ಮಂಗಳವಾರ, ನವೆಂಬರ್ 29, 2022
28 °C
ವಾಟ್ಸ್ಆ್ಯಪ್ ಬಳಕೆ ಮಾಡುವುದರಿಂದ ಫೋನ್ ಹ್ಯಾಕ್ ಆಗುವ ಸಾಧ್ಯತೆ ಎಂದ ಟೆಲಿಗ್ರಾಂ ಸ್ಥಾಪಕ

ವಾಟ್ಸ್‌ಆ್ಯಪ್‌ನಿಂದ ದೂರವಿರಿ: ಟೆಲಿಗ್ರಾಂ ಆ್ಯಪ್ ಸ್ಥಾಪಕರ ಎಚ್ಚರಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಟ್ಸ್‌ಆ್ಯ‍ಪ್ ಹೊರತುಪಡಿಸಿ, ಬೇರೆ ಯಾವುದೇ ಮೆಸೇಜಿಂಗ್ ಆ್ಯ‍ಪ್‌ಗಳನ್ನಾದರೂ ಬಳಸಿ ಎಂದು ಟೆಲಿಗ್ರಾಂ ಸ್ಥಾಪಕ ಪಾವೆಲ್ ಡುರೊವ್ ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ಹಲವು ಭದ್ರತಾ ದೋಷಗಳಿವೆ. ಅವುಗಳ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ಗೆ ವೈರಸ್ ಪ್ರವೇಶಿಸಿ, ಹ್ಯಾಕ್ ಆಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಕುರಿತು ಪಾವೆಲ್, ತಮ್ಮ ಟೆಲಿಗ್ರಾಂ ಚಾನೆಲ್ ಮೂಲಕ ಗುರುವಾರ ಹೇಳಿಕೆ ನೀಡಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ಕಳೆದ ವಾರ ಭದ್ರತಾ ಲೋಪವೊಂದು ಪತ್ತೆಯಾಗಿರುವುದನ್ನು ಕಂಪನಿಯೇ ಹೇಳಿತ್ತು ಎನ್ನುವುದನ್ನು ಪಾವೆಲ್ ಅವರು ಉಲ್ಲೇಖಿಸಿದ್ದಾರೆ. ಹ್ಯಾಕರ್ಸ್ ನಿಮ್ಮ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಳುಹಿಸುವ ಮೂಲಕ, ಸ್ಮಾರ್ಟ್‌ಫೋನ್ ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ಪ್ರತಿವರ್ಷವೂ ಭದ್ರತಾ ದೋಷ ಕಾಣಿಸಿಕೊಳ್ಳುತ್ತಿದೆ. ಇದರಿಂದ ಬಳಕೆದಾರರಿಗೆ ಮತ್ತು ಅವರ ಡಿವೈಸ್‌ಗೆ ಹಾನಿಯಾಗುವ ಸಾಧ್ಯತೆಯಿದೆ. ಈ ರೀತಿಯ ಲೋಪಗಳು, ಹ್ಯಾಕರ್‌ಗಳಿಗೆ ಸುಲಭದಲ್ಲಿ ಫೋನ್ ಹ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಪಾವೆಲ್ ತಿಳಿಸಿದ್ದಾರೆ.

ಈ ಮೊದಲು ಕೂಡ ಪಾವೆಲ್, ವಾಟ್ಸ್‌ಆ್ಯಪ್ ಸುರಕ್ಷಿತವಲ್ಲ, ಅದರ ಬಳಕೆಯಿಂದ ದೂರವಿರಿ ಎಂದು ಬಳಕೆದಾರರನ್ನು ಎಚ್ಚರಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು