ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಕಿರಿಕಿರಿ ತಪ್ಪಿಸಲು ಸುಲಭ ಸೂತ್ರ

Last Updated 7 ಆಗಸ್ಟ್ 2019, 7:52 IST
ಅಕ್ಷರ ಗಾತ್ರ

ಫೇಸ್‍ಬುಕ್ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಲು ಸುಲಭ ಆಗಿದ್ದರೂ ಕೆಲವೊಮ್ಮೆ ಅದರಷ್ಟು ಕಿರಿಕಿರಿ ಬೇರೆ ಯಾವುದೂ ಅಲ್ಲ ಎಂದೆನಿಸಿ ಬಿಡುತ್ತದೆ. ಬೆಳಗ್ಗೆ ಅದ್ಯಾರೋ ಕಳುಹಿಸಿದ ಗುಡ್ ಮಾರ್ನಿಂಗ್ ಸಂದೇಶ, ಊಟ ಆಯ್ತಾ? ತಿಂಡಿ ಆಯ್ತಾ ಎಂಬ ಸಂದೇಶಗಳೂ ಕಿರಿಕಿರಿಯನ್ನುಂಟು ಮಾಡುತ್ತಿರುತ್ತವೆ. ಈ ರೀತಿಯ ಸಂದೇಶ ಕಳುಹಿಸುವವರನ್ನು ಸ್ನೇಹಿತರ ಪಟ್ಟಿಯಿಂದ ದೂರ ಇಡಬಹುದು. ಆದರೆ ಬೇಡ ಎಂದೆನಿಸಿದರೆ ಅವರ ಸಂದೇಶವನ್ನು ಮ್ಯೂಟ್ ಮಾಡಿ.

ಮ್ಯೂಟ್ ಮಾಡುವುದು ಹೇಗೆ?

* ಮೆಸೆಂಜರ್ ಆ್ಯಪ್ ಓಪನ್ ಮಾಡಿ ನೀವು ಮ್ಯೂಟ್ ಮಾಡಬೇಕು ಎಂದು ಬಯಸುವ ವ್ಯಕ್ತಿಯ ಚಾಟ್ ಓಪನ್ ಮಾಡಿ.

* ಬಲ ಬದಿಯಲ್ಲಿ ಮೇಲೆ ಕಾಲ್, ವಿಡಿಯೊ ಆದನಂತರ ಇರುವ ಐಕಾನ್ ಕ್ಲಿಕ್ ಮಾಡಿ. ಅಲ್ಲಿ ಆ ವ್ಯಕ್ತಿಯ ಮೆಸೆಂಜರ್ ಪ್ರೊಫೈಲ್‍ನಲ್ಲಿ ಬಲಭಾಗದಲ್ಲಿ ಮ್ಯೂಟ್ ( ಬೆಲ್ ಐಕಾನ್) ಮೇಲೆ ಕ್ಲಿಕ್ ಮಾಡಿ. ಹೀಗೆ ಕ್ಲಿಕ್ ಮಾಡುವಾಗ Mute Notifications for this conversation ಎಂದು ಕಾಣಿಸುತ್ತದೆ. ಅಲ್ಲಿ ಕೆಳಗೆ ಎಷ್ಟು ಹೊತ್ತಿನವರೆಗೆ ಮ್ಯೂಟ್ ಮಾಡಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿದ ನಂತರ ಓಕೆ ಕ್ಲಿಕ್ ಮಾಡಿ. ಈಗ ನೀವು ಮ್ಯೂಟ್ ಮಾಡಿರುವ ವ್ಯಕ್ತಿ ಸಂದೇಶ ಕಳುಹಿಸಿದರೂ ಅದರ ನೋಟಿಫಿಕೇಶನ್ ನಿಮಗೆ ಬರಲ್ಲ. ಸಂದೇಶಗಳು ಇನ್‍ಬಾಕ್ಸ್ ನಲ್ಲಿ ಇರುತ್ತವೆ ಆದರೂ ಅದು ಕಿರಕಿರಿ ಅನಿಸಲ್ಲ.

* ಸಂದೇಶವನ್ನು ನೋಡುವುದೇ ಬೇಡ ಎನಿಸಿದರೆ ನಿರ್ಲಕ್ಷಿಸಿ ಕೆಲವರು ಸಿಕ್ಕಾಪಟ್ಟೆ ಸಂದೇಶ ಕಳಿಸಿ ಕಿರಿಕಿರಿ ಮಾಡುತ್ತಾರೆ. ಅವರ ಸಂದೇಶಕ್ಕೆ ಪ್ರತಿಕ್ರಿಯೆ ನೀಡಲು ಇಚ್ಚೆ ಇರುವುದಿಲ್ಲ. ಹಾಗಂತ ಅವರನ್ನು ಬ್ಲಾಕ್ ಮಾಡಬೇಕೆಂದಿಲ್ಲ, ಅವರ ಸಂದೇಶಗಳನ್ನು ಮಾತ್ರ ನಿರ್ಲಕ್ಷಿಸಿ.

ಹೀಗೆ ಮಾಡಿ

* ಮೆಸೆಂಜರ್ ಆ್ಯಪ್ ಮಾಡಿ, ಕಿರಿಕಿರಿ ಎಂದೆನಿಸುವ ಸಂದೇಶ ಕಳುಹಿಸುತ್ತಿರುವ ವ್ಯಕ್ತಿಯ ಚಾಟ್ ಓಪನ್ ಮಾಡಿ.

* ಅವರ ಮೆಸೆಂಜರ್ ಪ್ರೊಫೈಲ್ ಓಪನ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿದರೆ ಪ್ರೈವೆಸಿ ಆಪ್ಶನ್ ಇದೆ.

* ಅಲ್ಲಿ ನೋಟಿಫಿಕೇಶನ್ ಕೆಳಗೆ Ignore messages ಎಂಬ ಆಪ್ಶನ್ ಮುಂದೆ ಕ್ಲಿಕ್ ಮಾಡಿ.

* ಈ ಸಂಭಾಷಣೆಯನ್ನು ನಿರ್ಲಕ್ಷಿಸಬೇಕೇ? ಎಂಬ ನೋಟಿಫಿಕೇಶನ್ ಕಾಣಿಸಿಕೊಳ್ಳುತ್ತದೆ. Ignore ಕ್ಲಿಕ್ ಮಾಡಿ.

ಹೀಗೆ ಮಾಡಿದರೆ ಆ ವ್ಯಕ್ತಿಯ ಸಂದೇಶ ನಿಮ್ಮ ಇನ್‍ಬಾಕ್ಸ್ ಗೆ ಬರದೆ other messages ಫೋಲ್ಡರ್‌ಗೆ ಹೋಗುತ್ತದೆ. ಹಾಗಾಗಿ ನಿಮಗೆ ಆ ಸಂದೇಶಗಳನ್ನು ನೋಡುವ ಅವಕಾಶವೇ ಸಿಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT