ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯುಸಿನೆಸ್‌ ಮೆಸೇಜಿಂಗ್‌, ವಾಟ್ಸ್‌ಆ್ಯಪ್‌ಗೆ ಮೆಟಾ ಆದ್ಯತೆ

Published 24 ಸೆಪ್ಟೆಂಬರ್ 2023, 13:56 IST
Last Updated 24 ಸೆಪ್ಟೆಂಬರ್ 2023, 13:56 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬ್ಯುಸಿನೆಸ್‌ ಮೆಸೇಜಿಂಗ್‌ (ವ್ಯಾಪಾರ ಸಂಬಂಧಿ ಸಂವಹನ) ಮತ್ತು ವಾಟ್ಸ್‌ಆ್ಯಪ್‌ ಭಾರತದಲ್ಲಿ ಮೆಟಾದ ಮಂದಿನ ಪ್ರಗತಿಯ ಎಂಜಿನ್‌ ಮತ್ತು ಪ್ರಮುಖ ಆದ್ಯತೆ ಎಂದು ಮೆಟಾ ಇಂಡಿಯಾದ ಉಪಾಧ್ಯಕ್ಷೆ ಸಂಧ್ಯಾ ದೇವನಾಥನ್‌ ಹೇಳಿದ್ದಾರೆ.

ಹೆಚ್ಚು ಹೆಚ್ಚು ಉದ್ಯಮ ಸಂಸ್ಥೆಗಳು ಡಿಜಿಟಲೀಕರಣಗೊಳ್ಳುತ್ತಿವೆ ಮತ್ತು ಪರಿವರ್ತನೆ ಹೊಂದುತ್ತಿವೆ. ಹಾಗಾಗಿ, ಇಲ್ಲಿ ಅವಕಾಶಗಳು ಹೆಚ್ಚಾಗಿವೆ. ಬ್ಯಾಂಕಿಂಗ್‌, ಇ–ಕಾಮರ್ಸ್‌, ಗೇಮಿಂಗ್‌ ಮತ್ತು ಸಣ್ಣ ವ್ಯಾಪಾರ ಕ್ಷೇತ್ರಗಳು ಹೊಸ ಗ್ರಾಹಕರನ್ನು ತಲುಪಲು ವಾಟ್ಸ್‌ಆ್ಯಪ್‌ ಅನ್ನು ಬಳಸುತ್ತಿವೆ ಮತ್ತು ನೂತನ ದಾರಿಗಳನ್ನು ಕಂಡುಕೊಳ್ಳುತ್ತಿವೆ. ಬಿಲ್‌ ಪಾವತಿಯಿಂದ ಹಿಡಿದು ಮೆಟ್ರೊ ರೈಲು ಟಿಕೆಟ್‌ವರೆಗೆ ಎಲ್ಲದಕ್ಕೂ ಹೊಸ ಹೊಸ ವಿಧಾನಗಳನ್ನು ಬಳಸಲಾಗುತ್ತಿದೆ. ಬ್ಯಾಂಕುಗಳು ಕೂಡ ಸ್ಟೇಟ್‌ಮೆಂಟ್‌ಗಳನ್ನು ಕಳುಹಿಸಲು ವಾಟ್ಸ್‌ಆ್ಯಪ್‌ ಬಳಸುತ್ತಿವೆ ಎಂದು ಸಂಧ್ಯಾ ಅವರು ವಿವರಿಸಿದ್ದಾರೆ. 

ಲಭ್ಯವಿರುವ ಅಂಕಿಸಂಖ್ಯೆ ‍ಪ್ರಕಾರ, ಭಾರತದಲ್ಲಿ ಫೇಸ್‌ಬುಕ್‌ನ 44 ಕೋಟಿ ಬಳಕೆದಾರರಿದ್ದಾರೆ. ಜಾಗತಿಕ ಮಟ್ಟದಲ್ಲಿ 20 ಕೋಟಿ ವ್ಯಾಪಾರ ಸಂಸ್ಥೆಗಳು ತಮ್ಮ ವಹಿವಾಟಿಗಾಗಿ ವಾಟ್ಸ್‌ಆ್ಯಪ್‌ ಅನ್ನು ಬಳಸುತ್ತಿವೆ. ಭಾರತದಲ್ಲಿ ಅಂಕಿ ಅಂಶಗಳು ಲಭ್ಯವಿಲ್ಲ. ಆದರೆ, ಭಾರಿ ದೊಡ್ಡ ಸಂಖ್ಯೆಯಲ್ಲಿಯೇ ಬಳಕೆದಾರರು ಇದ್ದಾರೆ ಎಂದು ಅವರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT