ಬುಧವಾರ, ಫೆಬ್ರವರಿ 26, 2020
19 °C

ನಕ್ಕು ಸುಸ್ತಾಗ್ತೀರಿ | ದೆಹಲಿ ಚುನಾವಣೆ, ಸಮಿಕ್ಷೆಗಳ ಬಗ್ಗೆ ಮೀಮ್ ಲೋಕದ ಸ್ಪಂದನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದೆಹಲಿ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಶನಿವಾರ ಸಂಜೆ ಪ್ರಕಟವಾಗಿವೆ. ಬಹುತೇಕ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷಕ್ಕೆ (ಆಪ್) 50–61 ಸ್ಥಾನಗಳನ್ನು ಗಳಿಸಿ, ಜನಮನ್ನಣೆ ದಕ್ಕಿಸಿಕೊಳ್ಳುವ ಬಗ್ಗೆ ಭವಿಷ್ಯ ನುಡಿದಿವೆ. ಬಿಜೆಪಿಗೆ 10–16 ಸ್ಥಾನಗಳು ಸಿಗಬಹುದು, ಕಾಂಗ್ರೆಸ್‌ಗೆ ಮಾತ್ರ ಶೂನ್ಯ ನಿವಾರಣೆಯೇ ಸಾಧನೆಯಾದೀತು ಎಂಬುದು ಸಮೀಕ್ಷೆಗಳ ಭವಿಷ್ಯದ ಸಾರ.

ದೆಹಲಿ ವಿಧಾನಸಭೆಯ ಮತದಾನದ ದಿನವಾದ ಶನಿವಾರ ಮುಂಜಾನೆಯಿಂದಲೇ ಮೂರೂ ಪಕ್ಷಗಳು ಮತ್ತು ಅವುಗಳ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಚಟುವಟಿಕೆ ಹೆಚ್ಚಿಸಿದರು. #ExitPoll ಮತ್ತು #DelhiAssemblyPolls ಹ್ಯಾಷ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿದ್ದವು. ಹಲವು ಬಾಲಿವುಡ್ ಚಿತ್ರಗಳ ಸಂಭಾಷಣೆಯ ತುಣುಕುಗಳಲ್ಲಿ ಬರುವ ‘ಆಪ್’ (ನೀವು) ಸಂಭಾಷಣೆಯನ್ನು ಆಮ್ ಆದ್ಮಿ ಪಕ್ಷ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದು ಎದ್ದು ಕಂಡ ಅಂಶ.

ದೆಹಲಿ ಚುನಾವಣೆಯಲ್ಲಿ ಬಿಜೆಪಿ–ಆಪ್ ನಡುವಣ ನೇರ ಜಿದ್ದಾಜಿದ್ದಿ ಹಲವು ಕಾರಣಗಳಿಂದಾಗಿ ದೇಶದ ಗಮನವನ್ನೂ ಸೆಳೆದಿತ್ತು. ‘ಯಾರು ಗೆದ್ದರು ಏನು’ ಎಂಬ ವ್ಯಾಖ್ಯಾನದಿಂದ ಹಿಡಿದು, ಈ ಚುನಾವಣೆ ಕೊಡುವ ಸಂದೇಶಗಳ ಬಗ್ಗೆಯೂ ವಿಶ್ಲೇಷಣೆಗಳು ಚಾಲ್ತಿಗೆ ಬಂದಿದ್ದವು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೀಮ್‌ ಲೋಕದ ವಿಹಾರಿಗಳು ಇಂಥ ಘನಂದಾರಿ ಲೆಕ್ಕಾಚಾರಗಳನ್ನು ಬದಿಗಿಟ್ಟು ಹಾಸ್ಯದ ರಸಾಯನ ಉಣಬಡಿಸುತ್ತಿದ್ದಾರೆ. ಅಂಥ ಮೀಮ್‌ಗಳ ಲೋಕದಲ್ಲಿ ಒಂದು ಸುತ್ತು ಹಾಕಿಬರೋಣ ಬನ್ನಿ.

ಮೀಮ್ ಲೋಕದ ಝಲಕ್ ಇಲ್ಲಿದೆ...

 

 

 

 

 

 

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು