ವಾಟ್ಸ್ಆ್ಯಪ್ ಇಂದು ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿದೆ. ಆರಂಭದಲ್ಲಿ ಸಂದೇಶ ಕಳುಹಿಸಲು ಮಾತ್ರ ಬಳಕೆಯಾಗುತ್ತಿದ್ದ ವಾಟ್ಸ್ಆ್ಯಪ್ ಇಂದು ಹತ್ತಾರು ಹೊಸ ವೈಶಿಷ್ಟ್ಯಗಳೊಂದಿಗೆ ಎಲ್ಲರ ಮನಸ್ಸು ಗೆದ್ದಿದೆ. ಮೊಬೈಲ್ನಲ್ಲಿ ಯಾವ ಆ್ಯಪ್ ಇಲ್ಲದಿದ್ದರೂ ಪರವಾಗಿಲ್ಲ. ವಾಟ್ಸ್ಆ್ಯಪ್ ಇರಲೇಬೇಕು.

ಸಾಮಾನ್ಯವಾಗಿ ವಾಟ್ಸ್ಆ್ಯಪ್ನಲ್ಲಿ ಧ್ವನಿ ಮತ್ತು ವಿಡಿಯೊ ಕರೆ ಮಾಡಬಹುದಿತ್ತು. ಇದೀಗ ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಆ ಹೊಸ ವೈಶಿಷ್ಟ್ಯವೇನು? ಎಂಬ ಮಾಹಿತಿ ಇಲ್ಲಿದೆ.
.SIM ಆ್ಯಕ್ಟಿವ್ ಇದ್ದಾಗ ಮಾತ್ರ ವಾಟ್ಸ್ಆ್ಯಪ್: ಕೇಂದ್ರ ಸರ್ಕಾರ ಮಹತ್ವದ ಸೂಚನೆ.Whatsapp | ವಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್ ಹೊಣೆ ಏನು?.
ಏನಿದು ಹೊಸ ವೈಶಿಷ್ಟ್ಯ?

ವಾಟ್ಸ್ಆ್ಯಪ್ ಮೂಲಕ ಸಂಬಂಧಿಕರಿಗೆ, ಸ್ನೇಹಿತರಿಗೆ, ಕುಟುಂಬಸ್ಥರಿಗೆ ವಿಡಿಯೊ ಮತ್ತು ವಾಯ್ಸ್ ಕರೆಗಳನ್ನು ಮಾಡಬಹುದಿತ್ತು. ಇದು ಕೇವಲ ಆ್ಯಪ್ಗೆ ಮಾತ್ರ ಸಿಮೀತವಾಗಿತ್ತು. ಆದರೆ ಈಗ ಹೊಸ ವೈಶಿಷ್ಟ್ಯದಲ್ಲಿ ವೆಬ್ ವಾಟ್ಸ್ಆ್ಯಪ್ ಮೂಲಕವೂ ಧ್ವನಿ ಮತ್ತು ವಿಡಿಯೊ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು. ಇದು ಶೀಘ್ರದಲ್ಲೇ ಲೈವ್ ಆಗಲಿದೆ ಎಂದು WABetaInfo ತಿಳಿಸಿದೆ.

ವಾಟ್ಸ್ಆ್ಯಪ್ ವೆಬ್ನಲ್ಲಿ ಗುಂಪು ಕರೆಗಳು

ವಾಟ್ಸ್ಆ್ಯಪ್ನ ಹೊಸ ವೈಶಿಷ್ಟ್ಯದಲ್ಲಿ ಗುಂಪು ಕರೆಯನ್ನು ಅನುಮತಿಸಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ ಇದರಲ್ಲಿ 32 ಜನರು ಒಟ್ಟಿಗೆ ಭಾಗಿಯಾಗಬಹುದಾಗಿದೆ. ನಂತರದ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಬಹುದು. ಇತರರನ್ನು ಲಿಂಕ್ ಮೂಲಕ ಸೇರಿಸಿಕೊಳ್ಳಬಹುದು ಎಂದು WABetaInfo ತಿಳಿಸಿದೆ.

ಯುಎಇನಲ್ಲಿ ವಿಡಿಯೊ ಮತ್ತು ಧ್ವನಿ ಕರೆ ನಿಷೇಧ

ಪ್ರಸ್ತುತ ಯುಎಇನಲ್ಲಿ ಮೊಬೈಲ್, ಡೆಸ್ಕ್ಟಾಪ್ ಅಥವಾ ವೆಬ್ನಲ್ಲಿ ವಾಟ್ಸ್ಆ್ಯಪ್ ಮೂಲಕ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಅಲ್ಲಿನ ಕಾನೂನು ನಿಷೇಧಿಸಿದೆ. ಇಲ್ಲಿನ ದೂರಸಂಪರ್ಕ ಮತ್ತು ಡಿಜಿಟಲ್ ಸರ್ಕಾರಿ ನಿಯಂತ್ರಣ ಪ್ರಾಧಿಕಾರದ ಪ್ರೋಟೋಕಾಲ್ ಪ್ರಕಾರ ಪರವಾನಗಿ ಪಡೆದ ಅಥವಾ ಅನುಮೋದಿತ ಪೂರೈಕೆದಾರರು ಮಾತ್ರ ಇಂಟರ್ನೆಟ್ ಕರೆ ಸೇವೆಗಳನ್ನು ನೀಡಬಹುದು. ಆದರೆ ವಾಟ್ಸ್ಆ್ಯಪ್ ಈ ಪಟ್ಟಿಯಲ್ಲಿ ಇಲ್ಲ. ಆದ್ದರಿಂದ ಹೊಸ ವೈಶಿಷ್ಟ್ಯ ಇಲ್ಲಿ ಬಳಕೆಯಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.