ಕೊರೊನಾ ವೈರಸ್ ಹರಡುವುದಕ್ಕಿಂತಲೂ ವೇಗವಾಗಿ ಈ ಸಮಯದಲ್ಲಿ ಸುಳ್ಳು ಸುದ್ದಿಗಳು, ಫೇಕ್ ಸಂದೇಶಗಳೇ ಹರಿದಾಡುತ್ತಿವೆ ಮತ್ತು ಇದು ಈಗಾಗಲೇ ಕಂಗಾಲಾಗಿರುವ ಜನರಲ್ಲಿ ಆತಂಕವನ್ನೂ ಹೆಚ್ಚಿಸುತ್ತಿದೆ. ಈ ಕಾರಣಕ್ಕಾಗಿಯೇ ಅಧಿಕೃತ ಸುದ್ದಿಯ ಮೂಲಗಳನ್ನಷ್ಟೇ ಅವಲಂಬಿಸಬೇಕೆಂದು, ಸರ್ಕಾರಗಳು, ಜವಾಬ್ದಾರಿಯುತ ಮಾಧ್ಯಮಗಳು ಹೇಳುತ್ತಲೇ ಇವೆ.

ಇದಕ್ಕೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಪರಸ್ಪರ ಸಂವಹನ ನಡೆಸುವ ಅವಕಾಶವಿರುವ ಫೇಸ್‌ಬುಕ್ ಮೆಸೆಂಜರ್ ಬಾಟ್ ಖಾತೆಯೊಂದನ್ನು ತೆರೆದಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಕುರಿತು ನಿಖರವಾದ ಮಾಹಿತಿಯನ್ನು ಸಕಾಲಿಕವಾಗಿ ಅದು ನೀಡುತ್ತದೆ. ಮೆಸೆಂಜರ್‌ನಲ್ಲಿ 1300 ಕೋಟಿ ಸಕ್ರಿಯ (ಮಾಸಿಕ) ಬಳಕೆದಾರರಿದ್ದು, ಇದರ ಮೂಲಕ ಆರೋಗ್ಯದ ಕುರಿತು ಖಚಿತ ಮಾಹಿತಿಯನ್ನು ಪಸರಿಸಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ ತೆಗೆದುಕೊಂಡಿದೆ. ಮೆಸೆಂಜರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (World Health Organization) ಫೇಸ್‌ಬುಕ್ ಖಾತೆಯ ಮೆಸೆಂಜರ್ ಮೂಲಕ ಉಚಿತವಾಗಿ ಸಂವಹನ ನಡೆಸಿ ನಿಖರ ಮಾಹಿತಿ ಪಡೆದುಕೊಳ್ಳಬಹುದು. ನೀವು ಕೇಳಬೇಕೆಂದಿರುವ ಪ್ರಶ್ನೆಗಳ ಪಟ್ಟಿಯನ್ನು ಅದು ನಿಮ್ಮ ಮುಂದಿಡುತ್ತದೆ. ಸಂಬಂಧಪಟ್ಟ ಸಂಖ್ಯೆಯನ್ನು ನಮೂದಿಸಿದರೆ, ತತ್ಸಂಬಂಧಿತ ಮಾಹಿತಿಯು ಮೆಸೆಂಜರ್ ಮೂಲಕವೇ ದೊರೆಯುತ್ತದೆ. ಡೆಸ್ಕ್‌ಟಾಪ್ ಹಾಗೂ ಮೊಬೈಲ್ ಆ್ಯಪ್‌ನಲ್ಲಿಯೂ ಇದು ಕಾರ್ಯನಿರ್ವಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.