ಸೋಮವಾರ, ಜೂನ್ 1, 2020
27 °C

ಕೊರೊನಾ ಯೋಧರಿಗೆ ಸಶಸ್ತ್ರ ಪಡೆಗಳ ಗೌರವ: ವಿಡಿಯೊ ಟ್ವೀಟ್ ಮಾಡಿದ ನರೇಂದ್ರ ಮೋದಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸಶಸ್ತ್ರ ಪಡೆಗಳು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಸಿಬ್ಬಂದಿಗೆ ಭಾನುವಾರ ಗೌರವ ಸಲ್ಲಿಸಿದ ವಿಡಿಯೊ ತುಣುಕನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವೀಟ್ ಮಾಡಿದ್ದಾರೆ.

‘ಮುಂಚೂಣಿಯಲ್ಲಿದ್ದು ಧೈರ್ಯದಿಂದ ಕೋವಿಡ್–19ರ ವಿರುದ್ಧ ಹೋರಾಡುತ್ತಿರುವವರಿಗೆ ನಮ್ಮ ಸಶಸ್ತ್ರಪಡೆಗಳು ಗೌರವ ಅರ್ಪಿಸಿವೆ’ ಎಂದು ಮೋದಿ ಹೇಳಿದ್ದಾರೆ.

2.16 ನಿಮಿಷದ ವಿಡಿಯೊ ಕ್ಲಿಪ್‌ನಲ್ಲಿ ಮಿಲಿಟರಿ ಬ್ಯಾಂಡ್‌ವೃಂದದ ಸಂಗೀತ ಮತ್ತು ಹೆಲಿಕಾಪ್ಟರ್‌ಗಳು ವಿವಿಧ ಆಸ್ಪತ್ರೆಗಳು ಮತ್ತು ರಾಷ್ಟ್ರೀಯ ಸ್ಮಾರಕಗಳ ಮೇಲೆ ಪುಷ್ಪವೃಷ್ಟಿ ಮಾಡುವ ದೃಶ್ಯಗಳಿವೆ. ತಮ್ಮ ಮೇಲೆ ಹೂ ಪಕಳೆಗಳು ಬಿದ್ದಾಗ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ಹೊಡೆದ ದೃಶ್ಯಗಳೂ ಈ ವಿಡಿಯೊದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಕೊರೊನಾ ಸೈನಿಕರಿಗೆ ವಾಯುಪಡೆಯಿಂದ ಪುಷ್ಪವೃಷ್ಟಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು