ಶುಕ್ರವಾರ, ಮಾರ್ಚ್ 31, 2023
29 °C

ಫೋಟೊ, ವಿಡಿಯೋ ಅಟೋ ಡಿಲೀಟ್ : ವಾಟ್ಸ್ಆ್ಯಪ್‌ನಲ್ಲಿ ಹೊಸ ವೈಶಿಷ್ಟ್ಯ ಪರಿಶೀಲನೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH Live

ಬೆಂಗಳೂರು: ವಾಟ್ಸ್ಆ್ಯಪ್ ಮೂಲಕ ಕಳುಹಿಸಲಾಗುವ ಫೋಟೊ ಮತ್ತು ವಿಡಿಯೋಗಳನ್ನು ನೋಡಿದ ಬಳಿಕ ಸ್ವಯಂ ಆಗಿ ಡಿಲೀಟ್ ಆಗುವ ವಿಶೇಷ ಫೀಚರ್ ಅನ್ನು ಪರಿಶೀಲಿಸಲಾಗುತ್ತಿದೆ.

ವಾಟ್ಸ್ಆ್ಯಪ್‌ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ‘ವ್ಯೂ ಒನ್ಸ್’ ಎನ್ನುವ ಆಯ್ಕೆ ಪರಿಚಯಿಸಲಾಗಿದ್ದು, ಬಳಕೆದಾರರು ಕಳುಹಿಸುವ ಫೋಟೊ ಮತ್ತು ವಿಡಿಯೊಗಳನ್ನು ಸ್ವೀಕರಿಸಿದವರು ಅದನ್ನು ವೀಕ್ಷಿಸಿದ ಬಳಿಕ, ತಾನಾಗಿಯೇ ಅಳಿಸಿ ಹೋಗಲಿದೆ.

ಈಗಾಗಲೇ ವ್ಯೂ ಒನ್ಸ್ ಆಯ್ಕೆ ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ಬಳಕೆಯಲ್ಲಿದೆ. ಅದೇ ಮಾದರಿಯಲ್ಲಿ ವಾಟ್ಸ್ಆ್ಯಪ್ ಕೂಡ ಹೊಸ ಫೀಚರ್ ಬಿಡುಗಡೆ ಮಾಡಲು ಮುಂದಾಗಿದೆ.

ವಾಟ್ಸ್ಆ್ಯಪ್ ಹೊಸ ಫೀಚರ್ ಮತ್ತು ಅಪ್‌ಡೇಟ್‌ಗಳ ಕುರಿತು ಮಾಹಿತಿ ನೀಡುವ ‘ವಾಬೀಟಾಇನ್ಫೋ’ ಹೊಸ ಆಯ್ಕೆ ಕುರಿತು ಮಾಹಿತಿ ನೀಡಿದ್ದು, ಆಂಡ್ರಾಯ್ಡ್ ಬೀಟಾ ಆವೃತ್ತಿ 2.21.14.3 ಯಲ್ಲಿ ಹೊಸ ಫೀಚರ್ ಒದಗಿಸಲಾಗಿದೆ.

ಹೊಸ ಫೀಚರ್ ಎಲ್ಲ ಬಳಕೆದಾರರಿಗೆ ಯಾವಾಗ ದೊರೆಯಲಿದೆ ಎನ್ನುವ ಕುರಿತು ವಾಟ್ಸ್ಆ್ಯಪ್ ವಿವರ ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು