ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಫ್ರೆಂಡ್ಸ್ ಲಿಸ್ಟ್ ಮೇಲೆ ಪೋಷಕರ ನಿಗಾ; ಸ್ನ್ಯಾಪ್‌ಚಾಟ್‌ನಿಂದ ಹೊಸ ಫೀಚರ್

ಅಕ್ಷರ ಗಾತ್ರ

ನವದೆಹಲಿ: ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆ 'ಸ್ನ್ಯಾಪ್‌ಚಾಟ್‌' ಹೊಸ ಫೀಚರ್‌ (ವೈಶಿಷ್ಟ್ಯ) ಪರಿಚಯಿಸಲಿದೆ. ಅದರ ಮೂಲಕ ಪೋಷಕರು ತಮ್ಮ ಮಕ್ಕಳು ಆ್ಯಪ್‌ನಲ್ಲಿ ಹೊಂದಿರುವ ಸ್ನೇಹಿತರ ಬಳಗದ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ ಎಂದುTechCrunch ವೆಬ್‌ಸೈಟ್‌ ವರದಿಮಾಡಿದೆ.

ವರದಿ ಪ್ರಕಾರ, 'ಫ್ಯಾಮಿಲಿ ಸೆಂಟರ್‌' ಹೆಸರಿನ ಹೊಸ ಫೀಚರ್‌ ಪರಿಚಯಿಸಲುಸ್ನ್ಯಾಪ್‌ಚಾಟ್‌ ಮುಂದಾಗಿದೆ.ಕಳೆದ ಏಳು ದಿನಗಳಲ್ಲಿ ತಮ್ಮ ಮಕ್ಕಳಿಗೆ ಯಾರೆಲ್ಲ ಸಂದೇಶ ಕಳುಹಿಸಿದ್ದಾರೆ ಎಂಬುದನ್ನು ತಿಳಿಯಲು ಇದರಿಂದ ಸಾಧ್ಯವಾಗಲಿದೆ ಎನ್ನಲಾಗಿದೆ.

ಸ್ನ್ಯಾಪ್‌ಚಾಟ್‌, ಇತರೆ ಸಾಮಾಜಿಕ ನೆಟ್‌ವರ್ಕ್‌ಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಫ್ರೆಂಡ್‌ಲಿಸ್ಟ್‌ ಸಾರ್ವಜನಿಕವಾಗಿರುವುದಿಲ್ಲ. ಹೀಗಾಗಿ ಹೊಸ ವೈಶಿಷ್ಟ್ಯವುಪೋಷಕರಿಗೆ ನೆರವಾಲಿದೆ. ಮಕ್ಕಳು ಎದುರಿಸುವ ನಿಂದನೆ ಮತ್ತು ಕಿರುಕುಳ ಪ್ರಕರಣಗಳನ್ನು ವರದಿ ಮಾಡಲೂ ಈ ಫೀಚರ್‌ ಪೋಷಕರಿಗೆ ಸಹಕಾರಿ.

ಈ ಫೀಚರ್‌ ಬಳಸಿ ತಮ್ಮ ಮಕ್ಕಳ ಚಾಟ್‌ ಲಿಸ್ಟ್, ಸ್ನೇಹಿತರ ಬಳಗದ ಮೇಲೆ ನಿಗಾ ಇಡುವುದಕ್ಕೂ ಮುನ್ನ,ಪೋಷಕರು ತಮ್ಮ ಮಕ್ಕಳನ್ನು 'ಫ್ಯಾಮಿಲಿ ಸೆಂಟರ್‌'ಗೆ ಆಹ್ವಾನಿಸಬೇಕು. ಆಹ್ವಾನ ಸ್ವೀಕರಿಸಿದ ನಂತರವಷ್ಟೇ ಫೀಚರ್‌ ಬಳಸಬಹುದಾಗಿದೆ. ಆಹ್ವಾನವನ್ನು ಸ್ವೀಕರಿಸುವ ಅಥವಾ ನಿರಾಕಸಿರುವ ಆಯ್ಕೆ ಬಳಕೆದಾರಿಗೆ ಬಿಟ್ಟದ್ದು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT