ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆಯಲ್ಲಿ ಕೊರಿಯನ್ ಮಹಿಳಾ ಯೂಟ್ಯೂಬರ್‌ಗೆ ಯುವಕರಿಂದ ಶೋಷಣೆ!

ನೆಟ್ಟಿಗರು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ
Published 18 ಡಿಸೆಂಬರ್ 2023, 11:31 IST
Last Updated 18 ಡಿಸೆಂಬರ್ 2023, 11:31 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್ ಒಬ್ಬರು ಮಹಾರಾಷ್ಟ್ರದಲ್ಲಿ ಶೋಷಣೆಗೆ ಒಳಗಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೆಲ್ಲಿ ಎನ್ನುವ ಕೊರಿಯನ್ ಯೂಟ್ಯೂಬರ್ ಯುವತಿ ಇತ್ತೀಚೆಗೆ ಮುಂಬೈ ಹಾಗೂ ಪುಣೆಗೆ ತೆರಳಿ ಅಲ್ಲಿನ ಸ್ಥಳೀಯ ಜನಜೀವನದ ಬಗ್ಗೆ ವಿಡಿಯೊ ಮಾಡುತ್ತಿದ್ದರು. ಪುಣೆಯಲ್ಲಿ ವಿಡಿಯೊ ಮಾಡುವಾಗ ಬಟ್ಟೆ ಅಂಗಡಿ ಒಂದರ ಬಳಿ ಯುವಕನೊಬ್ಬ ಕೆಲ್ಲಿ ಕೊರಳಿಗೆ ಕೈ ಹಾಕಿ ಬಿಗಿಯಾಗಿ ಹಿಡಿದುಕೊಂಡಿದ್ದಲ್ಲದೇ ತನ್ನ ಸಹವರ್ತಿಯೊಬ್ಬನಿಗೆ ಹೀಗೆ ಗಟ್ಟಿಯಾಗಿ ಹಿಡಿದುಕೊಳ್ಳಬೇಕು ಎಂದು ಪ್ರಚೋದಿಸಿದ್ದಾನೆ.

ಈ ಘಟನೆ ವಿಡಿಯೊದಲ್ಲಿ ದಾಖಲಾಗಿದ್ದು ಕೆಲ್ಲಿ ವಿಡಿಯೊ ಅನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅನೇಕ ನೆಟ್ಟಿಗರು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂತ್ರಸ್ತ ಯುವತಿ ಯಾವುದೇ ದೂರು ದಾಖಲಿಸಿಲ್ಲ.

ಇತ್ತೀಚೆಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳು, ಯುಟ್ಯೂಬರ್‌ಗಳು ಪ್ರವಾಸಿ ತಾಣಗಳಿಗೆ, ಅಪರೂಪದ ಸ್ಥಳಗಳಿಗೆ ತೆರಳಿ ವಿಡಿಯೊ ಮಾಡಿ ಮಾಹಿತಿ ನೀಡುವುದು ಹೆಚ್ಚುತ್ತಿದೆ. ಇಂತಹವರ ಮೇಲೆ ಆಗಂತುಕರು ಕಿರುಕುಳ ನೀಡುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ.

ಹಾಂಗ್‌ಕಾಂಗ್‌ನಲ್ಲೂ ಇತ್ತೀಚೆಗೆ ಮಹಿಳಾ ಯೂಟ್ಯೂಬರ್ ಮೇಲೆ ಭಾರತೀಯ ಯುವಕ ಲೈಂಗಿಕ ಶೋಷಣೆ ಮಾಡಿದ್ದ ಘಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT