ಭಾನುವಾರ, ನವೆಂಬರ್ 29, 2020
21 °C

ಮಾಸ್ಕ್ ಕುರಿತು ಜಾಗೃತಿಗೆ ಟ್ವಿಟರ್‌ ಅಭಿಯಾನ #MaskOnSpitNot

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

'ಮಾಸ್ಕ್‌ ಆನ್‌ ಸ್ಪಿಟ್‌ ನಾಟ್‌' ಅಭಿಯಾನ

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ನಾವು ಅನುಸರಿಸಬಹುದಾದ ಕ್ರಮಗಳಲ್ಲಿ ಮಾಸ್ಕ್‌ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳುವುದು ಬಹಳ ಪ್ರಮುಖ. ಅದರಲ್ಲೂ ಸರಿಯಾಗಿ ಮಾಸ್ಕ್‌ ಧರಿಸುವುದರ ಬಗ್ಗೆ ಜನರಲ್ಲಿ ಇನ್ನೂ ಜಾಗೃತಿ ಹೆಚ್ಚಬೇಕಿದೆ. ಅದಕ್ಕಾಗಿಯೇ ಟ್ವಿಟರ್‌ನಲ್ಲಿ 'ಮಾಸ್ಕ್‌ ಆನ್‌ ಸ್ಪಿಟ್‌ ನಾಟ್‌' (#MaskOnSpitNot) ಅಭಿಯಾನ ನಡೆಯುತ್ತಿದೆ.

'ಮಾಸ್ಕ್‌ ಧರಿಸಿ...ಅದನ್ನು ಸರಿಯಾಗಿ ಧರಿಸಿ, ಉಗುಳಬೇಡಿ ಹಾಗೂ ವೈರಸ್‌ ಹರಡಬೇಡಿ' ಎಂಬ ಸಾಲುಗಳ ಜೊತೆಗೆ 'ಮಾಸ್ಕ್‌ ಆನ್‌ ಸ್ಪಿಟ್‌ ನಾಟ್‌' ಅಭಿಯಾನಕ್ಕೆ ಟ್ವೀಟಿಗರು ಸಜ್ಜಾಗಿದ್ದು, ಬುಧವಾರ (ಅ.21) ಈ ಜಾಗೃತಿ ಅಭಿಯಾನದ ಟ್ವೀಟಥಾನ್‌ ನಡೆಯಲಿದೆ.

ವಿಡಿಯೊಗಳು, ಸೆಲ್ಫಿ ಮೀಮ್‌ಗಳು, ಚಿತ್ರಗಳು, ಪೇಯಿಂಟಿಂಗ್‌ , ಮಾಸ್ಕ್‌ ಧರಿಸಿರುವ ನಿಮ್ಮ ಹೀರೊ, ರಂಗೋಲಿ ಅಥವಾ ಇಷ್ಟವಾದ ಯಾವುದನ್ನೂ #MaskOnSpitNot ಹ್ಯಾಷ್‌ಟ್ಯಾಗ್‌ನೊಂದಿಗೆ ಪ್ರಕಟಿಸಬೇಕು. ಪೋಸ್ಟ್‌ನೊಂದಿಗೆ ನಮ್ಮ ಬೆಂಗಳೂರು ಫೌಂಡೇಷನ್‌ ಸೇರಿದಂತೆ ಅಭಿಯಾನದ ಇತರೆ ಆಯೋಜಕರನ್ನು ಟ್ಯಾಗ್‌ ಮಾಡಬಹುದಾಗಿದೆ. ಮುಖ್ಯವಾಗಿ ಬೆಂಗಳೂರಿಗರನ್ನು ಕೇಂದ್ರೀಕರಿಸಿ ಅಭಿಯಾನ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು