ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ‌ ಹಾಡಿಗೆ ಕೊರಿಯನ್‌ ಬ್ಯಾಂಡ್‌ ಹೆಜ್ಜೆ!

ಸಲ್ಮಾನ್‌–ಸುಷ್ಮಿತಾ ಕುಣಿದ ‘ಚುನರಿ ,ಚುನರಿ’ ಹಾಡು ಕೊರಿಯಾದಲ್ಲೂ ವೈರಲ್ ‌* ಭಾರತೀಯರೂ ಫಿದಾ
Last Updated 25 ಜೂನ್ 2020, 16:29 IST
ಅಕ್ಷರ ಗಾತ್ರ

ದಕ್ಷಿಣ ಕೊರಿಯಾದ ಜನಪ್ರಿಯ ಕೆ–ಪಾಪ್‌ ಗ್ರೂಪ್‌ನ ಬಿಟಿಎಸ್‌ ಬ್ಯಾಂಡ್‌ ಕಲಾವಿದರು ಮಾಡಿರುವ ಡಾನ್ಸ್‌ ವಿಡಿಯೊವೊಂದಕ್ಕೆ ಹಿಂದಿಯ ಚುನರಿ, ಚುನರಿ ಹಾಡನ್ನು ಮಿಕ್ಸಿಂಗ್‌ ಮಾಡಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆ ಡಾನ್ಸ್ ವಿಡಿಯೊ ಹೇಗಿದೆಯೇಂದರೆ, ಹಿಂದಿ ಹಾಡಿಗೇ ಕೊರಿಯನ್‌ ಬ್ಯಾಂಡ್ ಸದಸ್ಯರು ಹೆಜ್ಜೆ ಹಾಕಿದ್ದಾರೆ ಎನ್ನುವಷ್ಟು ಸಹಜವಾಗಿದೆ! ಅಸಲಿಗೆ ಬ್ಯಾಂಡ್‌ ಸದಸ್ಯರು ಡಾನ್ಸ್‌ ಮಾಡಿದ್ದು ಕೊರಿಯನ್‌ ಹಾಡಿಗೆ.

ಅಂದ ಹಾಗೆ, ಚುನರಿ‌ ಚುನರಿ‌ ಹಾಡು ‘ಬೀವಿ ನಂಬರ್‌ 1’ ಹಿಂದಿ ಸಿನಿಮಾದ್ದು. ಈ ಹಾಡಿಗೆ ನಟ ಸಲ್ಮಾನ್‌ ಖಾನ್‌ ಮತ್ತು ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್‌ ಹೆಜ್ಜೆ ಹಾಕಿದ್ದಾರೆ.

ಈಗ ವಾರದ ಹಿಂದೆ ‘ಫಿಲ್ಮ್ ‌ಫಾರ್‌ ಫೇರ್’ ಇನ್‌ಸ್ಟಾಗ್ರಾಂ ಖಾತೆಯಿಂದ ಈ ಮಿಕ್ಸಿಂಗ್ ವಿಡಿಯೊ ಹರಿಬಿಡಲಾಗಿದೆ. ಇಲ್ಲಿಯವರೆಗೆ ವಿಡಿಯೊ 1.4 ಲಕ್ಷ ವೀಕ್ಷಣೆ ಮತ್ತು 32,747 ಲೈಕ್‌ ಪಡೆದಿದೆ. ಟ್ವಿಟ್ಟರ್‌ನಲ್ಲಿಯೂ ಟ್ರೆಂಡ್‌ ಆಗಿದೆ. ನೆಟ್ಟಿಗರು ಈ ಹಾಡಿನ ಮಜಾ ಪಡೆಯುತ್ತಿದ್ದಾರೆ. ವಿದೇಶಿ ಬ್ಯಾಂಡ್‌ ಡಾನ್ಸ್‌ ವಿಡಿಯೊಗಳಿಗೆ ಮತ್ತಷ್ಟು ಹಿಂದಿ ಹಾಡುಗಳನ್ನು ಮಿಕ್ಸಿಂಗ್‌ ಮಾಡುವಂತೆ ಹುರಿದುಂಬಿಸಿದ್ದಾರೆ.

‘ಬಿಟಿಎಸ್’ ಹೆಸರಿನಿಂದ ಜನಪ್ರಿಯವಾಗಿರುವ ಬ್ಯಾಂಗ್ಟನ್‌ ಬಾಯ್ಸ್‌‌ ಸದ್ಯ ದಕ್ಷಿಣ ಕೊರಿಯಾದ ಜನಪ್ರಿಯ ಬ್ಯಾಂಡ್‌ ಗ್ರೂಪ್‌‌. ಹತ್ತು ವರ್ಷಗಳ ಹಿಂದೆ ಸೋಲ್ ಸಿಟಿಯಲ್ಲಿ ಅಸ್ತಿತ್ವಕ್ಕೆ ಬಂದ ಈ ಬ್ಯಾಂಡ್‌ ಇಂದು ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿದೆ.

ವಿಡಿಯೊ ನೋಡಲು ಇನ್‌ಸ್ಟಾಗ್ರಾಂ ಲಿಂಕ್‌:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT