ಮಂಗಳವಾರ, ಸೆಪ್ಟೆಂಬರ್ 21, 2021
22 °C

ನಾವು ಒಂದು ತಂಡಕ್ಕಿಂತ ಮಿಗಿಲು: ಟ್ವಿಟರ್‌ ಇಂಡಿಯಾಗೆ ಮನೀಶ್‌ ಮಹೇಶ್ವರಿ ವಿದಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮನೀಶ್‌ ಮಹೇಶ್ವರಿಗೆ ಅಮೆರಿಕದಲ್ಲಿ ಉನ್ನತ ಹುದ್ದೆಯ ಜವಾಬ್ದಾರಿಯನ್ನು ಟ್ವಿಟರ್‌ ನೀಡಿದೆ.

ಆ ಹಿನ್ನೆಲೆಯಲ್ಲಿ ಮನೀಶ್‌ ಅವರು ತಮ್ಮ ವಿದಾಯದ ಸಂದೇಶಗಳನ್ನು ಭಾನುವಾರ ಟ್ವೀಟ್‌ ಮಾಡಿದ್ದಾರೆ.

'ಟ್ವಿಟರ್‌ ಇಂಡಿಯಾದಲ್ಲಿನ ನನ್ನ ಜವಾಬ್ದಾರಿ ಕೊನೆಗೊಳ್ಳುತ್ತಿದೆ. ಈ ಸಮಯದಲ್ಲಿ ನನ್ನ ತಂಡಕ್ಕೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಸಮಾಧಾನವಾಗುತ್ತಿಲ್ಲ. ಇಲ್ಲಿ ಪದಗಳು ವಿಫಲವಾಗುತ್ತಿವೆ. ಅಸಾಧಾರಣ ಸವಾಲಿನ ಸಮಯದಲ್ಲಿ ನೀವು ನನ್ನ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದ್ದೀರಿ' ಎಂದು ಹೇಳುವ ಮೂಲಕ ತಂಡದ ಚಿತ್ರವನ್ನು ಮನೀಶ್‌ ಟ್ವೀಟ್ ಮಾಡಿದ್ದಾರೆ.

'ಈ ಸಂಕಷ್ಟದ ಸಮಯದಲ್ಲಿ ಸವಾಲನ್ನು ಎದುರಿಸಿ ಹೇಗೆ ಕೆಲಸ ಮಾಡಬೇಕೆಂಬುದನ್ನು ನಿಮ್ಮಿಂದ ನಾನು ಕಲಿತಿದ್ದೇನೆ. ನಾವು ಒಂದು ತಂಡಕ್ಕಿಂತ ಮಿಗಿಲಾಗಿದ್ದೇವೆ. ನಾವು ಒಂದು ಕುಟುಂಬವಾಗಿದ್ದೇವೆ' ಎಂದು ಮನೀಶ್‌ ಟ್ವೀಟಿಸಿದ್ದಾರೆ.

ವೃದ್ಧನ ಮೇಲಿನ ಹಲ್ಲೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆದ ಪ್ರಕರಣದಲ್ಲಿ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನಿಶ್ ಮಹೇಶ್ವರಿಗೆ ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ನೋಟಿಸ್‌ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು