ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ವಿಡಿಯೊ’ದಿಂದ ಆಡಿಯೊ ತೆಗೆಯುವುದು ಹೇಗೆ?

Last Updated 7 ಆಗಸ್ಟ್ 2019, 7:42 IST
ಅಕ್ಷರ ಗಾತ್ರ

ವಿಡಿಯೊದಿಂದ ಆಡಿಯೊ ತೆಗೆಯುವುದು ಹೇಗೆ?

ಯಾವುದೇ ವಿಡಿಯೊ ಇರಲಿ ಅದಕ್ಕೆ ಹೊಸ ಆಡಿಯೊ ಸೇರಿಸಿ ಎಡಿಟ್ ಮಾಡಬೇಕಾದರೆ ಅಥವಾ ಅನಗತ್ಯ ಆಡಿಯೊ ಇದ್ದಿದ್ದರೆ ಅದನ್ನು ವಿಡಿಯೊದಿಂದತೆಗೆಯಬೇಕಾಗುತ್ತದೆ. ಹೀಗೆ ವಿಡಿಯೊದಿಂದ ಆಡಿಯೊವನ್ನು ಮಾತ್ರ ತೆಗೆಯುವುದು (extract)ಮಾಡುವುದು ಹೇಗೆ ಎಂದು ನೋಡೋಣ

ಆ್ಯಂಡ್ರಾಯ್ಡ್

ಆ್ಯಂಡ್ರಾಯ್ಡ್ ಬಳಕೆದಾರರು ಆಗಿದ್ದರೆ Timbre ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ. ಆ್ಯಪ್ ಓಪನ್ ಮಾಡಿ ಸ್ಕ್ರಾಲ್ ಮಾಡಿದರೆ mute ಎಂಬ ಆಪ್ಶನ್ ಸಿಗುತ್ತದೆ. mute ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಗ್ಯಾಲರಿ ತೆರೆದುಕೊಂಡು, ನೀವು ಎಡಿಟ್ ಮಾಡಲು ಬಯಸುವ ವಿಡಿಯೊ ಆಯ್ಕೆ ಮಾಡಿಕೊಳ್ಳಿ. ವಿಡಿಯೊ ಆಯ್ಕೆಯಾದ ಕೂಡಲೇ Mute ಮತ್ತೊಮ್ಮೆ ಕ್ಲಿಕ್ಕಿಸಿ, ಹೀಗೆ ಮಾಡುವಾಗ ನಿಮ್ಮ ವಿಡಿಯೊ ಈಗ ಆಡಿಯೊ ರಹಿತ ಫೈಲ್ ಆಗಿ ಸೇವ್ ಆಗುತ್ತದೆ.

ವಿಂಡೋಸ್ವಿಂ

ಡೋಸ್ ಬಳಕೆದಾರರು ವಿಎಲ್‌ಸಿ ಮೀಡಿಯಾ ಪ್ಲೇಯರ್ (VLC media player) ಬಳಸಿ ವಿಡಿಯೊದಿಂದ ಆಡಿಯೊ ತೆಗೆಯಬಹುದು. ವಿಎಲ್‌ಸಿ ಮೀಡಿಯಾ ಪ್ಲೇಯರ್ ಓಪನ್ ಮಾಡಿ, Convert/save ಆಯ್ಕೆ ಮಾಡಿ. ಅಲ್ಲಿ ಪ್ಯಾನಲ್ ಪಾಪ್ ಅಪ್ ಕಾಣಿಸುತ್ತದೆ. ನೀವು ಎಡಿಟ್ ಮಾಡಬಯಸುವ ವಿಡಿಯೊ ಸೇರ್ಪಡೆ ಮಾಡಿ ಟೂಲ್ಸ್ ಕ್ಲಿಕ್ಕಿಸಿ, Audio Codec section ಗೆ ಹೋಗಿ ಅಲ್ಲಿ Audio ಅನ್‌ಚೆಕ್ ಮಾಡಿ ಫೈಲ್ ಸೇವ್ ಮಾಡಿ.

iOS

iOS ಬಳಕೆದಾರರು Video Mute ಎಂಬ ಆ್ಯಪ್ ಬಳಸಿ ಸುಲಭವಾಗಿ ಎಡಿಟ್ ಮಾಡಬಹುದು. iTunes ಸ್ಟೋರ್‌ನಿಂದ ಆ್ಯಪ್ ಇನ್‌ಸ್ಟಾಲ್ ಮಾಡಿ ಆ್ಯಪ್ ಓಪನ್ ಮಾಡಿ. ನೀವು ಎಡಿಟ್ ಮಾಡಬೇಕಾದ ವಿಡಿಯೊವನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ವಾಲ್ಯೂಮ್ ಸ್ಲೈಡರ್ ಕಾಣಿಸುತ್ತದೆ. ಅದನ್ನು zeroಗೆ ಇಳಿಸಿ export button ಕ್ಲಿಕ್ ಮಾಡಿ. ಈಗ ಆಡಿಯೊ ಇಲ್ಲದ ವಿಡಿಯೊ ಸೇವ್ ಆಗಿರುತ್ತದೆ.

ರಶ್ಮಿ. ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT