ನವದೆಹಲಿ: ಸಮೀಪದ ಹೊಟೇಲ್, ರೆಸ್ಟೊರೆಂಟ್ಗಳು, ಸಿನಿಮಾ ಹಾಲ್ಗಳು, ಶಾಪಿಂಗ್ ಮಾಲ್ಗಳನ್ನು ತೋರಿಸುತ್ತಿದ್ದ ಗೂಗಲ್ ಈಗ ಹತ್ತಿರದ ಕೋವಿಡ್–19 ಪರೀಕ್ಷಿಸುವ ಕೇಂದ್ರಗಳನ್ನು ಸೂಚಿಸುತ್ತಿದೆ.

ಗೂಗಲ್ ಸರ್ಚ್, ಅಸಿಸ್ಟಂಟ್ ಹಾಗೂ ಮ್ಯಾಪ್ಸ್ ಬಳಕೆದಾರರಿಗೆ ಕೋವಿಡ್–19 ಪರೀಕ್ಷೆ ಕೇಂದ್ರಗಳನ್ನು ಸುಲಭವಾಗಿ ಹುಡುಕಲು ಅನುವು ಮಾಡಿಕೊಡುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಭಾರತ ಸರ್ಕಾರದ ಮೈಗೌ (MyGov) ವೆಬ್ಸೈಟ್ನೊಂದಿಗೆ ಕಾರ್ಯಾಚರಿಸುತ್ತಿದ್ದು, ಬಳಕೆದಾರರಿಗೆ ಅಧಿಕೃತ ಕೋವಿಡ್–19 ಪರೀಕ್ಷೆ ಪ್ರಯೋಗಾಲಯಗಳನ್ನು ಸೂಚಿಸುತ್ತಿರುವುದಾಗಿ ಗೂಗಲ್ ಹೇಳಿದೆ.

ಹೊಸ ಸೌಲಭ್ಯವು ಇಂಗ್ಲಿಷ್ ಜೊತೆಗೆ ಭಾರತದ ಎಂಟು ಭಾಷೆಗಳಲ್ಲಿ ಲಭ್ಯವಿದೆ. ಕನ್ನಡ, ಹಿಂದಿ, ಬೆಂಗಲಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಹಾಗೂ ಗುಜರಾತಿ ಭಾಷೆಗಳಲ್ಲಿ ಗೂಗಲ್ ಮಾಹಿತಿ ಸಿಗುತ್ತಿದೆ.

ಗೂಗಲ್ ಸರ್ಚ್ ಮತ್ತು ಗೂಗಲ್ ಅಸಿಸ್ಟಂಟ್ನಲ್ಲಿ ಕೊರೊನಾ ವೈರಸ್ ಸಂಬಂಧಿತ ಹುಡುಕಾಟಗಳಲ್ಲಿ (ಉದಾಹರಣೆಗೆ 'ಕೊರೊನಾ ವೈರಸ್ ಪರೀಕ್ಷೆ') ಬಳಕೆದಾರರಿಗೆ ಪರೀಕ್ಷೆ (Testing) ಟ್ಯಾಬ್ ಕಾಣಸಿಗುತ್ತದೆ. ಹುಡುಕಾಟದಿಂದ ತೆರೆದುಕೊಂಡ ಪುಟದಲ್ಲಿ ಸಮೀಪದ ಪರೀಕ್ಷೆ ಪ್ರಯೋಗಾಲಯಗಳ ಪಟ್ಟಿ ಹಾಗೂ ಸೇವೆ ಬಳಸುವುದಕ್ಕೂ ಮುನ್ನ ಅಗತ್ಯವಿರುವ ಮಾರ್ಗದರ್ಶನ ಮತ್ತು ಪ್ರಮುಖ ಮಾಹಿತಿಗಳು ಸಿಗುತ್ತವೆ.

ಪ್ರಸ್ತುತ ಗೂಗಲ್ ದೇಶದ 300 ನಗರಗಳಲ್ಲಿನ 700 ಪರೀಕ್ಷಾ ಕೇಂದ್ರಗಳನ್ನು ಸರ್ಚ್ ಹಾಗೂ ಮ್ಯಾಪ್ಸ್ನಲ್ಲಿ ಸೇರಿಸಿದೆ. ಶೀಘ್ರದಲ್ಲೇ ಇನ್ನಷ್ಟು ಕೇಂದ್ರಗಳು ಪಟ್ಟಿಗೆ ಸೇರಲಿವೆ ಎಂದು ಗೂಗಲ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.