ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಿಗೂಢವಾಗಿ ಸಾಯುವುದಾದರೆ...: ಬಿರುಗಾಳಿ ಎಬ್ಬಿಸಿದ ಎಲಾನ್‌ ಮಸ್ಕ್‌ ಟ್ವೀಟ್‌

Last Updated 10 ಮೇ 2022, 2:02 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ‘ನಾನು ನಿಗೂಢ ಸನ್ನಿವೇಶದಲ್ಲಿ ಸಾಯುವುದಿದ್ದಲ್ಲಿ ....’ ಎಂದು ವಿಶ್ವದ ಆಗರ್ಭ ಶ್ರೀಮಂತ, ಇಲಾನ್‌ ಮಸ್ಕ್‌ ಮಾಡಿರುವ ಟ್ವೀಟ್‌ವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಅಮೆರಿಕದ ಎಲೆಕ್ಟ್ರಿಕ್‌ ಕಾರು ಟೆಸ್ಲಾ ಮತ್ತು ಬಾಹ್ಯಾಕಾಶ ಕಂಪನಿ ಸ್ಪೇಸ್‌ಎಕ್ಸ್‌ನ ಸಿಇಒ, 50ರ ಹರೆಯದ ಇಲಾನ್‌ ಮಸ್ಕ್‌ ಕಳೆದ ತಿಂಗಳು ₹3.34 ಲಕ್ಷ ಕೋಟಿಗೆ ಟ್ವಿಟರ್‌ ಅನ್ನು ಖರೀದಿಸಿದ್ದಾರೆ.ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕದ ಪ್ರಕಾರ, ಮಸ್ಕ್ ಅವರು ₹20.80 ಲಕ್ಷ ಕೋಟಿ ಮೌಲ್ಯದ ಆಸ್ತಿ ಒಡೆಯ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ.

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಇಲಾನ್‌ ಮಸ್ಕ್‌, ಸದ್ಯ ಟ್ವಿಟರ್‌ನಲ್ಲಿ ‘ನಾನು ನಿಗೂಢ ಸನ್ನಿವೇಶಗಳಲ್ಲಿ ಸಾಯುವುದಿದ್ದರೆ ಅದು ತಿಳಿದಿರುವುದು ಒಳ್ಳೆಯದು’ ಎಂದು ನೀಡಿರುವ ಹೇಳಿಕೆ ಈಗ ಹಲವು ಆಯಾಮಗಳ ಚರ್ಚೆ ಹುಟ್ಟುಹಾಕಿದೆ.

ಇಲಾನ್‌ ಮಸ್ಕ್‌ ಅವರ ತಾಯಿ, ಮಗನ ಈ ಟ್ವೀಟ್‌ಗೆ ‘ಇದು ತಮಾಶೆಯಲ್ಲ’ ಎಂದು ಟ್ವೀಟ್‌ನಲ್ಲಿಪ್ರತಿಕ್ರಿಯಿಸಿದ್ದಾರೆ. ಇಲಾನ್‌ ಮಸ್ಕ್‌ ತಕ್ಷಣವೇ, ‘ಕ್ಷಮಿಸಿ! ನಾನು ಬದುಕಿರಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ’ ಎಂದು ಟ್ವೀಟ್‌ನಲ್ಲಿ ಉತ್ತರಿಸಿದ್ದಾರೆ.

ತಮ್ಮ ಈ ಟ್ವೀಟ್‌ ಹೇಳಿಕೆ ಬಗ್ಗೆ ನಿರ್ದಿಷ್ಟ ಕಾರಣ ಮತ್ತು ವಿವರಗಳನ್ನು ಇಲಾನ್‌ ನೀಡಿಲ್ಲ.

ಟ್ವಿಟರ್‌ನಲ್ಲಿ ಅವರು ಹಂಚಿಕೊಂಡಿರುವ ಹೇಳಿಕೆಯ ಸಮಯ, ಸಂದರ್ಭ ಹಾಗೂ ಸ್ವರೂಪವು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT