ಬುಧವಾರ, ಅಕ್ಟೋಬರ್ 20, 2021
24 °C

ಜಿಯೊ ನೆಟ್‌ವರ್ಕ್‌ನಲ್ಲಿ ವ್ಯತ್ಯಯ: ಟ್ವಿಟರ್‌ನಲ್ಲಿ ಸಾವಿರಾರು ಮಂದಿ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫೇಸ್‌ಬುಕ್ ಮತ್ತು ಅದರ ಸಾಮಾಜಿಕ ವೇದಿಕೆಗಳಾದ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯದ ವಿಷಯ ಭಾರೀ ಸುದ್ದಿಯಾಗಿತ್ತು. ಆ ಸಮಸ್ಯೆ ಬಗೆ ಹರಿದು ದಿನ ಕಳೆಯುವುದರೊಳಗೆ ಜಿಯೊ ನೆಟ್‌ವರ್ಕ್ ವ್ಯತ್ಯಯದ ಬಗ್ಗೆ ಸುದ್ದಿ ಕೇಳಿಬಂದಿದೆ.
 
ಕೆಲವು ಜನರು ತಮ್ಮ ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರೆ, ಇತರರು ಕಂಪನಿಯನ್ನು ಮತ್ತು ಅದರ ಚಂದಾದಾರರನ್ನು ಅಣಕಿಸುವ ತಮಾಷೆಯ ಮೀಮ್‌ಗಳನ್ನು ಹರಿಬಿಟ್ಟಿದ್ಧಾರೆ. 

ಮೆಕ್‌ಡೊನಾಲ್ಡ್ಸ್, ಟ್ವಿಟರ್ ಮತ್ತು ರಿಲಯನ್ಸ್ ಜಿಯೋದಂತಹ ಹಲವಾರು ಬ್ರಾಂಡ್‌ಗಳು ತಮ್ಮ ಸ್ಪರ್ಧಿ ಮಾರ್ಕ್ ಜುಕರ್‌ಬರ್ಗ್ ಒಡೆತನದ ಫೇಸ್‌ಬುಕ್ ವಿರುದ್ಧ ಟೀಕೆಗೈದಿದ್ದವು. ಇದೀಗ, ಅದೇ ಪರಿಸ್ಥಿತಿಯಲ್ಲಿ ಜಿಯೊ ಸಿಲುಕಿದೆ.

ಟ್ವಿಟರ್‌ನಲ್ಲಿ ಸಾವಿರಾರು ಜಿಯೊ ಬಳಕೆದಾರರು ಭಾರತದಲ್ಲಿ ದೂರವಾಣಿ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಿದ್ದಾರೆ.

ಬೆಂಗಳೂರು, ದೆಹಲಿ, ಮುಂಬೈ, ಇಂದೋರ್ ಸೇರಿದಂತೆ ಭಾರತದ ಹಲವು ನಗರಗಳು ಜಿಯೊ ಸೇವೆ ವ್ಯತ್ಯಯವಾಗಿರುವುದನ್ನು ಡೌನ್ ಡಿಟೆಕ್ಟರ್ ವೆಬ್‌ಸೈಟ್‌ನಲ್ಲಿ ತೋರಿಸಲಾಗಿದೆ.

ಬೆಳಿಗ್ಗೆ 9:30 ರ ಸುಮಾರಿಗೆ ನೆಟ್‌ವರ್ಕ್ ಸಮಸ್ಯೆ ಕಂಡುಬಂದಿದೆ ಎನ್ನಲಾಗಿದ್ದು, ಬಳಿಕ, ಪ್ರಮುಖ ನಗರಗಳಾದ್ಯಂತ ದೂರುಗಳು ಕೇಳಿಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು