ನವದೆಹಲಿ: ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ತಾಣವಾದ ಯೂಟ್ಯೂಬ್ನ ಭಾರತ ವಲಯದ ವ್ಯವಸ್ಥಾಪಕ ನಿರ್ದೇಶಕಿಯಾಗಿ (ಎಂ.ಡಿ) ಗುಂಜನ್ ಸೋನಿ ನೇಮಕವಾಗಿದ್ದಾರೆ.

ಗುಂಜನ್ ಸೋನಿ ಅವರು ಈ ಮೊದಲು ಸಿಂಗಪುರ ಮೂಲದ ಇ–ಕಾಮರ್ಸ್ ತಾಣವಾದ ZALORAದ ಸಿಇಒ ಆಗಿದ್ದರು. ಅಲ್ಲದೇ ಮಿಂತ್ರಾ, ಸ್ಟಾರ್ ಇಂಡಿಯಾದ ಉನ್ನತ ಹುದ್ದೆಗಳಲ್ಲೂ ಕೆಲಸ ಮಾಡಿದ್ದರು.

ಸೋನಿ ಅವರು ಡಿಜಿಟಲ್ ಮಾರ್ಕೆಟಿಂಗ್, ಮೀಡಿಯಾ ಮಾರ್ಕೆಟಿಂಗ್ ಸೇರಿದಂತೆ ಇ–ಕಾಮರ್ಸ್ ವ್ಯವಹಾರದಲ್ಲಿ ಪರಿಣಿತರಾಗಿದ್ದಾರೆ.

ತಮ್ಮ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿರುವ ಗುಂಜನ್ ಸೋನಿ ಅವರು, ಭಾರತದಲ್ಲಿ ಯೂಟ್ಯೂಬ್, ಕಂಟೆಂಟ್ ಕ್ರಿಯೇಟರ್ಗಳ ಮತ್ತು ಸಮುದಾಯಗಳ ನಡುವೆ ದೊಡ್ಡ ಕ್ರಾಂತಿಯನ್ನೇ ಮಾಡಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.