ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಟ್ರಾನ್ಸ್‌ಲೇಟ್: ಫೋಟೊ ಕ್ಲಿಕ್ಕಿಸಿ ಅನುವಾದ ಮಾಡಿ

Last Updated 13 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬೇರೆ ಯಾವುದೇ ಭಾಷೆಗಳನ್ನು ನಮ್ಮ ಭಾಷೆಗೆ ಅನುವಾದ ಮಾಡುವಾಗ ನಿಘಂಟು ತೆರೆದು ನೋಡುವ ಬದಲು ನಾವು ಗೂಗಲ್ ಮೊರೆ ಹೋಗುತ್ತೇನೆ. ನಿರ್ದಿಷ್ಟ ಪದವನ್ನು ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ಟೈಪಿಸಿ, ಯಾವ ಭಾಷೆಗೆ ಬೇಕಾದರೂ ಆ ಪದ, ವಾಕ್ಯವನ್ನು ತರ್ಜುಮೆ ಮಾಡಬಹುದು.

ಗೂಗಲ್ ಟ್ರಾನ್ಸ್‌ಲೇಟ್ ಆ್ಯಪ್‌ನಲ್ಲಿಯೂ ನಾವು ಇದೇ ರೀತಿ ಅನುವಾದ ಮಾಡಬಹುದು. ಆ್ಯಪ್‌ ಬಳಕೆಯ ಮತ್ತೊಂದು ಉಪಯೋಗ ಎಂದರೆ ಯಾವುದೇ ಭಾಷೆಯ ಪುಟ ಅಥವಾ ಬರಹವನ್ನು ಸ್ಕ್ಯಾನ್ ಮಾಡಿ ಅದನ್ನು ನಮ್ಮ ಭಾಷೆಗೆ ಅನುವಾದ ಮಾಡಬಹುದು.

ಬಳಕೆ ಹೇಗೆ

ಅಂಡ್ರಾಯ್ಡ್ ಫೋನ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್‌ನಲ್ಲಿ ಗೂಗಲ್ ಟ್ರಾನ್ಸ್‌ಲೇಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಆ್ಯಪ್ ತೆರೆದ ಕೂಡಲೇ ನೀವು ಯಾವ ಭಾಷೆಯಿಂದ ಯಾವ ಭಾಷೆಗೆ ಅನುವಾದ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

ಉದಾ: ಇಂಗ್ಲಿಷ್‌ನಲ್ಲಿರುವ ಬರಹವೊಂದನ್ನು ಕನ್ನಡ ಭಾಷೆಗೆ ಅನುವಾದ ಮಾಡಬೇಕಿದ್ದರೆ English to Kannada ಆಯ್ಕೆ ಮಾಡಿಕೊಳ್ಳಿ.

ಈಗ ಅಲ್ಲಿ ನಿರ್ದಿಷ್ಟ ಪದವನ್ನು ಟೈಪಿಸಿ. ನೀವು ಪದವನ್ನು ಟೈಪಿಸುತ್ತಿದ್ದಂತೆ ಅದಕ್ಕೆ ಸಾಮ್ಯತೆ ಇರುವ ಅಥವಾ ಸಂಬಂಧಿಸಿದ ಪದಗಳ ಅರ್ಥ ಕೆಳಗೆ ಕಾಣಿಸುತ್ತದೆ. ನೀವು ಹೇಳಿರುವ ಪದದ ಅರ್ಥ, ಪರ್ಯಾಯ ಮತ್ತು ಪದ ಬಳಕೆಯ ವಾಕ್ಯವೂ ಇಂಗ್ಲಿಷ್‌ನಲ್ಲಿರುತ್ತದೆ ಇದೇ ರೀತಿ ನಿಮ್ಮ ಕೈ ಬರಹ, ಸಂಭಾಷಣೆ ಮತ್ತು ದನಿಯ ತರ್ಜುಮೆಗೂ ಇಲ್ಲಿ ಅವಕಾಶ ಇದೆ.

ಒಂದು ವೇಳೆ ನೀವು ಬೇರೆ ಊರಿಗೆ ಹೋದಾಗ ಅಲ್ಲಿ ಕಾಣಿಸುವ ಸೂಚನಾ ಫಲಕ ಅಥವಾ ಬೋರ್ಡ್‌ನಲ್ಲಿ ಬರೆದಿರುವುದು ಏನೆಂದು ತಿಳಿಯಲು ಇದೇ ಆ್ಯಪ್ ಸಹಾಯ ಮಾಡುತ್ತದೆ.

ಆ್ಯಪ್‌ನಲ್ಲಿ ಕ್ಯಾಮೆರಾ ಐಕಾನ್ ಕ್ಲಿಕ್ ಮಾಡಿ ನಿಮ್ಮ ಮುಂದಿರುವ ಚಿತ್ರ ಅಥವಾ ಫಲಕವನ್ನು ಸ್ಕ್ಯಾನ್ ಮಾಡಿ. ನೀವು ಕ್ಲಿಕ್ ಮಾಡಿರುವ ಫೋಟೊದಲ್ಲಿರುವ ನಿರ್ದಿಷ್ಟ ಪದದ ಅನುವಾದ ಬೇಕು ಅಂದರೆ ಆ ಪದವನ್ನು ಮಾತ್ರ ಆಯ್ಕೆ ಮಾಡಿದರೆ ಸಾಕು. ಇಡೀ ಪುಟದಲ್ಲಿರುವ ಬರಹ ಅನುವಾದ ಮಾಡಬೇಕೆಂದಿದ್ದರೆ Select All ಕ್ಲಿಕ್ ಮಾಡಿ.
ನೀವು ಕ್ಲಿಕ್ಕಿಸಿದ ಅಥವಾ ಫೋಟೊ ಗ್ಯಾಲರಿಯಲ್ಲಿರುವ ಫೋಟೊವನ್ನು Import ಮಾಡುವ ಮೂಲಕವೂ ಅದರಲ್ಲಿರುವ ಪದಗಳನ್ನು ನಿಮ್ಮ ಆಯ್ಕೆಯ ಭಾಷೆಗೆ ಅನುವಾದ ಮಾಡಿಕೊಳ್ಳಬಹುದು.

ಇದನ್ನೂ ಓದಿ:ತಂತ್ರೋಪನಿಷತ್ತು

ಗಮನಿಸಿ ಪದಗಳ ಅನುವಾದ ಪ್ರಕ್ರಿಯೆ ಆಫ್‌ಲೈನ್‌ನಲ್ಲಿಯೂ ಆಗುತ್ತದೆ. ಆದರೆ ಸ್ಕ್ಯಾನ್ ಮಾಡಿ ಬರಹಗಳನ್ನು ಅನುವಾದ ಮಾಡಲು ಆನ್‌ಲೈನ್‌ನಲ್ಲಿದ್ದರೆ ಮಾತ್ರ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT