ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್ ಖಾತೆಗಳಿಗೆ ನಿರ್ಬಂಧ

ವಾಟ್ಸ್‌ಆ್ಯಪ್ ಕಳೆದ ಜುಲೈನಲ್ಲಿ 23.8 ಲಕ್ಷ ಖಾತೆ ಬ್ಯಾನ್
Last Updated 1 ಸೆಪ್ಟೆಂಬರ್ 2022, 16:29 IST
ಅಕ್ಷರ ಗಾತ್ರ

ನವದೆಹಲಿ: ನಿಯಮಾವಳಿ ಉಲ್ಲಂಘಿಸಿದ ಮತ್ತು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಾರಣಕ್ಕೆ ದೇಶದಲ್ಲಿ ಕಳೆದ ಜುಲೈನಲ್ಲಿ 23.87 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.

ಸರ್ಕಾರದ ವಿವಿಧ ಇಲಾಖೆಗಳು ಮತ್ತು ವಾಟ್ಸ್‌ಆ್ಯಪ್ ನಿಯಮಾವಳಿ, ಸಾಮಾಜಿಕ ತಾಣಗಳ ಬಳಕೆಯ ಮಿತಿ ಮತ್ತು ನಿರ್ಬಂಧವನ್ನು ಮೀರಿ ಕಾರ್ಯನಿರ್ವಹಿಸಿದ ಖಾತೆಗಳ ವಿರುದ್ಧ ಬಂದ ದೂರಿನಂತೆ ವಾಟ್ಸ್‌ಆ್ಯಪ್ ಕ್ರಮ ಕೈಗೊಂಡಿದೆ.

ಜೂನ್ ತಿಂಗಳಲ್ಲಿ 22 ಲಕ್ಷ, ಮೇ ತಿಂಗಳಿನಲ್ಲಿ 19 ಲಕ್ಷ, ಏಪ್ರಿಲ್‌ನಲ್ಲಿ 16 ಲಕ್ಷ ಮತ್ತು ಮಾರ್ಚ್‌ನಲ್ಲಿ 18.05 ಲಕ್ಷ ಖಾತೆಗಳನ್ನು ವಾಟ್ಸ್‌ಆ್ಯಪ್ ನಿರ್ಬಂಧಿಸಿತ್ತು.

ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಸೇವಾದಾರ ಕಂಪನಿಗಳು, ಪ್ರತಿ ತಿಂಗಳು ವರದಿ ನೀಡುವುದು ಹೊಸ ಮಾಹಿತಿ ಮತ್ತು ತಂತ್ರಜ್ಞಾನ ನಿಯಮದ ಪ್ರಕಾರ ಕಡ್ಡಾಯವಾಗಿದೆ. ಜತೆಗೆ, ದೂರು ಬಂದಿರುವ ಖಾತೆಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT