಮಾಡಿತ್ತು. ಈ ವೈಶಿಷ್ಟ್ಯವನ್ನು ಪಡೆದ ಮೊದಲ ದೇಶ ಭಾರತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT