ಶನಿವಾರ, ಆಗಸ್ಟ್ 13, 2022
27 °C

ಮತ್ತೆ ಕೈಕೊಟ್ಟ ಜಿ-ಮೇಲ್; ಎರಡೂವರೆ ತಾಸಿನ ಬಳಿಕ ಪುನಃಸ್ಥಾಪನೆ

ಡೆಕ್ಕನ್‌ ಹೆರಾಲ್ಡ್‌ Updated:

ಅಕ್ಷರ ಗಾತ್ರ : | |

ಸ್ಯಾನ್ ಫ್ರಾನ್ಸಿಸ್ಕೊ: ಸರ್ಚ್ ಎಂಜಿನ್ ದೈತ್ಯ ಗೂಗಲ್, ಮಗದೊಮ್ಮೆ ತೊಂದರೆಯನ್ನು ಎದುರಿಸಿದೆ. ಗೂಗಲ್‌ನ ಕ್ಲೌಡ್ ಹೋಸ್ಟಿಂಗ್ ಜಿ-ಮೇಲ್ ಸೇವೆಯಲ್ಲಿ ಮಂಗಳವಾರ ಅಡಚಣೆಯಾಗಿದೆ. ಸೋಮವಾರವೂ ಗೂಗಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಈ ಬಗ್ಗೆ ಬಳಕೆದಾರರು ಗೂಗಲ್‌ಗೆ ದೂರು ಸಲ್ಲಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿ ಗೂಗಲ್ ಜಿ-ಮೇಲ್ ಸೇವೆಗೆ ಅಡಚಣೆಯಾಗಿದ್ದು, ಸುಮಾರು ಎರಡೂವರೆ ತಾಸುಗಳ ಬಳಿಕ ಪುನಃಸ್ಥಾಪಿಸಲಾಗಿದೆ.

ಬಳಕೆದಾರರಿಗೆ ಎದುರಾಗಿರುವ ಅನಾನುಕೂಲತೆಗಾಗಿ ಕ್ಷಮಿಯಾಚಿಸುತ್ತೇವೆ. ನಿಮ್ಮ ತಾಳ್ಮೆ ಹಾಗೂ ನಿರಂತರ ಬೆಂಬಲಕ್ಕೆ ಧನ್ಯವಾದಗಳು ಎಂದು ಗೂಗಲ್ ಸ್ಟೇಟಸ್ ಡ್ಯಾಶ್‌ಬೋರ್ಡ್ ನೋಟಿಸ್‌ನಲ್ಲಿ ತಿಳಿಸಿದೆ.

ಸಿಸ್ಟಂ ವಿಶ್ವಾಸಾರ್ಹತೆಯು ಗೂಗಲ್‌ನಲ್ಲಿ ಮೊದಲ ಆದ್ಯತೆಯಾಗಿದೆ. ಹಾಗೆಯೇ ನಮ್ಮ ಸಿಸ್ಟಂಗಳನ್ನು ಉತ್ತಮಗೊಳಿಸಲು ನಿರಂತರ ಸುಧಾರಣೆಗಳನ್ನು ಮಾಡಲಾಗುತ್ತಿದೆ ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: 

ಹಾಗಿದ್ದರೂ ಎಷ್ಟು ಬಳಕೆದಾರರಿಗೆ ತೊಂದರೆ ಎದುರಾಗಿದೆ ಎಂಬುದರ ಬಗ್ಗೆ ವಿವರವನ್ನು ಗೂಗಲ್ ಬಹಿರಂಗಪಡಿಸಿಲ್ಲ. ಹಾಗೆಯೇ ಅಡಚಣೆಯ ಹಿಂದಿನ ನಿಖರ ಕಾರಣವನ್ನು ತಿಳಿಸಿಲ್ಲ.

ಸೋಮವಾರದಂದು ಗೂಗಲ್ ಸೇವೆಗಳಲ್ಲಿ ಭಾರಿ ಅಡಚಣೆಯಾಗಿತ್ತು. ಗೂಗಲ್ ಸರ್ಚ್ ಎಂಜಿನ್, ಜಿ-ಮೇಲ್, ಯೂಟ್ಯೂಬ್ ಸೇರಿದಂತೆ ಪ್ರಮುಖ ಸೇವೆಗಳಲ್ಲಿ ಬಳಕೆದಾರರಿಗೆ ತೊಂದರೆ ಎದುರಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು