ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವು ಉಪ್ಪಾರ್‌ದ್ದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಟ್ವೀಟಿಸಿದ ಶೋಭಾ ಕರಂದ್ಲಾಜೆ

Last Updated 28 ಮೇ 2019, 9:54 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿಯ ಬಾಗೇವಾಡಿಯಲ್ಲಿ ಹಸು ಕಳ್ಳಸಾಗಾಣಿಕೆದಾರರು ಶಿವು ಉಪ್ಪಾರ್ ಎಂಬ ಯುವಕನನ್ನು ಹತ್ಯೆ ಮಾಡಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟಿಸಿದ್ದರು.ಆದರೆ ಶಿವು ಉಪ್ಪಾರ್‌ದ್ದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು. ತಪ್ಪಾದ ಮಾಹಿತಿಯನ್ನು ಶೋಭಾ ಟ್ವೀಟ್ ಮಾಡಿದ್ದರ ಬಗ್ಗೆ ಫ್ಯಾಕ್ಟ್‌ಚೆಕ್ ನಡೆದ ನಂತರ ಇದೀಗ ಹೊಸತೊಂದು ಟ್ವೀಟ್ ಮೂಲಕ ಶೋಭಾ, ಶಿವು ಉಪ್ಪಾರ್‌ದ್ದು ಆತ್ಮಹತ್ಯೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರ ಟ್ವೀಟ್‌ನ್ನು ರೀಟ್ವೀಟ್ ಮಾಡಿರುವಶೋಭಾ, ಸುರೇಶ್ ಅಂಗಡಿಯವರುಪೊಲೀಸ್ ಆಯುಕ್ತರಲ್ಲಿ ಮಾತನಾಡಿದ್ದು ಶಿವು ಉಪ್ಪಾರ್ ಅವರದ್ದು ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿದೆ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಶಿವು ಉಪ್ಪಾರ್ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದ ಸುರೇಶ್ ಅಂಗಡಿ, ಗೋರಕ್ಷಣೆ ಮಾಡಲು ಯತ್ನಿಸಿದ್ದ ಶಿವ ಕುಮಾರ್ ಬಲರಾಮಪ್ಪ ಉಪ್ಪಾರ್ (19) ಎಂಬ ಯುವಕನ್ನು ಹಸು ಕಳ್ಳಸಾಗಾಣಿಕೆದಾರರು ಹತ್ಯೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.ಈ ಟ್ವೀಟ್ ವಿವಾದಕ್ಕೀಡಾಗುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಿದ್ದರು.

ಸುರೇಶ್ ಅಂಗಡಿ ಮೇ. 27ರಂದು ಮಾಡಿದ ಟ್ವೀಟ್‌ನಲ್ಲಿ ಏನಿದೆ?

ಬೆಳಗಾವಿ ಪೊಲೀಸ್ ಕಮಿಷನರ್ ಜತೆ ಶಿವು ಉಪ್ಪಾರ್ ಪ್ರಕರಣದ ಬಗ್ಗೆ ಮಾತನಾಡಿದೆ, ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಅದು ಹತ್ಯೆ ಅಲ್ಲ ಆತ್ಮಹತ್ಯೆ. ಈ ಪ್ರಕರಣದ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಬೇಡಿ ಎಂದು ನಾನು ಎಲ್ಲ ಪ್ರಜೆಗಳಲ್ಲಿ ವಿನಂತಿಸುತ್ತಿದ್ದೇನೆ, ನಮ್ಮ ಪೊಲೀಸರಿಗೆ ಶಿವು ಆತ್ಮಹತ್ಯೆ ಹಿಂದಿರುವ ಕಾರಣಗಳು ಗೊತ್ತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT